ಪ್ರಭಾತನಗರ ಜಮಖಂಡಿಗೆ ಮಾದರಿಯಾಗಿದೆ. ಇಲ್ಲಿನ ನಿವಾಸಿಗಳು ಒಗ್ಗಟ್ಟಿನಿಂದ ಸಹ ಬಾಳುವೆ ನಡೆಸುತ್ತ ಕುಂದು ಕೊರತೆಗಳನ್ನು ಸಂಘಟಿತರಾಗಿ ಬಗೆ ಹರಿಸಿಕೊಂಡು ಮಾದರಿಯಾಗಿದ್ದೀರಿ ಎಂದು ಮಾಜಿ ಶಾಸಕ ಆನಂಂದ ನ್ಯಾಮಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಪ್ರಭಾತನಗರ ಜಮಖಂಡಿಗೆ ಮಾದರಿಯಾಗಿದೆ. ಇಲ್ಲಿನ ನಿವಾಸಿಗಳು ಒಗ್ಗಟ್ಟಿನಿಂದ ಸಹ ಬಾಳುವೆ ನಡೆಸುತ್ತ ಕುಂದು ಕೊರತೆಗಳನ್ನು ಸಂಘಟಿತರಾಗಿ ಬಗೆ ಹರಿಸಿಕೊಂಡು ಮಾದರಿಯಾಗಿದ್ದೀರಿ ಎಂದು ಮಾಜಿ ಶಾಸಕ ಆನಂಂದ ನ್ಯಾಮಗೌಡ ಹೇಳಿದರು. ಪ್ರಭಾತ ನಗರದ ಉದ್ಯಾನದಲ್ಲಿ ಶನಿವಾರ ನಗರದ ನಿವಾಸಿಗಳಿಂದ ಏರ್ಪಡಿಸಿದ್ದ ಸುಗ್ಗಿಹಬ್ಬ-2026 ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಲೋನಿಯ ಅಭಿವೃದ್ಧಿ ಜೊತೆಗೆ ಉದ್ಯಾನ ಅಭಿವೃದ್ಧಿಪಡಿಸಿಕೊಂಡು ನಿವಾಸಿಗಳಿಗೆ ಅನುಕೂಲ ಕಲ್ಪಿಸಿ, ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಂಡು ಹಿರಿಯರನ್ನು ಸನ್ಮಾನಿಸುವುದು, ಕಿರಿಯರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಪ್ರತಿಭೆಗೆ ಪ್ರೋತ್ಸಾಹಿಸುವುದು ಜೊತೆಗೆ ಗೃಹಿಣಿಯರಿಗೆ ಅಡುಗೆ, ರಂಗೋಲಿ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಜಮಖಂಡಿ ಕ್ಷೇತ್ರದಲ್ಲಿಯೇ ಮಾದರಿ ನಗರ ಎನಿಸಿಕೊಂಡಿದೆ. ಇದರಂತೆ ಎಲ್ಲ ಕಾಲೋನಿಗಳ ನಿವಾಸಿಗಳು ಒಗ್ಗಟ್ಟು ಪ್ರದರ್ಶಿಸಬೇಕು, ತಮ್ಮ ಪ್ರದೇಶ ಮಾತ್ರವಲ್ಲದೆ, ಇಡೀ ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದು ತಿಳಿಸಿದರು.ಮನೆಯಲ್ಲಿ ಹಿರಿಯರನ್ನು ನೋಡಿಕೊಳ್ಳದ ಅದೆಷ್ಟೋ ಉದಾಹರಣೆಗಳಿದ್ದಾಗಲೂ ಒಂದು ಕಾಲೋನಿಯಲ್ಲಿ ವಾಸಿಸುವ ಎಲ್ಲ ಹಿರಿಯರನ್ನು ಗುರುತಿಸಿ ಅವರಿಗೆ ಗೌರವಿಸಿದ್ದು ನಿಜಕ್ಕೂ ಸಂತಸದ ವಿಚಾರ. ಸಮಾಜಕ್ಕೆ ಇದೊಂದು ಉತ್ತಮ ಸಂದೇಶವಾಗಿದೆ. ಗುರು ಹಿರಿಯರನ್ನು ಗೌರವದಿಂದ ಕಾಣುವ ಮೂಲಕ ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ವಿಜಯಶ್ರೀ ಕುಲಕರ್ಣಿ ಪ್ರಾರ್ಥಿಸಿದರು. ಕೃಷ್ಣಾ ಕಾವಿ ಪ್ರಾಸ್ತಾವಿಕ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಆರ್.ಜಿ. ಕುಲಕರ್ಣಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಆರ್.ಪಿ.ನ್ಯಾಮಗೌಡ ಸ್ವಾಗತಿಸಿದರು. ಪೌರಾಯುಕ್ತ ಜ್ಯೋತಿ ಗಿರೀಶ, ಮಾಜಿ ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ಮುಖಂಡರಾದ ಬಸವರಾಜ ಸಿಂಧೂರ, ವಿನೀತ ದೇಸಾಯಿ, ಡಾ.ಉಮೇಶ ಮಹಬಳಶೆಟ್ಟಿ, ದಯಾನಂದ ಶಿರಗಾರ, ವರ್ಧಮಾನ ಯಲಗುದ್ರಿ, ರಾಘವೇಂದ್ರ ಜೊಷಿ, ಕುಮಾರಗೌಡ ಪಾಟೀಲ, ಆರ್.ಎಸ್. ಬಿರಾದಾರ, ಸುರೇಶ ಚೌಧರಿ, ಸದಾಶಿವ ಮೀಸಿ, ಬಿ.ಬಿ. ಪಾಟೀಲ, ಸತೀಶ ಕಡೊಲೆ, ರಶ್ಮೀ ದೇಸಾಯಿ, ಜ್ಯೋತಿ ಪಾಟೀಲ, ವೀಣಾ ತೆಗ್ಗಿ, ನೀಲಾ ಚಾಮೋಜಿ, ವಂದನಾ ಕಡೊಲೆ, ಭಾರತಿ ಜ್ಯೋಷಿ ಇತರರು ಇದ್ದರು. ಪ್ರತಿಭಾ ಪಾಟೀಲ ನಿರೂಪಿಸಿದರು. ರವಿ ತೇಲಿ ವಂದಿಸಿದರು.ಹಿರಿಯರಿಗೆ ಸನ್ಮಾನ : ಬೆಳದಿಂಗಳ ಔತಣ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಿಮಿತ್ತ ಪ್ರಭಾತ ನಗರದಲ್ಲಿ ವಾಸಿಸುತ್ತಿರುವ 75 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರನ್ನು ಸನ್ಮಾನಿಸಲಾಯಿತು. ಪಿ.ಎನ್. ಪಾಟೀಲ, ಜಿ.ಜಿ. ಕುಲಕರ್ಣಿ, ಆರ್.ಆರ್. ಪಾಟೀಲ, ಶಿರಗಾರ್, ದೇವೇಂದ್ರ ಕಮ್ಮಾರ, ಡಾ.ಆಲಬಾಳ, ಮೋಹನ ಉಮದಿ, ಬಾಳಪ್ಪ ಆಲಗೂರ, ರಾಘವೇಂದ್ರ ಕುಂದರಗಿ, ಗಿರಿಮಲ್ಲಯ್ಯ ದೇವರಮಠ ಎಚ್.ಡಿ. ಗಸ್ತಿ, ಬಸಪ್ಪ ಬಾಗೇವಾಡಿ, ಮಹಾದೇವ ಕಾಂಬಳೆ, ಐ.ಆರ್. ಮಯ್ಯಾರ, ಪ್ರಭಾಕರ ಬೀಳಗಿ, ಅನಂತರಾಜ ಬೀಳಗಿ, ಹಿರಿಯ ಮಹಿಳೆಯರಾದ ಮಹೇಶ್ವರಿ ದೇಸಾಯಿ, ಗೋದಾಬಾಯಿ ನ್ಯಾಮಗೌಡ, ಗೀತಾ ಕುಲಕರ್ಣಿ, ಯಲ್ಲಮ್ಮ ತಡಸದ, ಮಂಗಲ ಆಲಗೂರ, ಪದ್ಮಾವತಿ ಬೀಳಗಿ, ಸಕ್ಕುಬಾಯಿ ಸೋಮೇಶಿ ಹಾಗೂ ಎಂಎಸ್‌ಸಿಯಲ್ಲಿ ಚಿನ್ನದ ಪದಕ ಪಡೆದ ನೇತ್ರಾ ಕುಲಕರ್ಣಿ, ಪಿಎಚ್‌ಡಿ ಪದವಿ ಪಡೆದ ಪ್ರವೀಣ ಶಿರೋಳ ಅವರನ್ನು ಸನ್ಮಾನಿಸಲಾಯಿತು.