ಉಡುಪಿ ಕೃಷ್ಣಮಠಕ್ಕೆ ತಿರುವಾಂಕೂರು ಆದಿತ್ಯವರ್ಮ ಭೇಟಿ

| Published : Nov 14 2025, 03:45 AM IST

ಸಾರಾಂಶ

ಕೇರಳದ ತಿರುವಂಕೂರು ರಾಜ ಮನೆತನದ ರಾಜಕುಮಾರ ಆದಿತ್ಯವರ್ಮ ಅವರು ಗುರುವಾರ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿದರು. ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಭೇಟಿಯಾಗಿ, ತಮ್ಮ ಆಡಳಿತದ ತಿರುವನಂತಪುರಂ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಆಹ್ವಾನ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿಕೇರಳದ ತಿರುವಂಕೂರು ರಾಜ ಮನೆತನದ ರಾಜಕುಮಾರ ಆದಿತ್ಯವರ್ಮ ಅವರು ಗುರುವಾರ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿದರು.ನಂತರ ಅವರು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಭೇಟಿಯಾಗಿ, ತಮ್ಮ ಆಡಳಿತದ ತಿರುವನಂತಪುರಂ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಆಹ್ವಾನ ನೀಡಿದರು.ಈ ಸಂದರ್ಭ ಪರ್ಯಾಯ ಶ್ರೀಪಾದರು ಅವರಿಗೆ ತಮ್ಮ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ಮಾಹಿತಿ ನೀಡಿ, ಗೌರವಿಸಿದರು. ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರು ರಾಜಕುಮಾರ್ ಅವರನ್ನು ಸ್ವಾಗತಿಸಿದರು.