ಸಕಲೇಶಪುರ - ಬಾಳ್ಳುಪೇಟೆ ನಡುವೆ ಭೂಕುಸಿತ ಕಾರಣದಿಂದ ಈ ಮಾರ್ಗದ ಹತ್ತು ರೈಲುಗಳು ಸಂಚಾರ ರದ್ದು

| Published : Aug 12 2024, 01:35 AM IST / Updated: Aug 12 2024, 08:00 AM IST

ಸಕಲೇಶಪುರ - ಬಾಳ್ಳುಪೇಟೆ ನಡುವೆ ಭೂಕುಸಿತ ಕಾರಣದಿಂದ ಈ ಮಾರ್ಗದ ಹತ್ತು ರೈಲುಗಳು ಸಂಚಾರ ರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಸಕಲೇಶಪುರ - ಬಾಳ್ಳುಪೇಟೆ ನಡುವೆ ಭೂಕುಸಿತ ಕಾರಣದಿಂದ ಈ ಮಾರ್ಗದ ಹತ್ತು ರೈಲುಗಳು ಸಂಚಾರ ರದ್ದಾಗಿವೆ.

 ಬೆಂಗಳೂರು :  ಸಕಲೇಶಪುರ - ಬಾಳ್ಳುಪೇಟೆ ನಡುವೆ ಭೂಕುಸಿತ ಕಾರಣದಿಂದ ಈ ಮಾರ್ಗದ ಹತ್ತು ರೈಲುಗಳು ಸಂಚಾರ ರದ್ದಾಗಿವೆ.

ಕೆಎಸ್‌ಆರ್‌ ಬೆಂಗಳೂರು-ಕಾರವಾರ ಎಕ್ಸಪ್ರೆಸ್‌ (16595) ರೈಲು, ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್‌ಪ್ರೆಸ್‌ (16585), ವಿಜಯಪುರ-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್ ಸ್ಪೆಷಲ್‌ ರೈಲು (07377) ಆ. 12,13ರಂದು ರದ್ದಾಗಿದೆ. ಕಾರವಾರ-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ (16596) ಆ. 13ರಂದು ರದ್ದಾಗಿದೆ. 

ಮಂಗಳೂರು ಸೆಂಟ್ರಲ್‌-ವಿಜಯಪುರ ಎಕ್ಸ್‌ಪ್ರೆಸ್ ಸ್ಪೆಷಲ್‌ ಆ.13,14ರಂದು ರದ್ದಾಗಿದೆ. ಕಾರವಾರ-ಯಶವಂತಪುರ (16516), ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ಆ.13ರಂದು ರದ್ದಾಗಿದೆ. ಕಣ್ಣೂರು-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌, ಕೆಎಸ್‌ಆರ್‌ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ (16511) ಆ.12,13ರಂದು ರದ್ದಾಗಿದೆ ಎಂದು ನೈಋತ್ಯ ರೈಲ್ವೇ ಪ್ರಕಟಣೆ ತಿಳಿಸಿದೆ.