ಸಾರಾಂಶ
ನಾಗಮಂಗಲ: ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ.ಮನಮೋಹನ್‌ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಹಿರಿಯ ಪತ್ರಕರ್ತ ಪಿ.ಜೆ.ಜಯರಾಂ ಮಾತನಾಡಿ, ದೇಶದ ಆರ್ಥಿಕ ಇತಿಹಾಸದಲ್ಲಿ ಡಾ.ಮನಮೋಹನ್‌ಸಿಂಗ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಹಣಕಾಸು ಸಚಿವರಾಗಿ ನಂತರ 10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಅವರು ಜಾರಿಗೆ ತಂದಿರುವ ಹಲವು ಆರ್ಥಿಕ ಸುಧಾರಣಾ ಕ್ರಮಗಳು ಇಂದಿಗೂ ಕೂಡ ದೇಶದ ಹಣಕಾಸಿನ ಸದೃಢತೆಗೆ ನೆರವಾಗಿವೆ ಎಂದರು. ಸಂಘದ ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ್ ಮಾತನಾಡಿ, ಅತ್ಯಂತ ಮಿತ ಭಾಷಿಯಾಗಿದ್ದ ಮನಮೋಹನ್‌ಸಿಂಗ್ ಅವರು ಕ್ಲಿಷ್ಟಕರ ಸಂದರ್ಭದಲ್ಲಿ ವಿಚಲಿತರಾಗದೆ ಸ್ಪಷ್ಟವಾಗಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ಹೊಂದಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದರು. ಸಂಘದ ಅಧ್ಯಕ್ಷ ಕೆ.ಸೀತಾರಾಮು, ಖಜಾಂಚಿ ಮಹೇಶ್, ಸದಸ್ಯರಾದ ಬಿ.ಆರ್.ಕುಮಾರ್, ಶ್ರೀನಿವಾಸ್, ಪುಟ್ಟರಾಜು, ಯೋಗೇಶ್, ತರುಣ್‌ಕುಮಾರ್, ಕೌಶಿಕ್‌ಗೌಡ ಇದ್ದರು.