ಸಾರಾಂಶ
ಚನ್ನಪಟ್ಟಣ: ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಹಲವೆಡೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಮಳೆಯ ಆರ್ಭಟಕ್ಕೆ ಹಲವು ಗ್ರಾಮಗಳಲ್ಲಿ ಮರಗಳು, ವಿದ್ಯುತ್ ಕಂಬಗಳ ನೆಲಕ್ಕುರಿಳಿವೆ.
ಚನ್ನಪಟ್ಟಣ: ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಹಲವೆಡೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಮಳೆಯ ಆರ್ಭಟಕ್ಕೆ ಹಲವು ಗ್ರಾಮಗಳಲ್ಲಿ ಮರಗಳು, ವಿದ್ಯುತ್ ಕಂಬಗಳ ನೆಲಕ್ಕುರಿಳಿವೆ.
ತಾಲೂಕಿನ ಕೊಂಡಾಪುರ ಗ್ರಾಮ, ಹುಣಸನಹಳ್ಳಿ, ಮೊಕರಂಬೆದೊಡ್ಡಿ ಸೇರಿ ಹಲವು ಗ್ರಾಮಗಳಲ್ಲಿ ನೂರಾರು ತೆಂಗು, ಮಾವು, ಹಲಸಿನ ಮರಗಳು ಧರೆಗುರುಳಿವೆ. ಇದರೊಂದಿಗೆ ಕೆಲವೆಡೆ ಮನೆಯ ಶೀಟುಗಳು ಹಾರಿಹೋಗಿದ್ದು, ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.ತಾಲೂಕಿನ ಕೊಂಡಾಪುರ ಗ್ರಾಮದಲ್ಲೇ ಸುಮಾರು 50ಕ್ಕೂ ಹೆಚ್ಚು ತೆಂಗಿನ ಮರ ನೆಲಕಚ್ಚಿದ್ದರೆ, ಸಿದ್ದರಾಮೇಗೌಡರ 17 ಫಲ ಕಚ್ಚಿದ ತೆಂಗಿನ ಗಿಡಗಳು ಬುಡಸಮೇತ ಉರುಳಿಬಿದ್ದಿವೆ. ಇನ್ನು ಕೊಂಡಾಪುರ, ಹುಣಸನಹಳ್ಳಿ, ಮೊಕರಂಬೆದೊಡ್ಡಿ ಸೇರಿದಂತೆ ಹಲವು ಕಡೆ ಮಾವು, ತೆಂಗು, ಹಲಸಿನ ಮರಗಳು ಬಿರುಗಾಳಿ ಮಳೆಗೆ ನೆಲಕ್ಕೆ ಉರುಳಿವೆ.
ಇದರೊಂದಿಗೆ ತಾಲೂಕಿನ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಸಾಕಷ್ಟು ಹಾನಿಯಾಗಿದ್ದು, ಕೆಲವೆಡೆ ಬೃಹತ್ ಮರಗಳು ರಸ್ತೆಗುರುಳಿವೆ, ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ರೈತರಿಗೆ ಸಾಕಷ್ಟು ನಷ್ಟವನ್ನುಂಟು ಮಾಡಿದೆ.ನಗರ ಪ್ರದೇಶದಲ್ಲೂ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಮಳೆಯ ಹಿನ್ನೆಲೆಯಲ್ಲಿ ಕರೆಂಟ್ ಕೈಕೊಟ್ಟ ಹಿನ್ನಲೆಯಲ್ಲಿ ನಗರ ಪ್ರದೇಶದ ಹಲವೆಡೆ ಜನ ಕರೆಂಟ್ ಇಲ್ಲದೇ ರಾತ್ರಿ ಕಾಲ ಕಳೆಯುವಂತಾಯಿತು.
ಪೋಟೊ೧೪ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ಕೊಂಡಾಪುರ ಗ್ರಾಮದಲ್ಲಿ ನೆಕ್ಕುರುಳಿರುವ ತೆಂಗಿನ ಸಸಿಗಳು.