ಅಂಬರ್‌ಗ್ರೀಸ್ ಸಾಗಣೆ, ನಾಲ್ವರು ಆರೋಪಿಗಳ ಬಂಧನ

| Published : Feb 10 2024, 01:47 AM IST

ಅಂಬರ್‌ಗ್ರೀಸ್ ಸಾಗಣೆ, ನಾಲ್ವರು ಆರೋಪಿಗಳ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮವಾಗಿ ಕಾರೊಂದರಲ್ಲಿ ತಿಮಿಂಗಲ ವಾಂತಿ( ಅಂಬರ್‌ ಗ್ರೀಸ್) ಸಾಗಣೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಸಿಐಡಿ ಅರಣ್ಯ ಸಂಚಾರಿದಳದ ಪೊಲೀಸರು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಅಕ್ರಮವಾಗಿ ಕಾರೊಂದರಲ್ಲಿ ತಿಮಿಂಗಲ ವಾಂತಿ( ಅಂಬರ್‌ ಗ್ರೀಸ್) ಸಾಗಣೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಸಿಐಡಿ ಅರಣ್ಯ ಸಂಚಾರಿದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಉಡುಪಿಯ ಇಮ್ತಿಯಾಜ್ ಅಬ್ದುಲ್ ರೆಹಮಾನ್, ಮಂಗಳೂರಿನ ಚಿತ್ರಾಂಜಲಿ ನಗರದ ಚೇತನ ಕುಮಾರ್, ಮಂಗಳೂರಿನ ಮಂಜಿನಾಡಿ ಗ್ರಾಮದ ಶೇಪಪ್ಪ, ಸುರತ್ಕಲ್ ಗ್ರಾಮದ ವೆಂಕಟೇಶ್ ಬಂಧಿತ ಆರೋಪಿಗಳು.ಆರೋಪಿಗಳು ಕೆಎ 10, ಎಂಸಿ 3935 ಸಂಖ್ಯೆಯ ಕಾರಿನಲ್ಲಿ ಅಕ್ರಮವಾಗಿ ಆ್ಯಂಬರ್ ಗ್ರೀಸ್( ತಿಮಿಂಗಿಲ ವಾಂತಿ) ಸಾಗಣೆ ಮಾಡುತ್ತಿದಾರೆಂಬ ಖಚಿತ ಮಾಹಿತಿ ಮೇರೆಗೆ ಸಿಐಡಿ ಅರಣ್ಯ ಸಂಚಾರಿ ದಳದ ಪಿಎಸೈ ವಿಜಯರಾಜ್, ಮುಖ್ಯಪೇದೆಗಳಾದ ರಾಮಚಂದ್ರ, ಬಸವರಾಜು, ಶಂಕರ್, ಸ್ವಾಮಿ, ಲತಾ, ಪೇದೆ ಬಸವರಾಜು, ಚಾಲಕ ಪ್ರಭಾಕರ್ ಮತ್ತಿತರರು ಸತ್ತೇಗಾಲ ಹ್ಯಾಂಡ್ ಪೋಸ್ಟ್ ಸಮೀಪ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿ 16ಕೆಜಿ ಅಂಬರ್ ಗ್ರೀಸ್, ಕಾರು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.