ಬುಡಕಟ್ಟು ಜನಾಂಗದವರನ್ನು ಉಳಿಸಬೇಕಿದೆ: ಶೃತಿ

| Published : Feb 12 2025, 12:36 AM IST

ಸಾರಾಂಶ

ತರೀಕೆರೆ, ಬುಡಕಟ್ಟು ಜನಾಂಗದವರನ್ನು ಉಳಿಸಬೇಕೆಂದು ಜಾಗೃತಿ ವೇದಿಕೆ ಸದಸ್ಯೆ ಶೃತಿ ಮನವಿ ಮಾಡಿದ್ದಾರೆ. ಎ.ರಂಗಾಪುರ ಗ್ರಾಮದಲ್ಲಿ ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟ ಮತ್ತು ದಿ ಹಂಗರ್ ಪ್ರಾಜೆಕ್ಟ್ ಸಂಯೋಜನೆಯಲ್ಲಿ ನಡೆದ ಜಾಗೃತಿ ವೇದಿಕೆ ಸಭೆಯಲ್ಲಿ ಮಾತನಾಡಿದರು.

ಎ.ರಂಗಾಪುರ ಗ್ರಾಮದಲ್ಲಿ ಜಾಗೃತಿ ವೇದಿಕೆ ಸಭೆ

ಕನ್ನಡಪ್ರಭ ವಾರ್ತೆ ತರೀಕೆರೆ

ಬುಡಕಟ್ಟು ಜನಾಂಗದವರನ್ನು ಉಳಿಸಬೇಕೆಂದು ಜಾಗೃತಿ ವೇದಿಕೆ ಸದಸ್ಯೆ ಶೃತಿ ಮನವಿ ಮಾಡಿದ್ದಾರೆ.

ಎ.ರಂಗಾಪುರ ಗ್ರಾಮದಲ್ಲಿ ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟ ಮತ್ತು ದಿ ಹಂಗರ್ ಪ್ರಾಜೆಕ್ಟ್ ಸಂಯೋಜನೆಯಲ್ಲಿ ನಡೆದ ಜಾಗೃತಿ ವೇದಿಕೆ ಸಭೆಯಲ್ಲಿ ಮಾತನಾಡಿದರು.ಎ.ರಂಗಾಪುರ ಗ್ರಾಮದಲ್ಲಿ ವಾಸವಿರುವ ಬಡ ಬುಡಕಟ್ಟು ಕುಟುಂಬಗಳು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದು, ಈ ಹಿಂದೆ ಕಾಡುಗಳಿಂದ ಬಿದರನ್ನು ತಂದು ಅದರಲ್ಲಿ ಪುಟ್ಟಿ ಮತ್ತು ತಟ್ಟಿ ಮೊರಗಳನ್ನು ಮಾಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೆವು. ಆದರೆ ಈಗ ಕಾಡಿನಲ್ಲಿ ಬಿದಿರು ಇಲ್ಲದೆ ಇರುವುದರಿಂದ ನಮ್ಮೆಲ್ಲಾ ಕುಟುಂಬ ಬೀದಿಗೆ ಬಂದಂತಾಗಿದೆ. ಆದ್ದರಿಂದ ಏನು ಮಾಡುವ ಸ್ಥಿತಿಯಲ್ಲಿ ನಾವು ಇಲ್ಲ. ನಮ್ಮೆಲ್ಲರ ಮನೆಗಳು ಸಂಪೂರ್ಣವಾಗಿ ಹಾಳಾಗಿದ್ದು ಮುಂದಿನ ಮಳೆಗಾಲದಲ್ಲಿ ನಾವು ಜೀವಿಸುವುದಕ್ಕೆ ಸಾಧ್ಯವಾಗುತ್ತಿಲ್ಲ, ಎಲ್ಲಾ ಮನೆಯ ಗೋಡೆಗಳು ಬಿದ್ದುಹೋಗಿವೆ ಎಂದು ಹೇಳಿದರು.ಈ ಮನೆಗಳಲ್ಲಿ ಮಕ್ಕಳು ಕುಳಿತು ಓದುವುದಕ್ಕೆ ಸಾಧ್ಯವಾಗುತ್ತಿಲ್ಲ. ಮನೆ ಒಳಗಡೆ ಜೀವನ ನಡೆಸಲು ಸಹ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಕಷ್ಟಪಡುತ್ತಿದ್ದಾರೆ. ಮುಂದಿನ ಮಳೆಗಾಲದಲ್ಲಿ ಗೋಡೆಗಳೇ ನಾದರೂ ಬಿದ್ದರೆ ವಾಸ ಮಾಡೋದು ಕಷ್ಟವಾಗಿದೆ ಮತ್ತು ಗರ್ಭಿಣಿ ಬಾಣಂತಿಯರ ಗೋಳು ಹೇಳುತೀರದು. ಗ್ರಾಮ ಪಂಚಾಯಿತಿ ಮತ್ತು ನಮ್ಮ ತಾಲೂಕಿನ ಶಾಸಕರು ಗ್ರಾಮಕ್ಕೆ ಬಂದು ಈಗಿನ ಪರಿಸ್ಥಿತಿಯ ಮನೆ ಗಳನ್ನು ನೋಡಿದರೆ ಖಂಡಿತ ಅವರು ಮನೆಗಳನ್ನು ಮಾಡಿಕೊಡುತ್ತಾರೆ ಎಂಬ ಭರವಸೆ ನಮಗಿದೆ ಆದ್ದರಿಂದ ಈ ಮನೆಗಳನ್ನು ಕಟ್ಟಿಸಿ ಕೊಡುವ ಮುಖಾಂತರ ಈ ಬುಡಕಟ್ಟು ಜನಾಂಗದವರನ್ನು ಉಳಿಸ ಬೇಕೆಂದು ಮನವಿ ಮಾಡುತ್ತೇನೆ. ನಾವೆಲ್ಲರೂ ಹೋಗಿ ಶಾಸಕರ ಜೊತೆ ಮಾತನಾಡೋಣ ಎಂದು ಹೇಳಿದರು.

ಜಾಗೃತಿ ವೇದಿಕೆ ಸದಸ್ಯೆ ಸುಶೀಲಾ ಮಾತನಾಡಿ, ನಮ್ಮ ಬುಡಕಟ್ಟು ಕುಟುಂಬಗಳ ಕೇರಿಯ ಮನೆಗಳು ಸಂಪೂರ್ಣವಾಗಿ ಹಾಳಾಗಿವೆ ಮತ್ತು ಇದರ ಅಸೆಸ್ಮೆಂಟ್ ಕಾಪಿ ನಮ್ಮತ್ರ ಇದೆ ಆದರೆ ಇ-ಸ್ವತ್ತು ಮಾಡಿಸಲು ಅಧಿಕಾರಿಗಳು ಹಿಂದೆ ಮುಂದೆ ನೋಡುತ್ತಿದ್ದಾರೆ. ಹಾಗಾಗಿ ಅಧಿಕಾರಿಗಳು ನಮ್ಮ ಕುಟುಂಬ ಮತ್ತು ಮನೆಗಳಿಗೆ ಭೇಟಿ ಮಾಡಿ ಇ- ಸ್ವತ್ತನ್ನು ಮಾಡಿ ಕೊಡಬೇಕೆಂದು ತಿಳಿಸಿದರು.

ಜಾಗೃತಿ ವೇದಿಕೆ ಮತ್ತೋರ್ವ ಸದಸ್ಯರಾದ ಜೋಗಮ್ಮ ಮಾತನಾಡುತ್ತಾ ನಮ್ಮ ಕೇರಿಯಲ್ಲಿ ಎಲ್ಲಾ ಚರಂಡಿಗಳು ಹಾಳಾಗಿವೆ. ಆದ್ದರಿಂದ ತಕ್ಷಣ ಗ್ರಾಪಂ ಇದನ್ನು ಗಮನ ಹರಿಸಿ ಜಿಪಿಡಿಪಿಯಲ್ಲಿ ಸೇರಿಸಿ ನಮ್ಮ ಗ್ರಾಮದ ಚರಂಡಿ ಮಾಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕೆಂದು ಆಗ್ರಹಿಸಿದರು.ಮುಂದಿನ ದಿನದಲ್ಲಿ ಸಂಬಂಧಪಟ್ಟಂತ ಅಧಿಕಾರಿಗಳಿಗೆ ಮನವಿ ಕೊಡಲು ಜಾಗೃತಿ ವೇದಿಕೆ ಸದಸ್ಯರು ಚರ್ಚಿಸಿ ತೀರ್ಮಾನಿಸಿದರು. ದಿ ಹಂಗರ್ ಪ್ರಾಜೆಕ್ಟ್ ನ ತಾಲೂಕ್ ಸಂಯೋಜಕ ಶ್ರೀನಿವಾಸ್ ಭಾಗವಹಿಸಿದ್ದರು. 11ಕಟ್ಆರ್.ಕೆ.1ಃ

ತರೀಕೆರೆ ತಾಲೂಕು ಎ.ರಂಗಾಪುರದಲ್ಲಿ ಜಾಗೃತಿ ವೇದಿಕೆ ಸಭೆಯಲ್ಲಿ ದಿ ಹಂಗರ್ ಪ್ರಾಜೆಕ್ಟ್ ನ ತಾಲೂಕ್ ಸಂಯೋಜಕ ಶ್ರೀನಿವಾಸ್ ಮಾತನಾಡಿದರು.