ಮರಗಳು ಮನುಷ್ಯರ ಜೀವನಾಡಿ

| Published : Apr 25 2024, 01:00 AM IST

ಸಾರಾಂಶ

ಮನೆಗೊಂದು ಮರ ಊರಿಗೊಂದು ವನ ಎಂಬಂತೆ ಪರಿಸರ ಶುದ್ಧವಾಗಿರುವಲ್ಲಿ ವೃಕ್ಷಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಚಿದಾನಂದ ಬಸಪ್ರಭ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಭರತೇಶ ಶಾಂತಪ್ಪ ಬನವಣೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಮನೆಗೊಂದು ಮರ ಊರಿಗೊಂದು ವನ ಎಂಬಂತೆ ಪರಿಸರ ಶುದ್ಧವಾಗಿರುವಲ್ಲಿ ವೃಕ್ಷಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಚಿದಾನಂದ ಬಸಪ್ರಭ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಭರತೇಶ ಶಾಂತಪ್ಪ ಬನವಣೆ ಹೇಳಿದರು.

ನಸಲಾಪೂರ ಧರ್ಮನಗರಿಯಲ್ಲಿ ಮಹಾವೀರ ಜಯಂತಿ ದಿನದಂದು ಸನ್ಮತಿ ನಗರದ ನಾಮಫಲಕದ ಅನಾವರಣ ಸಮಾರಂಭದಲ್ಲಿ ಸಸಿ ನೆಟ್ಟು ಚಾಲನೆ ನೀಡಿ ಮಾತನಾಡಿದ ಅವರು, ಮರಗಳು ಮನುಷ್ಯರ ಜೀವನಾಡಿ ಇದ್ದಂತೆ ಪ್ರತಿಯೊಬ್ಬರೂ ತಮ್ಮ ಮನೆ ಮುಂದೆ ವೃಕ್ಷಗಳನ್ನು ಬೆಳೆಸುವುದರ ಜೊತೆಗೆ ಪರಿಸರವನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು.

ಸನ್ಮತಿ ನಗರದ ನಾಮಫಲಕದ ಅನಾವಣವನ್ನು ಚಿಕ್ಕೋಡಿ ದಿಯಾ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಸಂಜಯ ಪಾಟೀಲ ಅವರು ನೆರವೇರಿಸಿದರು. ದಿಯಾ ಆಸ್ಪತ್ರೆಯ ವೈದ್ಯ ಡಾ.ಸಂಜಯ ಪಾಟೀಲ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಭಾವುಸಾಹೇಬ ಪಾಟೀಲ, ಜಯಪಾಲ ಬನವಣೆ, ಪಾನಗೌಡ ಪಾಟೀಲ, ರಾಜು ಪರಮಾಜೆ, ನಿಂಗಪ್ಪ ಕುಂಬಾರ, ಆನಂದ ಸಮಾಜೆ, ಅಣ್ಣಾಸಾಬ ಸಮಾಜೆ, ಸಂತೋಷ ಶೇಡಬಾಳೆ, ರಾಜು ಪಾಟೀಲ, ಸಂಜು ಪಾಟೀಲ, ಅಣ್ಣಾಸಾಬ ಪಾಟೀಲ, ಅಜೀತನಾಥ ಪಾಟೀಲ, ಸಂತೋಷ ಪಾಟೀಲ, ಡಾ.ಸಂಜಯ ಪಾಟೀಲ ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಸನ್ಮತಿ ನಗರದ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.