ಯೋಗ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ

| Published : Sep 12 2025, 12:07 AM IST

ಸಾರಾಂಶ

ಕೊಡಗಿನ ಮೂವರು ಯೋಗ ಶಿಕ್ಷಕರಿಗೆ ರೋಟರಿ ಬೆಂಗಳೂರು ಗ್ಲೋಬಲ್‌ ಯೋಗ ಸಂಸ್ಥೆ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕೊಡಗಿನ ಮೂವರು ಯೋಗ ಶಿಕ್ಷಕರಿಗೆ ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಂಸ್ಥೆ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.ರೋಟರಿ ಕ್ಲಬ್ ಆಫ್ ಬೆಂಗಳೂರು ಕಲ್ಯಾಣ್ ಮತ್ತು ಯೋಗ ಯುನಿವರ್ಸಿಟಿ ಆಫ್ ದಿ ಅಮೇರಿಕಾಸ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಬೆಂಗಳೂರಿನ ಶ್ರೀ ಪುಟ್ಟಣ ಚೆಟ್ಟಿ ಟೌನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಮಡಿಕೇರಿಯ ಯೋಗ ಭಾರತಿಯ ಯೋಗ ಶಿಕ್ಷಕ ಮಹೇಶ್‌ಕುಮಾರ್ ಅವರಿಗೆ ಜೀವಮಾನದ ಸಾಧನೆಗಾಗಿ ಯೋಗ ಸಾಧಕ ಪ್ರಶಸ್ತಿ, ಸೋಮವಾರಪೇಟೆ ನಿರಂತರ ಯೋಗ ಕೇಂದ್ರದ ಶಿಕ್ಷಕ ಕಿಬ್ಬೆಟ್ಟ ಗಣೇಶ್ ಅವರಿಗೆ ಯೋಗ ರತ್ನ ಹಾಗೂ ಕುಶಾಲನಗರದ ಯೋಗ ಶಿಕ್ಷಕಿ ಕೆ. ಅಮಿತ ಸತೀಶ್ ಅವರಿಗೆ ಯೋಗ ಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.ಗೌರಿಗದ್ದೆ ಆಶ್ರಮದ ಅವದೂತ ವಿನಯ್ ಗುರೂಜಿ, ಯೋಗ ಯೂನಿವರ್ಸಿಟಿ ಆಫ್ ದಿ ಅಮೇರಿಕಾಸ್‌ನ ಕುಲಪತಿ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ, ರೋಟರಿ ಜಿಲ್ಲಾ ಗವರ್ನರ್ ಎಲಿಜಬೆತ್ ಚೆರಿಯನ್, ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಯೋಗಿ ದೇವರಾಜ್, ಹೋಲಿಸ್ಟಿಕ್ ಹೆಲ್ತ್ ಕನ್ಸಲ್ಟಂಟ್ ನಿರ್ದೇಶಕ ದಕ್ಷಿಣಮೂರ್ತಿ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಸ್ತಿ ಪ್ರದಾನ ಮಾಡಿದರು.