ಎಂಎಸ್‍ಎಂಇ ಉದ್ದಿಮೆದಾರರಿಗೆ ಒಂದು ದಿನದ ಅರಿವು ಕಾರ್ಯಾಗಾರ ಬುಧವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೇಂದ್ರ ಸರ್ಕಾರ ರೂಪಿಸಿರುವ ರೈಸಿಂಗ್ ಅಂಡ್ ಎಕ್ಸಲರೇಟಿಂಗ್ ಎಂಎಸ್‍ಎಂಇ ಫರ್‍ಫಾರ್ಮೆನ್ಸ್ (ರ್‍ಯಾಂಪ್) ರಡಿ ಜೀರೋ ಡಿಫೆಕ್ಟ್ ಆ್ಯಂಡ್ ಜೀರೋ ಇಫೆಕ್ಟ್ ಮತ್ತು ಎಲ್‍ಇಎಎನ್ ಯೋಜನೆ ಕುರಿತು ಕುಶಾಲನಗರದ ಪಾಳ್ಯಂ ಎಮರಾಲ್ಡ್ ಸಭಾಂಗಣದಲ್ಲಿ ಎಂಎಸ್‍ಎಂಇ ಉದ್ದಿಮೆದಾರರಿಗೆ ಒಂದು ದಿನದ ಅರಿವು ಕಾರ್ಯಾಗಾರ ಬುಧವಾರ ನಡೆಯಿತು.ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ (ಕೆಸಿಟಿಯು), ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್), ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕುಶಾಲನಗರ ಕೂಡ್ಲೂರು ಕೈಗಾರಿಕಾ ಪ್ರದೇಶದ ಉದ್ದಿಮೆದಾರರ ಸಂಘದ ಅಧ್ಯಕ್ಷ ಪ್ರವೀಣ್ ಎ.ಎನ್. ಉದ್ಘಾಟಿಸಿದರು. ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ಬೆಂಗಳೂರು ಟೆಕ್ಸಾಕ್ ಮುಖ್ಯ ಸಲಹೆಗಾರ ಹಾಗೂ ಸಿಇಒ ಸಿದ್ದರಾಜು ರ್‍ಯಾಂಪ್ ಯೋಜನೆಯ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ. ಹನುಮಂತರಾಯ, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಗಂಗಾಧರ್ ನಾಯಕ್ ಪಿ., ಕೆ.ಎಸ್.ಎಫ್.ಸಿ, ಅಧಿಕಾರಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಸಿ.ಎನ್.ರಘು ಉಪಸ್ಥಿತರಿದ್ದರು. ಝೀರೋ ಡಿಫೆಕ್ಟ್ ಆ್ಯಂಡ್ ಝೀರೋ ಇಫೆಕ್ಟ್ ಮತ್ತು ಎಲ್‍ಇಎಎನ್ ಯೋಜನೆಯ ಕಾರ್ಯಾಗಾರದ ಬಗ್ಗೆ ಮಾನವ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಕ್ರಿಯಟಿವ್ ಇಂಪೆಕ್ಸ್ ಶ್ರೀಕಾಂತ್ ಬಿ. ತಾಂತ್ರಿಕ ಉಪನ್ಯಾಸ ನೀಡಿದರು.
