ಬ್ಯಾಡಗಿ: ಅನರ್ಹ ಫಲಾನುಭವಿಗಳಿಗೆ ಹಣ ವರ್ಗಾವಣೆ ತಹಸೀಲ್ದಾರ ಅಮಾನತು

| Published : Jan 11 2024, 01:30 AM IST / Updated: Jan 11 2024, 03:02 PM IST

ಬ್ಯಾಡಗಿ: ಅನರ್ಹ ಫಲಾನುಭವಿಗಳಿಗೆ ಹಣ ವರ್ಗಾವಣೆ ತಹಸೀಲ್ದಾರ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ಅನರ್ಹ ಫಲಾನುಭವಿಗಳಿಗೆ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡಗಿ ತಹಸೀಲ್ದಾರ ಆಗಿ ಸೇವೆ ಸಲ್ಲಿಸಿರುವ ಸದ್ಯ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಹಸೀಲ್ದಾರ ಆಗಿ ಕಾರ್ಯನಿರ್ವಹಿಸುತ್ತಿರುವ ಶರಣಮ್ಮ ಕಾರಿ ಅವರನ್ನು ಸೇವೆಯಿಂದ ಅಮಾ ನತ್ತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಅನರ್ಹ ಫಲಾನುಭವಿಗಳಿಗೆ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡಗಿ ತಹಸೀಲ್ದಾರ ಆಗಿ ಸೇವೆ ಸಲ್ಲಿಸಿರುವ ಸದ್ಯ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಹಸೀಲ್ದಾರ ಆಗಿ ಕಾರ್ಯನಿರ್ವಹಿಸುತ್ತಿರುವ ಶರಣಮ್ಮ ಕಾರಿ ಅವರನ್ನು ಸೇವೆಯಿಂದ ಅಮಾ ನತ್ತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

2019ರಲ್ಲಿ ಬೆಳೆಹಾನಿ ಪರಿಹಾರ ವಿತರಣೆಯ ₹8,57,338 ಗಳನ್ನು ಒಟ್ಟು 29 ಜನ ಅನರ್ಹ ಫಲಾನುಭವಿಗಳಿಗೆ ವರ್ಗಾವಣೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಳಿಸಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ. 

ಈ ಕುರಿತು ಅಂದಿನ ಅಪರ ಜಿಲ್ಲಾಧಿಕಾರಿ ಯೋಗೇಶ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಶರಣಮ್ಮ ಕಾರಿ ಸೇರಿದಂತೆ ಇತರರ ವಿರುದ್ಧ ದೂರು ಸಲ್ಲಿಸಿದ್ದರು. ಪೊಲೀಸರು 409, 420 ಐಪಿಸಿ ಸೆಕ್ಷನ್‌ನಡಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸ್ಥಳೀಯ ಪೊಲೀಸರು ತಹಸೀಲ್ದಾರ ಶರಣಮ್ಮ ಕಾರಿ ವಿರುದ್ಧ ಬ್ಯಾಡಗಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ (ಚಾರ್ಜಶೀಟ್) ಸಲ್ಲಿಸಿದ್ದರು. 

ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ಕೆಸಿಎಸ್‌ಆರ್) ಅಧಿನಿಯಮದಡಿ ಕರ್ತವ್ಯ ಲೋಪವೆಂದು ಪರಿಗಣಿಸಿ ತಹಸೀಲ್ದಾರ ಶರಣಮ್ಮ ಕಾರಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ.

ಅನ್ಯಕೋಮಿನ ಪುರುಷ, ಮಹಿಳೆ ಮೇಲೆ ದೌರ್ಜನ್ಯ, ಹಾನಗಲ್ಲಿನಲ್ಲಿ ನೈತಿಕ ಪೊಲೀಸ್‌ಗಿರಿ, ಇಬ್ಬರ ಬಂಧನ: ವಸತಿಗೃಹವೊಂದರಲ್ಲಿ ತಂಗಿದ್ದ ಅನ್ಯ ಕೋಮಿನ ಪುರುಷ ಹಾಗೂ ಮಹಿಳೆ ಮೇಲೆ ಮುಸ್ಲಿಂ ಯುವಕರು ದಾಳಿ ಮಾಡಿ ಹಿಗ್ಗಾ-ಮುಗ್ಗಾ ಥಳಿಸಿ ನೈತಿಕ ಪೊಲೀಸ್‌ಗಿರಿ ಮೆರೆದಿರುವ ಘಟನೆ ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್ ಬಳಿ ಜರುಗಿದೆ.

ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನಲ್ಲಿರುವ ಲಾಡ್ಜ್‌ನಲ್ಲಿ ಶಿರಸಿ ಮೂಲದ ಹಿಂದು ಪುರುಷ ಸೋಮಶೇಖರ ಹಾಗೂ ವಿವಾಹಿತ ಮುಸ್ಲಿಂ ಮಹಿಳೆ ಸೋಮವಾರ ಮಧ್ಯಾಹ್ನದ ವೇಳೆಗೆ ರೂಮ್‌ ಪಡೆದು ವಾಸವಾಗಿದ್ದರು. 

ಬುರ್ಕಾ ಹಾಕಿಕೊಂಡು ಅನ್ಯಕೋಮಿನ ಪುರುಷನ ಜತೆ ಲಾಡ್ಜ್‌ನಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯನ್ನು ಗಮನಿಸಿದ್ದ ಆಟೋ ಚಾಲಕನೊಬ್ಬ ಈ ಬಗ್ಗೆ ಮುಸ್ಲಿಂ ಸಮುದಾಯದ ಯುವಕರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಅರ್ಧಗಂಟೆಯಲ್ಲೇ ಜಮಾಯಿಸಿದ ಅಕ್ಕಿಆಲೂರಿನ ನಾಲ್ಕೈದು ಮುಸ್ಲಿಂ ಯುವಕರ ತಂಡ ಲಾಡ್ಜ್‌ನ ಕೊಠಡಿಗೆ ತೆರಳಿ ರೂಮ್‌ನ ಬಾಗಿಲು ತೆಗೆಸಿ ಇಬ್ಬರ ಮೇಲೂ ಹಲ್ಲೆ ನಡೆಸಿದೆ. 

ಅಲ್ಲದೇ ಮಹಿಳೆಯನ್ನು ಎಳೆದಾಡಿ ಬಟ್ಟೆ ಹರಿದು ಹೊಡೆದಿರುವ ವಿಡಿಯೂ ವೈರಲ್ ಆಗಿದೆ.ಘಟನೆ ಜ. 8ರಂದು ನಡೆದಿದ್ದರೂ ವಿಡಿಯೋ ವೈರಲ್ ಆದ ಬೆನ್ನಲ್ಲೇ ಲಾಡ್ಜ್‌ನ ರೂಮ್ ಬಾಯ್ ವಿನಯ ಕ್ಯಾಸನೂರು ಎಂಬಾತ ಬುಧವಾರ ಲಾಡ್ಜ್‌ನಲ್ಲಿ ದಾಂಧಲೆ ನಡೆಸಿರುವ ಕುರಿತು ಹಾನಗಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. 

ಅಕ್ಕಿಆಲೂರಿನ ಅಪ್ತಾಬ ಮಕ್ಬೂಲ್‌ಅಹ್ಮದ್ ಚಂದನಕಟ್ಟಿ, ಮದರಸಾಬ ಮಹಮದ್‌ ಇಸಾಕ್ ಮಂಡಕ್ಕಿ, ಸಮೀವುಲ್ಲಾ ಲಾಲನವರ ಸೇರಿ ಐವರ ಮೇಲೆ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಅಪ್ತಾಬ ಚಂದಕಟ್ಟಿ, ಮದರಸಾಬ ಮಂಡಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ ಹಾನಗಲ್ಲ ಠಾಣೆಗೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದಿದ್ದಾರೆ.