ಭಾರತೀಯ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕಿ, ನಾದದೇವಿ ಎಂದೇ ಖ್ಯಾತರಾದ ದಿವಂಗತ ಎಸ್. ಜಾನಕಿ ಅವರ ಸ್ಮರಣಾರ್ಥ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಸನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರೋಟರಿ, ಲಯನ್ಸ್ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ನಾದದೇವಿಯ ಸ್ಮರಣಾಂಜಲಿ ಕಾರ್ಯಕ್ರಮವು ಅಪೂರ್ವ ಜನಸ್ಪಂದನೆಗೆ ಪಾತ್ರವಾಯಿತು. ಜಿಲ್ಲೆಯ ಹೆಸರಾಂತ ಗಾಯಕ- ಗಾಯಕಿಯರು ಎಸ್. ಜಾನಕಿ ಅವರು ಹಾಡಿದ ಕನ್ನಡದ ಸದಾಬಹಾರ ಗೀತೆಗಳನ್ನು ಸುಮಧುರವಾಗಿ ಪ್ರಸ್ತುತಪಡಿಸಿದರು. ಪ್ರತಿಯೊಂದು ಗೀತೆಯೂ ಸಭಿಕರನ್ನು ಭಾವಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು.
ಕನ್ನಡಪ್ರಭ ವಾರ್ತೆ ಹಾಸನ
ಭಾರತೀಯ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕಿ, ನಾದದೇವಿ ಎಂದೇ ಖ್ಯಾತರಾದ ದಿವಂಗತ ಎಸ್. ಜಾನಕಿ ಅವರ ಸ್ಮರಣಾರ್ಥ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಸನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರೋಟರಿ, ಲಯನ್ಸ್ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ನಾದದೇವಿಯ ಸ್ಮರಣಾಂಜಲಿ ಕಾರ್ಯಕ್ರಮವು ಅಪೂರ್ವ ಜನಸ್ಪಂದನೆಗೆ ಪಾತ್ರವಾಯಿತು.ಕಾರ್ಯಕ್ರಮದ ಸಭಾಂಗಣ ಜನರಿಂದ ಕಿಕ್ಕಿರಿದು ತುಂಬಿದ್ದು, ಎಸ್. ಜಾನಕಿ ಅವರ ಅಪಾರ ಜನಪ್ರಿಯತೆಗೆ ಸಾಕ್ಷಿಯಾಯಿತು.ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶಗೌಡ ಅವರು ಎಸ್. ಜಾನಕಿ ಅವರ ಸಂಗೀತ ಸಾಧನೆ ಮತ್ತು ಕನ್ನಡ ಚಿತ್ರರಂಗಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿ, ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಎರಡು ನಿಮಿಷಗಳ ಮೌನ ಆಚರಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಗೀತಾಸಕ್ತರು, ಸಾಹಿತ್ಯಾಭಿಮಾನಿಗಳು, ಕಲಾವಿದರು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ನಾದದೇವಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಜಿಲ್ಲೆಯ ಹೆಸರಾಂತ ಗಾಯಕ- ಗಾಯಕಿಯರು ಎಸ್. ಜಾನಕಿ ಅವರು ಹಾಡಿದ ಕನ್ನಡದ ಸದಾಬಹಾರ ಗೀತೆಗಳನ್ನು ಸುಮಧುರವಾಗಿ ಪ್ರಸ್ತುತಪಡಿಸಿದರು. ಪ್ರತಿಯೊಂದು ಗೀತೆಯೂ ಸಭಿಕರನ್ನು ಭಾವಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು.
ಯಶಸ್ಸಿಗೆ ಸಹಕರಿಸಿದ ಗಾಯಕ-ಗಾಯಕಿಯರು, ವಾದ್ಯಗೋಷ್ಠಿ ಕಲಾವಿದರು, ತಾಂತ್ರಿಕ ಸಿಬ್ಬಂದಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗಣ್ಯರು ಹಾಗೂ ಸಾವಿರಾರು ಸಂಗೀತಾಭಿಮಾನಿಗಳಿಗೆ ಪರಿಷತ್ತಿನ ಪದಾಧಿಕಾರಿ ಸತೀಶ್ ಪಿಳ್ಳೇನಹಳ್ಳಿ ಕೃತಜ್ಞತೆ ಸಲ್ಲಿಸಿದರು. ಈ ಸ್ಮರಣಾಂಜಲಿ ಕಾರ್ಯಕ್ರಮವು ಕೇವಲ ಶ್ರದ್ಧಾಂಜಲಿಗೆ ಸೀಮಿತವಾಗದೆ, ಕನ್ನಡ ಸಂಗೀತ ಪರಂಪರೆಯ ಶ್ರೇಷ್ಠ ಗಾಯನಕ್ಕೆ ಸಲ್ಲಿಸಿದ ಅಪೂರ್ವ ಗೌರವವಾಗಿ ರೂಪುಗೊಂಡಿತು. ಎಸ್. ಜಾನಕಿ ಅವರ ಅಮರ ಸ್ವರಸಂಪತ್ತನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಾರ್ಥಕ ಪ್ರಯತ್ನವಾಗಿ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರೂ ಸ್ವರ ಉಳಿದಿದೆ. ನೆನಪು ಚಿರಂತನ ಎಂಬ ಭಾವನೆಯೊಂದಿಗೆ ಭಾವುಕರಾಗಿ ನಿರ್ಗಮಿಸಿದರು.ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಹಂಪನಹಳ್ಳಿ ತಿಮ್ಮೇಗೌಡ, ಎನ್.ಎಲ್. ಚನ್ನೇಗೌಡ, ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ಮಾಜಿ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಜೆ.ಪಿ. ಶೇಖರ್, ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಬಾಳ್ಳುಗೋಪಾಲ್, ಜಿಲ್ಲಾ ಪತ್ರಕರ್ತರ ಸಂಘದ
ನಿಕಟಪೂರ್ವ ಅಧ್ಯಕ್ಷ ಕೆ ಎಚ್ ವೇಣುಕುಮಾರ್, ನಾಗರಾಜು ಹೆತ್ತೂರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಬಿ. ಶಂಕರ್, ಚಂದ್ರಶೇಖರ್, ಕಸಾಪ ಹಾಸನ ತಾಲೂಕು ಅಧ್ಯಕ್ಷ ಮಮತೇಶ್, ಚನ್ನರಾಯಪಟ್ಟಣದ ಹಡೇನಹಳ್ಳಿ ಲೋಕೇಶ್, ಆಲೂರಿನ ಗೋಪಾಲಕೃಷ್ಣ, ರೊ. ಮಂಜುನಾಥ್, ಸಾಂಸ್ಕೃತಿಕ ಸಂಯೋಜಕ ವಜ್ರಕುಮಾರ್, ಹಾಸನ ಲಯನ್ ಕ್ಲಬ್ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಸಿ.ಬಿ. ನಾಗರಾಜು, ಖಜಾಂಚಿ ಪಂಚಾಕ್ಷರಿ, ಪ್ರಾಂತೀಯ ಅಧ್ಯಕ್ಷ ಎಚ್.ಕೆ. ನಾಗೇಶ್, ಹಾಸನಾಂಬ ಲಯನ್ ಕ್ಲಬ್ ಅಧ್ಯಕ್ಷ ಕೆ.ಕೆ. ಮೋಹನ್ ಕುಮಾರ್, ರಾಜ್ಯ ವಕೀಲರ ಸಂಘದ ಸದಸ್ಯ ಜೆ.ಪಿ. ಶೇಖರ್, ಅಸೋರಿಯೇಟ್ ಕ್ಯಾಬಿನೆಟ್ ಕಾರ್ಯದರ್ಶಿ ತಿಮ್ಮರಾಯಶೆಟ್ಟಿ, ಕುವೆಂಪು ಯುವಕರ ಬಳಗದ ಅಧ್ಯಕ್ಷ ಗಿರೀಶ್, ಸುಮಂತ್, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವೇಣುಕುಮಾರ್, ಪತ್ರಕರ್ತ ವೆಂಕಟೇಶ್, ಹೆತ್ತೂರು ನಾಗರಾಜ್, ಒಕ್ಕಲಿಗರ ವೇದಿಕೆಯ ರಾಜೇಶ್ ಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಈ ಸಂದರ್ಭದಲ್ಲಿ ಗಾಯಕಿ ಬನುಮಾ ಗುರುದತ್ತ, ವೇದಶ್ರೀ, ಸಂಗೀತಾ, ಹಾಗೂ ಗಾಯಕರಾದ ಮಂಜುನಾಥ್ ಮತ್ತು ದೇವರಾಜ್ ಜಾಡಘಟ್ಟ ಅವರು ಎಸ್. ಜಾನಕಿ ಅವರ ಸದಾಬಹಾರ ಗೀತೆಗಳನ್ನು ಭಾವಪೂರ್ಣವಾಗಿ ಪ್ರಸ್ತುತಪಡಿಸಿ ಶ್ರೋತೃಗಳ ಮನಗೆದ್ದರು.