ಲಿಂಗನಬಂಡಿಗೆ ಪರೀಕ್ಷಾರ್ಥ ರೈಲು ಸಂಚಾರ

| Published : Feb 07 2024, 01:45 AM IST

ಸಾರಾಂಶ

ಬೆಳಗ್ಗೆ ೧೦ಗಂಟೆ ಸುಮಾರಿಗೆ ರೈಲು ಬರುತ್ತಿದ್ದಂತೆ ನೆರೆದಿದ್ದ ಜನರು ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇನ್ನೇನು ರೈಲು ಸಂಚಾರಕ್ಕೆ ಅಧಿಕೃತವಾಗಿ ಆರಂಭಗೊಳ್ಳಲು ಕೆಲವೇ ದಿನಗಳು ಬಾಕಿ

ಯಲಬುರ್ಗಾ: ಪರೀಕ್ಷಾರ್ಥವಾಗಿ ಗದಗ-ವಾಡಿ ರೈಲ್ವೆ ಯೋಜನೆಯಡಿಯಲ್ಲಿ ತಾಲೂಕಿನ ಹನುಮಾಪುರದಿಂದ ಲಿಂಗನಬಂಡಿಗೆ ಮಂಗಳವಾರ ರೈಲು ಸಂಚಾರ ನಡೆಸಲಾಯಿತು.

ಪ್ರಪ್ರಥಮ ಬಾರಿಗೆ ಗ್ರಾಮದ ರೈಲು ನಿಲ್ದಾಣಕ್ಕೆ ಆಗಮಿಸಿದ ಬೋಗಿಯನ್ನು ಗ್ರಾಮಸ್ಥರು ತಳಿರು,ತೋರಣಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿ ಅದ್ಧೂರಿಯಾಗಿ ಸ್ವಾಗತಿಸಿದರು.

ಬೆಳಗ್ಗೆ ೧೦ಗಂಟೆ ಸುಮಾರಿಗೆ ರೈಲು ಬರುತ್ತಿದ್ದಂತೆ ನೆರೆದಿದ್ದ ಜನರು ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇನ್ನೇನು ರೈಲು ಸಂಚಾರಕ್ಕೆ ಅಧಿಕೃತವಾಗಿ ಆರಂಭಗೊಳ್ಳಲು ಕೆಲವೇ ದಿನಗಳು ಬಾಕಿ ಇದ್ದು, ಈ ಭಾಗದ ಜನರ ಕನಸು ಕೊನೆಗೂ ಈಡೇರುವ ಸಮಯ ಕೂಡಿ ಬಂದಿದೆ ಎಂದರು.

ದಕ್ಷಿಣ ವಲಯದ ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ. ಚೌಧರಿ ನೇತೃತ್ವದಲ್ಲಿ ತಪಾಸಣೆ ಕೈಗೊಳ್ಳಲಾಯಿತು. ಕನ್ನಷ್ಟ್ರಕ್ಷನ ವಿಭಾಗದ ಮುಖ್ಯ ಆಡಳಿತಾಧಿಕಾರಿ ಶ್ರೀರಾಮ ಗೋಪಾಲ, ರೈಲ್ವೆ ಪ್ರಬಂಧಕ ಹರ್ಷ ಖರೆ, ಸಂತೋಷ ಹೆಗಡೆ ಇತರ ಅಧಿಕಾರಿಗಳ ತಂಡ ಸಂಪೂರ್ಣ ವಿದ್ಯುದೀಕರಣ ತಪಾಸಣೆ ಕೈಗೊಂಡರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ರಾಮಣ್ಣ ಸಾಲಭಾವಿ, ಮೌನೇಶ್ವರಮಠದ ಉಳಿವೇಂದ್ರ ಸ್ವಾಮೀಜಿ, ಗುರುಪಾದಯ್ಯ ಹಿರೇಮಠ, ದೇವಿಂದ್ರಗೌಡ ಮಾಲಿಪಾಟೀಲ, ಮಹಾದೇವಪ್ಪ ಹುಡೇದ, ಹುಲಗಪ್ಪ ಬಂಡಿವಡ್ಡರ, ಬಸವರಾಜ ಜಂಬಾಳಿ, ರುದ್ರಗೌಡ ನಂದಿಹಾಳ, ಮೌನೇಶ ನಂದಿಹಾಳ, ಪರಪ್ಪ ಅಂಗಡಿ, ನಾಗರಾಜ ಹುಡೇದ, ಬಾಲಪ್ಪ ಬಿಜಕಲ್, ಷಣ್ಮುಖಪ್ಪ ಮೇಲಸಕ್ರಿ, ಕುಶ ಬೇವಿನಗಿಡದ, ವಿರುಪಣ್ಣ ಬಿಜಕಲ್, ಶರಣಪ್ಪ ತಲ್ಲೂರು, ಪ್ರಭುಗೌಡ ಪಾಟೀಲ, ಶರಣಪ್ಪಗೌಡ ಬಸಾಪೂರ,ರಮೇಶ ಮಡಿವಾಳರ, ವಿರುಪಾಕ್ಷಿ ಹರಿಜನ, ಲಕ್ಷ್ಮಣ ಭಂಡಾರಿ, ಸುರೇಶ ಭಜೆಂತ್ರಿ, ಬಸವರಾಜ ಚೌಡಕಿ, ಬಸಣ್ಣ ಕುಷ್ಟಗಿ ಮತ್ತಿತರರು ಇದ್ದರು.