ಮಾಹೆಯ ಹಾಸ್ಟೆಲ್‌ ವಿದ್ಯಾರ್ಥಿಗಳ ಕ್ಷೇಮಪಾಲನೆಗಾಗಿ ತರಬೇತಿ ಕಾರ್ಯಕ್ರಮ

| Published : Jun 16 2024, 01:48 AM IST

ಮಾಹೆಯ ಹಾಸ್ಟೆಲ್‌ ವಿದ್ಯಾರ್ಥಿಗಳ ಕ್ಷೇಮಪಾಲನೆಗಾಗಿ ತರಬೇತಿ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮಾಹೆಯ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷೆಯನ್ನು ಕಾಪಾಡುವಲ್ಲಿ ಮತ್ತು ತೊಂದರೆಯಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಕ್ಷೇಮಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಹಾಸ್ಟೆಲ್‌ನ ಉಸ್ತುವಾರಿಗಳನ್ನು ಜಾಗೃತಿಗೊಳಿಸುವಲ್ಲಿ ಈ ಕಾರ್ಯಕ್ರಮವು ಪ್ರಮುಖ ಹೆಜ್ಜೆಯಾಗಿದ್ದು, ಇದರಲ್ಲಿ ಒಟ್ಟು 250 ಮಂದಿ ಭಾಗವಹಿಸಿದ್ದರು.

ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ)ನ ವಿದ್ಯಾರ್ಥಿ ವ್ಯವಹಾರ (ಸ್ಟೂಡಂಟ್ಸ್‌ ಆಫೇರ್ಸ್‌) ವಿಭಾಗವು ‘ಅಪಾಯದಲ್ಲಿರುವ ಹಾಸ್ಟೆಲ್‌ ವಾಸಿಗಳನ್ನು ಗುರುತಿಸುವಲ್ಲಿ ಹಾಸ್ಟೆಲ್‌ನ ಪಾಲಕರನ್ನು ಸಜ್ಜುಗೊಳಿಸುವ’ ಕಾರ್ಯಕ್ರಮ ನಡೆಯಿತು.

ಮಾಹೆಯ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷೆಯನ್ನು ಕಾಪಾಡುವಲ್ಲಿ ಮತ್ತು ತೊಂದರೆಯಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಕ್ಷೇಮಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಹಾಸ್ಟೆಲ್‌ನ ಉಸ್ತುವಾರಿಗಳನ್ನು ಜಾಗೃತಿಗೊಳಿಸುವಲ್ಲಿ ಈ ಕಾರ್ಯಕ್ರಮವು ಪ್ರಮುಖ ಹೆಜ್ಜೆಯಾಗಿದ್ದು, ಇದರಲ್ಲಿ ಒಟ್ಟು 250 ಮಂದಿ ಭಾಗವಹಿಸಿದ್ದರು.

ಮಾಹೆಯ ಸಹ-ಉಪಕುಲಪತಿ ಡಾ. ನಾರಾಯಣ್‌ ಸಭಾಹಿತ್‌ ಕಾರ್ಯಕ್ರಮ ಉದ್ಘಾಟಿಸಿ, ಮಾಹೆಯು ವಿದ್ಯಾರ್ಥಿಗಳ ಕಲಿಕೆಗೆ ಆದ್ಯತೆ ನೀಡುವಂತೆಯೇ ಅವರ ಸುರಕ್ಷೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತದೆ. ಈ ನಿಟ್ಟಿನಲ್ಲಿ ಹಾಸ್ಟೆಲ್‌ನ ಉಸ್ತುವಾರಿಗಳನ್ನು ವಿದ್ಯಾರ್ಥಿಗಳ ಕ್ಷೇಮಪಾಲನೆಯ ಕುರಿತು ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದರು.ಮುಖ್ಯ ರಕ್ಷಣಾಧಿಕಾರಿ ಕ. ವಿಜಯ ಭಾಸ್ಕರ ರೆಡ್ಡಿ, ಅಪಾಯದಲ್ಲಿರುವ ವಿದ್ಯಾರ್ಥಿಗಳನ್ನು ಪಾರು ಮಾಡುವುದು ಅತ್ಯಂತ ಆವಶ್ಯಕ ಕ್ರಮವಾಗಿದೆ. ವಿದ್ಯಾರ್ಥಿನಿಲಯದಲ್ಲಿ ತಾವು ಕ್ಷೇಮವಾಗಿದ್ದೇವೆ ಎಂಬ ಭರವಸೆಯನ್ನು ಅವರಲ್ಲಿ ಮೂಡಿಸಬೇಕಾಗಿದೆ ಎಂದರು.ನ್ಯಾಯವಾದಿ ಲತಾ ಹೊಳ್ಳ ಮಾತನಾಡಿ, ದೌರ್ಜನ್ಯದಂಥ ವಿಷಯಗಳನ್ನು ಹಾಸ್ಟೆಲ್‌ನ ಪಾಲಕರು ಸರಿಯಾದ ಸಮಯಕ್ಕೆ ಅರಿತುಕೊಂಡು ಕ್ರಮಕೈಗೊಳ್ಳಬೆಕು ಎಂದರು.ವಿದ್ಯಾರ್ಥಿ ವ್ಯವಹಾರ ವಿಭಾಗದ ನಿರ್ದೇಶಕರಾದ ಡಾ. ಗೀತಾ ಮಯ್ಯ ಸ್ವಾಗತಿಸಿದರು. ವಿದ್ಯಾರ್ಥಿ ಆಪ್ತಸಲಹಾಕಾರ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ವಿದ್ಯಾರ್ಥಿ ಆಪ್ತಸಲಹಾಕಾರ ಡಾ. ರಾಯನ್‌ ಮಥಾಯಸ್‌ ವಂದಿಸಿದರು.