ಸಾರಾಂಶ
ಡಾ. ರಾಜಾ ವೆಂಕಟಪ್ಪ ನಾಯಕರು ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಸುರಪುರ ಜನತೆಗೆ ಅಪಾರ ಕೊಡುಗೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಸುರಪುರ
ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಅಗಲಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಬುದ್ಧವಾಸಿಯಾದ್ದರಿಂದ ನುಡಿನಮನ ಪುಣ್ಯಾನುಮೋದನೆ ದಿನ ಆಚರಿಸಲಾಯಿತು.ಪ್ರಥಮವಾಗಿ ಸಂಘಜ್ಯೋತಿ ಭಂತೇಜಿಯವರಿಂದ ಪಂಚಶೀಲ ಪಠಣ ಮತ್ತು ವಿಶೇಷವಾಗಿ ಪುಣ್ಯಾನುನೋಧನೆಯ ಪೂಜೆಯನ್ನು ಮೊಂಬತ್ತಿ ಬೆಳಗಿ ಭಾವಚಿತ್ರಕ್ಕೆ ಪುಷ್ಪಾಚರಣೆಯನ್ನು ಮಾಡಿ ಸಾಮೂಹಿಕವಾಗಿ ನೆರವೇರಿಸಲಾಯಿತು.
ಬೌದ್ಧಸಾಹಿತಿ ಬುದ್ಧಘೋಷ ದೇವೇಂದ್ರ ಹೆಗ್ಗಡೆ ಮಾತನಾಡಿ, ಡಾ. ರಾಜಾ ವೆಂಕಟಪ್ಪ ನಾಯಕರು ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಸುರಪುರ ಜನತೆಗೆ ಅಪಾರ ಕೊಡುಗೆ ನೀಡಿದ್ದಾರೆ. ಬುದ್ಧ ವಿಹಾರಕ್ಕೆ ಸ್ಥಳೀಯ ಸರಕಾರದ ಅನುದಾನದಲ್ಲಿ ಬಹುಪಾಲು ಕಾಮಗಾರಿಗಳನ್ನು ನೆರವೇರಲು ಮತ್ತು ಇಲ್ಲಿಯ ಸ್ವರ್ಣ ಹೆಬ್ಬಂಡೆಯ ಮೇಲೆ ಇವತ್ತು ಪಂಚಶೀಲ ಧ್ವಜ ಶಾಶ್ವತವಾಗಿ ಹಾರಾಡುತ್ತಿದೆ ಎಂದರು.ದೇವಿಂದ್ರಪ್ಪ ಪತ್ತಾರ, ಟ್ರಸ್ಟ್ ಅಧ್ಯಕ್ಷ ಹೊಸಮನಿ ಮಾತನಾಡಿದರು. ಭೀಮರಾಯ ಸಿಂದಗೇರಿ, ವೆಂಕಟೇಶ್ವರ ಸುರಪುರ, ಮಾಳಪ್ಪ ಕಿರದಳ್ಳಿ, ಶಿವಶಂಕರ್ ಹೊಸಮನಿ, ಶರಣಪ್ಪ ತಳವಾರಗೇರಾ, ಮಂಜುನಾಥ ಹೊಸಮನಿ, ಹಣಮಂತ ತೇಲ್ಕರ್, ವೈಜನಾಥ ಹೊಸಮನಿ, ಪರಶುರಾಮ್ ಗೋವಾ, ಬಸವರಾಜ ಶೆಳ್ಳಗಿ, ನಾಗರಾಜ ಬೇವಿನಗೀಡ, ಭೀಮಶಂಕರ್ ಹೊಸಮನಿ, ಗುರು ಹುಲಿಕರ್, ಪ್ರಮೋದ, ಮಹಿಳಾ ಉಪಾಸಿಕಾರಾದ ಮಂಜುಳಾ ಸುರಪುರ, ಶಿಲ್ಪಾ ಹುಲಿಮನಿ, ಸುನೀತಾ ಕಿರದಳ್ಳಿ, ಶಿವಮೊಗೆಮ್ಮ ಹೊಸಮನಿ, ಭೀಮಬಾಯಿ ಕಟ್ಟಿಮನಿ ಸೇರಿದಂತೆ ಇತರರಿದ್ದರು.