ಹಾಸನದಲ್ಲಿ ಪೌರಕಾರ್ಮಿಕರಿಗೆ ಗೌರವ, ರಕ್ತದಾನ ಶಿಬಿರ

| Published : Feb 11 2024, 01:46 AM IST

ಹಾಸನದಲ್ಲಿ ಪೌರಕಾರ್ಮಿಕರಿಗೆ ಗೌರವ, ರಕ್ತದಾನ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಕೆಸಿಪಿ ಸಂಸ್ಥೆಯ ಮಾಲೀಕ ಎಚ್.ಪಿ. ಕಿರಣ್ ಗೌಡ ಅವರ ಜನ್ಮ ದಿನದ ಅಂಗವಾಗಿ ಹಾಸನದಲ್ಲಿ ನಗರ ವ್ಯಾಪ್ತಿಯ ಪೌರಕಾರ್ಮಿಕರಿಗೆ ಗೌರವ ಸಮರ್ಪಣೆ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು.

ಕೆಸಿಪಿ ಸಂಸ್ಥೆ ಮಾಲೀಕ ಕಿರಣ್‌ ಗೌಡ ಜನ್ಮದಿನಕನ್ನಡಪ್ರಭ ವಾರ್ತೆ ಹಾಸನ

ಕೆಸಿಪಿ ಸಂಸ್ಥೆಯ ಮಾಲೀಕ ಎಚ್.ಪಿ. ಕಿರಣ್ ಗೌಡ ಅವರ ಜನ್ಮ ದಿನದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀಕೃಷ್ಣ ಹೋಟೆಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಗರ ವ್ಯಾಪ್ತಿಯ ಪೌರಕಾರ್ಮಿಕರಿಗೆ ಗೌರವ ಸಮರ್ಪಣೆ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು.

ನಂತರ ಮಾತನಾಡಿದ ಕಿರಣ್ ಗೌಡ, ಪ್ರತಿ ವರ್ಷ ಜನ್ಮದಿನ ವಿವಿಧ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ಪೌರಕಾರ್ಮಿಕರಿಗೆ ಗೌರವ ಸಮರ್ಪಣೆ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದ್ದು, ಎಲ್ಲರ ಪ್ರೀತಿ ವಿಶ್ವಾಸಕ್ಕೆ ಯಾವಾಗಲು ಚಿರಋಣಿಯಾಗಿರುತ್ತೇನೆ. ಕಾರ್ಯಕ್ರಮಕ್ಕೆ ಹಿತೈಷಿಗಳು, ಸ್ನೇಹಿತರು, ಬಂಧುಗಳು ಹಾಗೂ ರಾಜಕೀಯದ ಮುಖಂಡರು ಆಗಮಿಸಿ ಶುಭ ಹಾರೈಸಿ ಆಶೀರ್ವಾದ ನೀಡುತ್ತಿರುವುದು ಸಂತೋಷ ತಂದಿದೆ ಎಂದರು.

ಪ್ರತಿ ವರ್ಷ ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಹೋಗಿ ಕೈಲಾದ ಸೇವೆ ಮಾಡಲಾಗುತ್ತಿತ್ತು. ಈ ವರ್ಷದಲ್ಲಿ ಹೊಸ ರೀತಿ ಮಾಡುವುದಾಗಿ ನಿರ್ಧರಿಸಿ ನಗರದ ನಿಜವಾದ ಹೀರೋಗಳಾದ ಪೌರಕಾರ್ಮಿಕರಿಗೆ ಗೌರವ ಸಲ್ಲಿಸುವ ಅವಕಾಶ ಮಾಡಿರುವುದಕ್ಕೆ ಕೃತಜ್ಞನಾಗಿದ್ದೇನೆ. ಪೌರಕಾರ್ಮಿಕರಿಲ್ಲದೆ ನಗರ ಸ್ವಚ್ಛವಾಗಿರಲು ಸಾಧ್ಯವಿಲ್ಲ. ರಕ್ತದಾನ ಎಂದರೆ ಮಹಾದಾನ. ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಹೆಚ್ಚು ಇರುತ್ತದೆ ಎಂದು ಹೇಳಿದರು.

ಎಚ್.ಪಿ. ಕಿರಣ್ ಗೌಡ ತಂದೆ ಕೆ.ಸಿ. ಪುಟ್ಟರಾಜು, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಸದಸ್ಯ ದಯಾನಂದ್, ಮಾಜಿ ಸದಸ್ಯ ಎಚ್.ಎಂ. ಸುರೇಶ್ ಕುಮಾರ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಆಲೂರು ಭಾಗದ ಕರವೇ ತಾಲೂಕು ಅಧ್ಯಕ್ಷ ನಟರಾಜು, ಕಂಚಮಾರನಹಳ್ಳಿ ಕಾಂತಣ್ಣ, ಸಕಲೇಶಪುರದ ದೇವರಾಜು, ರೈಲ್ವೆ ಇಲಾಖೆಯ ಪುಷ್ಪ ಇಂದ್ರಕುಮಾರ್, ಕೆ.ಸಿ.ಪಿ. ಗ್ರೂಪ್‌ನ ನಾಗರಾಜು, ಮಹೇಂದ್ರ, ಧರ್ಮ, ಲೆಕ್ಕಾಚಾರ ವಿಭಾಗದ ನಾಗೇಶ್, ಸದಸ್ಯ ಲೋಕೇಶ್ ಇದ್ದರು. ಆನಂದ್ ಪ್ರಾರ್ಥಿಸಿದರು.ಎಚ್.ಪಿ. ಕಿರಣ್ ಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ ನೆರವೇರಿದ ರಕ್ತದಾನ ಮತ್ತು ಪೌರಕಾರ್ಮಿಕರಿಗೆ ಗೌರವ ಸಮಾರಂಭ.