ಗಾಂಧಿ ಭವನದಲ್ಲಿ ವಿನೂತನ ರೀತಿಯಲ್ಲಿ ಮಹಾತ್ಮನಿಗೆ ಗಾನ ನಮನ

| Published : Feb 01 2024, 02:04 AM IST

ಗಾಂಧಿ ಭವನದಲ್ಲಿ ವಿನೂತನ ರೀತಿಯಲ್ಲಿ ಮಹಾತ್ಮನಿಗೆ ಗಾನ ನಮನ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮ ಗಾಂಧೀಜಿಗೆ ಗಾನನಮನ ಕಾಯ೯ಕ್ರಮ ಮಡಿಕೇರಿ ಗಾಂಧಿ ಭವನದಲ್ಲಿ ಅರ್ಥಪೂರ್ಣವಾಗಿ ಜರುಗಿತು. ಮಡಿಕೇರಿಯ 22 ಗಾಯಕ, ಗಾಯಕಿಯರು ಗಾನನಮನದಲ್ಲಿ ಪಾಲ್ಗೊಂಡು ಮಹಾತ್ಮ ಗಾಂಧೀಜಿಗೆ ಪ್ರಿಯವಾಗಿದ್ದ ದೇಶಭಕ್ತಿಗೀತೆ, ಕೀರ್ತನೆ, ಭಜನೆಗಳನ್ನು ಹಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್, ಕೊಡಗು ಜಾನಪದ ಪರಿಷತ್ ಮತ್ತು ಕೊಡಗು ಜಿಲ್ಲಾ ಕನ್ನಡ ಮತ್ತು ಸಂಸೖತಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿತ ಮಹಾತ್ಮ ಗಾಂಧೀಜಿಗೆ ಗಾನನಮನ ಕಾಯ೯ಕ್ರಮ ನಗರದ ಗಾಂಧಿ ಭವನದಲ್ಲಿ ಅರ್ಥಪೂರ್ಣವಾಗಿ ಜರುಗಿತು.

ಮಡಿಕೇರಿಯ 22 ಗಾಯಕ, ಗಾಯಕಿಯರು ಗಾನನಮನದಲ್ಲಿ ಪಾಲ್ಗೊಂಡು ಮಹಾತ್ಮ ಗಾಂಧೀಜಿಗೆ ಪ್ರಿಯವಾಗಿದ್ದ ದೇಶಭಕ್ತಿಗೀತೆ, ಕೀರ್ತನೆ, ಭಜನೆಗಳನ್ನು ಹಾಡಿದರು. ಮಡಿಕೇರಿಯ ಶೃತಿ ಲಯ ತಂಡದ ವೀಣಾ ಹೊಳ್ಳ, ಲಕ್ಷ್ಮೀ ಈಶ್ವರ್‌ ಭಟ್‌, ಈಶ್ವರ ಭಟ್, ಮಮತಾಶಾಸ್ತ್ರಿ, ತನುಶ್ರೀ, ಸ್ವಾತಿ ಅರುಣ್, ಸವಿತಾ ಗುರುಪ್ರಸಾದ್, ಆರತಿ, ಸುಧಾ ಎಸ್ ಪ್ರಸಾದ್. ವಿಜಯ ವಿನಾಯಕ ಭಜನಾ ಮಂಡಳಿಯ ಗಾಯಕಿಯರಾದ ಅರವಿಂದ್ ಅಣ್ಣಪ್ಪ, ಮೀರಾ, ಶಾಂತಿ ಅಚ್ಚಯ್ಯ, ಪ್ರೇಮರಾಘವಯ್ಯ, ವಿಜಯಗೋಪಾಲಕೃಷ್ಣ ಭಟ್, ವೇದಾಶೆಟ್ಟಿ, ಭಕ್ತಿಗೀತೆ, ಕೀತ೯ನೆಗಳನ್ನು ಹಾಡಿದರು. ಜಿ.,ಚಿದ್ವಿಲಾಸ್, ಸಂಧ್ಯಾ ಚಿದ್ವಿಲಾಸ್, ವಂದನಾ ಪೊನ್ನಪ್ಪ, ಚಿತ್ರಾ ನಂಜಪ್ಪ, ಎ. ಹೇಮಾನಿ, ಮಂಜುಳಾ ರಾಮಕೃಷ್ಣ ಭಟ್ ಅವರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಬಿ ಜಿ. ಅನಂತಶಯನ, ಗೀತಾ ಸಂಪತ್ ಕುಮಾರ್, ಶಾಂತಿ ಅಚ್ಚಯ್ಯ, ಜಯಲಕ್ಷ್ಮೀ ಕೆ., ಚಿತ್ರಾ ಆರ್ಯನ್, ನಾಡು, ನುಡಿ ಸಂಸ್ಕೃತಿಯನ್ನು ಬಿಂಬಿಸುವ ಹಾಡುಗಳನ್ನು ಹಾಡಿದರು. ಕಗ್ಗದ ಸಾಲಿನ ಮೂಲಕ ಎಸ್.ಐ.ಮುನೀರ್ ಅಹಮ್ಮದ್ ಗಮನಸೆಳೆದರೆ, ಯುವಗಾಯಕ, ಗಾಯಕಿಯರಾದ ಅಮೃತ್ ರಾಜ್, ಅನಿತ್ ರಾಜ್, ಗಾಯತ್ರಿ ಚೆರಿಯಮನೆ, ಸುಮನಾ ಶ್ರೀಹರಿ, ಭಾವಗೀತೆ ಹಾಡಿದರು. ಪುಟಾಣಿಗಳಾದ ಸುಮೇಧಾ ರಾವ್, ಮಿನುಗು ಎಸ್. ಭಜನೆಯ ಮೂಲಕ ಗಮನ ಸೆಳೆದರು.ಕಾರ್ಯಕ್ರಮದ ಬಗ್ಗೆಮಾಹಿತಿ ನೀಡಿದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ, ನಗರದ ಗಾಯಕ, ಗಾಯಕಿಯರನ್ನು ಒಟ್ಟುಗೂಡಿಸಿ ವಿಭಿನ್ನ ರೀತಿಯ ಗಾಯನ ಕಾರ್ಯ೯ಕ್ರಮ ಆಯೋಜಿಸುವ ಮೂಲಕ ವಿನೂತನ ಕಾರ್ಯಕ್ರಮಕ್ಕೆ ತಾಲೂಕು ಜಾನಪದ ಪರಿಷತ್ ನಾಂದಿ ಹಾಡಿದೆ. ಇಂಥ ಪ್ರಯತ್ನಗಳು ಮುಂದೆಯೂ ವಿವಿಧ ಸಂಘಸಂಸ್ಥೆಗಳಿಂದ ಮುಂದುವರಿಯಂತಾಗಬೇಕು ಎಂದು ಆಶಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಸಹಾಯಕ ಗವರ್ನರ್ ದೇವಣಿರ ತಿಲಕ್, ನಿರ್ದೇಶಕ ಜಿ.ಆರ್. ರವಿಶಂಕರ್, ರೋಟರಿ ವುಡ್ಸ್ ವಲಯ ಸೇನಾನಿ ಸಂಪತ್ ಕುಮಾರ್, ನಿರ್ದೇಶಕಿ ಪದ್ಮಗಿರಿ, ಕೊಡಗು ವಿದ್ಯಾಲಯದ ವ್ಯವಸ್ಥಾಪಕ ರವಿ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಪ್ರಮುಖರಾದ ಟಿ.ಪಿ.ರಮೇಶ್, ನವೀನ್ ಅಂಬೆಕಲ್, ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು, ಇನ್ನರ್ ವೀಲ್ ಸದಸ್ಯೆಯರಾದ ಗೌರಿಶಿವಪ್ರಸಾದ್, ಮಲ್ಲಿಗೆ ಪೈ, ಸವಿತಾಭಟ್, ದಸರಾ ಸಾಂಸ್ಕೃತಿಕ ಸಮಿತಿ ಸದಸ್ಯ ಕುಡೆಕಲ್ ಸಂತೋಷ್, ಮಡಿಕೇರಿ ತಾಲೂಕು ಯುವಜಾನಪದ ಬಳಗದ ನಿರ್ದೇಶಕ ಕೌಸರ್, ಕೊಡಗು ಜಾನಪದ ಪರಿಷತ್ ಸದಸ್ಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಜಾನಪದ ಪರಿಷತ್ ನಿರ್ದೇಶಕಿ ಕೆ. ಜಯಲಕ್ಷ್ಮೀ ನಿರೂಪಿಸಿದರು. ನಿರ್ದೇಶಕಿ ವೀಣಾಕ್ಷಿ ನಿರ್ವಹಿಸಿದರು. ಹಿರಿಯ ಕಲಾವಿದ ವಿ.ಟಿ. ಶ್ರೀನಿವಾಸ್ ನಿಧನಕ್ಕೆ ಮೌನಾಚರಣೆ ಮೂಲಕ ಕಲಾಪ್ರೇಮಿಗಳು ಸಂತಾಪ ಸೂಚಿಸಿದರು.