ಸಾರಾಂಶ
ಅವಿಭಜಿತ ಜಮಖಂಡಿ ಅಖಂಡ ತಾಲೂಕು ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಶಾಲಿಗಳಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವ ತಾಲೂಕಿನ ಹಳಿಂಗಳಿ ಗ್ರಾಮದ ೫ ಜನ ಬಾಲಕಿಯರನ್ನು ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಅವಿಭಜಿತ ಜಮಖಂಡಿ ಅಖಂಡ ತಾಲೂಕು ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಶಾಲಿಗಳಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವ ತಾಲೂಕಿನ ಹಳಿಂಗಳಿ ಗ್ರಾಮದ ೫ ಜನ ಬಾಲಕಿಯರನ್ನು ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ಪಿ.ಎಂ.ಪತ್ತಾರ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಶ್ರಮವಹಿಸಿದರೆ ಉತ್ತಮ ಸಾಧಕರಾಗಬಹುದು. ಕುಸ್ತಿ ನಾಡಿನ ಈ ಭಾಗದ ಮಕ್ಕಳು ಪ್ರತಿವರ್ಷ ಸಾಧನೆ ಮೆರೆಯುತ್ತಿರುವುದು ಹೆಮ್ಮೆಯ ಸಂಗತಿ. ಪಾಲಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಸ್ವಪ್ರೇರಣೆಯಿಂದ ಇನ್ನಷ್ಟು ಉತ್ತಮ ತರಬೇತಿ ಪಡೆದು ಮುಂದಿನ ಹಂತದಲ್ಲಿಯೂ ಸಾಧನೆ ತೋರುವಂತಾಗಲಿ ಎಂದರು.
ಪ್ರೌಢ ವಿಭಾಗದ ಅಪೇಕ್ಷಾ ಜಿನಗೊಂಡ ಕುಳ್ಳಿ(೪೦ ಕೆಜಿ), ಶ್ರೇಯಾ ಭೀರಪ್ಪ ಗೊಂಗಡಿ(೪೯ ಕೆಜಿ), ಪ್ರಾಥಮಿಕ ವಿಭಾಗದ ಖುಷಿ ರಾಜು ಸಿಂಗೆ(೪೬ ಕೆಜಿ), ಖುಷಿ ರಮೇಶ ಇಂಚಲಕರಂಜಿ(೩೦ ಕೆಜಿ), ಸಿಂಧೂ ಪರಪ್ಪ ಘೂಳನ್ನವರ(೫೦ ಕೆಜಿ) ಇವರನ್ನು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಪ್ರಯುಕ್ತ ಸನ್ಮಾನಿಸಲಾಯಿತು.ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಪರಪ್ಪಣ್ಣ ಘೂಳನ್ನವರ, ಜಿನ್ನಪ್ಪ ಕುಳ್ಳಿ, ಶಿಕ್ಷಕ ಎಸ್.ಎಸ್. ಹುದ್ದಾರ, ಎ.ಬಿ. ಕಂಚಗೊಂಡ, ಎ.ಎ. ನಾಯ್ಕವಾಡಿ, ಎ.ಕೆ.ನಾರವ್ವಗೋಳ, ಎಸ್.ಬಿ.ಕಾಂಬಳೆ, ವಿದ್ಯಾ ಕೇಬೋಜಿ, ವಿ.ವಿ.ನಡುವಿನಕೇರಿ ಶಾಲಾ ಮಕ್ಕಳು ಮುಂತಾದವರು ಇದ್ದರು.