ಸಾರಾಂಶ
ಬಿಜೆಪಿಯ ಮೇಲಿನ ಅಭಿಮಾನದಿಂದ ಯಾವುದೇ ಬಾಡಿಗೆ ಇಲ್ಲದೇ ಉಚಿತವಾಗಿ ಇಲ್ಲಿವರೆಗೂ ಕಟ್ಟಡ ನೀಡಿದ್ದಕ್ಕೆ ದಿ. ಆರ್.ಪಿ. ಹಬೀಬ ಅವರ ಪತ್ನಿ, ಶಾರದಾಬಾಯಿ ಹಬೀಬ, ಪುತ್ರರಾದ ನಾರಾಯಣಸಾ ಹಬೀಬ, ಶ್ಯಾಮ ಹಬೀಬ, ಮಾಧು ಹಬೀಬ, ವಿಮಲ ಹಬೀಬ ಸೇರಿದಂತೆ ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು.
ಹುಬ್ಬಳ್ಳಿ:
ಇಲ್ಲಿನ ದೇಶಪಾಂಡೆನಗರದಲ್ಲಿ ಬಿಜೆಪಿ ಕಚೇರಿಗೆ 17 ವರ್ಷದಿಂದ ಕಟ್ಟಡ ನೀಡಿದ್ದ ಜನಸಂಘದ ಹಿರಿಯರು ಹಾಗೂ ಎಸ್‌ಎಸ್‌ಕೆ ಸಮಾಜದ ದಿ.ಆರ್.ಪಿ. ಹಬೀಬ ಅವರನ್ನು ವಿಎಕೆ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.ಇದೀಗ ಬಿಜೆಪಿ ತನ್ನ ಕಚೇರಿಯನ್ನು ಅರವಿಂದನಗರದಲ್ಲಿ ಪ್ರಾರಂಭಿಸಿದೆ. ಬಿಜೆಪಿಯ ಮೇಲಿನ ಅಭಿಮಾನದಿಂದ ಯಾವುದೇ ಬಾಡಿಗೆ ಇಲ್ಲದೇ ಉಚಿತವಾಗಿ ಇಲ್ಲಿವರೆಗೂ ಕಟ್ಟಡ ನೀಡಿದ್ದಕ್ಕೆ ದಿ. ಆರ್.ಪಿ. ಹಬೀಬ ಅವರ ಪತ್ನಿ, ಶಾರದಾಬಾಯಿ ಹಬೀಬ, ಪುತ್ರರಾದ ನಾರಾಯಣಸಾ ಹಬೀಬ, ಶ್ಯಾಮ ಹಬೀಬ, ಮಾಧು ಹಬೀಬ, ವಿಮಲ ಹಬೀಬ ಸೇರಿದಂತೆ ಅವರ ಕುಟುಂಬದವರನ್ನು ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.
ಮಾಜಿ ಶಾಸಕ ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಅಶೋಕ ಕಾಟವೆ, ವಿಎಕೆ ಫೌಂಡೇಷನ್ ಸಂಸ್ಥಾಪಕ ಹಾಗೂ ಬಿಜೆಪಿ ಮುಖಂಡ ವೆಂಕಟೇಶ ಕಾಟವೆ, ಮುಖಂಡರಾದ ರಂಗಾಬದ್ದಿ, ಬಾಳು ಮಗಜಿಕೊಂಡಿ, ವಿಠ್ಠಲ ಲದವಾ, ಭಾಸ್ಕರ ಜಿತೂರಿ, ನಾಗೇಶ್ ಕಲ್ಬುರ್ಗಿ, ದೀಪಕ ಮಗಜಿಕೊಂಡಿ, ಸೀಮಾ ಲದವಾ ಅವರು ಪ್ರಭು ಶ್ರೀರಾಮನ ಪ್ರತಿಮೆ ನೀಡಿ ಸನ್ಮಾನಿಸಿದರು.ಪ್ರತಿಭಾ ಪವಾರ, ಸಂಗೀತಾ ಬದ್ದಿ, ಸವಿತಾ ಚವ್ಹಾಣ, ವಿಜಯಲಕ್ಷ್ಮಿ ಬದ್ದಿ, ಪ್ರಕಾಶ ಬುರ್ಬುರೆ, ರಾಜು ಜರತಾಘರ್, ಪ್ರವೀಣ ಪವಾರ, ಸಚಿನ್ ಕಾಟವೆ, ನಾಗರಾಜ ಪಟ್ಟಣ, ದೀಪಕ ಜಿತೂರಿ, ಸಾಯಿ ದಲಬಂಜನ, ವೆಂಕಟೇಶ ಹಬೀಬ, ಹನಮಂತ ಬದ್ದಿ, ಅಮಿತ್ ಇರಕಲ್, ಸುನಿಲ್ ಕಾಟವೆ, ಮಂಜು ಊಟವಾಲೆ, ಸಚಿನ್ ಪೂಜಾರಿ, ಸಂತೋಷ ಕಾಟವೆ, ಕುಶಾಲ್ ಪವಾರ್ ಸೇರಿದಂತೆ ಹಲವರಿದ್ದರು.