ಸಾರಾಂಶ
ಉದ್ಯಮಿ, ಭಾರತ್ ವಿಕಾಸ್ ಪರಿಷದ್ ಸದಸ್ಯ ವಿಶ್ವನಾಥ್ ಭಟ್, ೨೫,೦೦೦ ರು.ಗಳ ದೇಣಿಗೆಯ ಚೆಕ್ಕನ್ನು ತನುಲಾ ತರುಣ್ ಅವರಿಗೆ ಹಸ್ತಾಂತರಿಸಿ, ಸದಸ್ಯರಿಂದಲೂ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಭಾರತ್ ವಿಕಾಸ್ ಪರಿಷದ್ ಭಾರ್ಗವ ಶಾಖೆ ವತಿಯಿಂದ ಕಾರ್ಕಳ ತಾಲೂಕಿನ ಬೈಲೂರಿನ ಹೊಸಬೆಳಕು ಆಶ್ರಮದ ಮುಖ್ಯ ಟ್ರಸ್ಟಿ ತನುಲಾ ತರುಣ್ ಅವರ ಸಾಮಾಜಿಕ ಸೇವೆ, ಅನಾಥ ಬಂಧುಗಳ ರಕ್ಷಣೆ ಮತ್ತು ಪೋಷಣೆ ಗುರುತಿಸಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಇದ ತನುಲಾ, ಮನುಷ್ಯನು ಇಹ ಲೋಕ ತ್ಯಜಿಸುವಾಗ ತಾನು ಮಾಡಿದ ಒಳ್ಳೆಯ ಕಾರ್ಯಗಳು, ಗಳಿಸಿದ ಪುಣ್ಯ ತನ್ನೊಂದಿಗೆ ಬರುತ್ತವೆ. ಹಾಗಾಗಿ ಸೇವಾ ಕ್ಷೇತ್ರವನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದರು. ಸುಮಾರು ೧೮೦ ಅನಾಥ ಬಂಧುಗಳ ಪಾಲನೆಗೆ ಸಹಾಯ ಹಸ್ತ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಉದ್ಯಮಿ, ಭಾರತ್ ವಿಕಾಸ್ ಪರಿಷದ್ ಸದಸ್ಯ ವಿಶ್ವನಾಥ್ ಭಟ್, ೨೫,೦೦೦ ರು.ಗಳ ದೇಣಿಗೆಯ ಚೆಕ್ಕನ್ನು ತನುಲಾ ತರುಣ್ ಅವರಿಗೆ ಹಸ್ತಾಂತರಿಸಿ, ಸದಸ್ಯರಿಂದಲೂ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ವಿಕಾಸ್ ಪರಿಷದ್‌ನ ಸಂಚಾಲಕ ಪಂ. ವಸಂತ ಭಟ್ ವಹಿಸಿದ್ದರು. ಕಾರ್ಯದರ್ಶಿ ಸುಬ್ರಾಯ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಮೋಹನ್ ಶಾನುಭಾಗ್ ವಂದಿಸಿದರು.