ಸಾರಾಂಶ
ಬಿಳಿಯೂರು ನೇತ್ರಾವತಿ ಅಣೆಕಟ್ಟಿನ ಹಿನ್ನೀರು ಈ ಕಿಂಡಿ ಅಣೆಕಟ್ಟಿನ ವರೆಗೆ ಸಂಗ್ರಹಗೊಂಡಿದ್ದು, ಕಿಂಡಿ ಅಣೆಕಟ್ಟಿನೊಳಗೆ ಹರಿದು ಬಾರದ ಕಾರಣ ಪಂಪ್ ಮೂಲಕ ನೀರನ್ನು ಅಣೆಕಟ್ಟಿಗೆ ವರ್ಗಾಯಿಸಲಾಯಿತು.
ಉಪ್ಪಿನಂಗಡಿ: ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡುವ ಸಲುವಾಗಿ ೩೪ನೇ ನೆಕ್ಕಿಲಾಡಿಯ ಕುಮಾರಧಾರಾ ನದಿಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟಿನಲ್ಲಿ ಹೆಚ್ಚು ನೀರು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಕಿಂಡಿ ಅಣೆಕಟ್ಟಿನ ಮುಂಭಾಗದಲ್ಲಿ ಸಂಗ್ರಹವಾಗಿರುವ ಬಿಳಿಯೂರು ಅಣೆಕಟ್ಟಿನ ಹಿನ್ನೀರನ್ನು ಪಂಪ್ ಮೂಲಕ ಅಣೆಕಟ್ಟಿಗೆ ವರ್ಗಾಹಿಸಿ ಅಗತ್ಯ ನೀರನ್ನು ಸಂಗ್ರಹಿಸಿಡುವ ಪ್ರಯತ್ನ ಮಂಗಳವಾರ ನಡೆಯಿತು. ಈ ಬಾರಿ ಮಳೆ ಮರೆಯಾಗಿದ್ದು, ಕುಮಾರಧಾರಾ ನದಿಯಲ್ಲಿ ನಿರೀಕ್ಷಿತ ಮಟ್ಟದ ನೀರಿನ ಹರಿವು ಇಲ್ಲದ ಕಾರಣ ನೆಕ್ಕಿಲಾಡಿಯ ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತಿತ್ತು. ಈ ಮಧ್ಯೆ ಬಿಳಿಯೂರು ನೇತ್ರಾವತಿ ಅಣೆಕಟ್ಟಿನ ಹಿನ್ನೀರು ಈ ಕಿಂಡಿ ಅಣೆಕಟ್ಟಿನ ವರೆಗೆ ಸಂಗ್ರಹಗೊಂಡಿದ್ದು, ಕಿಂಡಿ ಅಣೆಕಟ್ಟಿನೊಳಗೆ ಹರಿದು ಬಾರದ ಕಾರಣ ಪಂಪ್ ಮೂಲಕ ನೀರನ್ನು ಅಣೆಕಟ್ಟಿಗೆ ವರ್ಗಾಯಿಸಲಾಯಿತು.