ಕನ್ನಡ ಭಾಷೆಯನ್ನು ಗೀತೆಗಳ ಮೂಲಕ ಇಡೀ ದೇಶಕ್ಕೆ ಪರಿಚಯಿಸಿದರು. ಸುಮಾರು 48 ಸಾವಿರ ಗೀತೆಗಳನ್ನು ಹಾಡಿ ಗಿನ್ನಿಸ್ ದಾಖಲೆ ನಿರ್ಮಿಸಿದರು. ಮಧುರ ಧ್ವನಿ ಎಂದಿಗೂ ಚಿರಸ್ತಾಯಿಯಾಗಿದ್ದು, ಯುಗಾದಿ ಬಂದರೆ ಇವರ ಧ್ವನಿಯ ‘ಯುಗ ಯುಗಾದಿ ಕಳೆದರೂ ಗೀತೆಯ ಮೂಲಕ ಜೀವಂತವಾಗಲಿದೆ.
ಕಿಕ್ಕೇರಿ:
ಸಂಗೀತ ಲೋಕದಲ್ಲಿ ಕೋಗಿಲೆ ಕಂಠದ ಮಂತ್ರಶಕ್ತಿ ಮೂಲಕ ವಿಶ್ವಕ್ಕೆ ಪರಿಚಿತವಾದವರು ಗಾಯಕಿ ಎಸ್.ಜಾನಕಿ ಎಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಹೇಮಗಿರಿ ಶಾಖಾಮಠದ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.ಗಡಿಭಾಗದ ಆನೆಗೊಳ ಗ್ರಾಮದ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸ್ವರ ಸಾಮ್ರಾಜ್ಞೆ ಎಸ್.ಜಾನಕಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಯಕರಿಗೆ ಭಾಷೆಯ ಗಡಿ ಇಲ್ಲ ಎನ್ನುವುದಕ್ಕೆ ಜಾನಕಿ ಅಮ್ಮ ಅವರು ಸುಮಾರು 17 ಭಾಷೆಗಳಲ್ಲಿ ಸುಮಧುರವಾಗಿ ಗೀತೆಗಳನ್ನು ಹಾಡಿ ಎಲ್ಲರ ಮನದಲ್ಲಿ ಉಳಿದು ಗಾನಗಂಧರ್ವೆಯಾಗಿ ಚಿರಸ್ಥಾಯಿಯಾಗಿದ್ದಾರೆ ಎಂದರು.
ಅದ್ಭುತ ಗಾಯಕಿ ಇಹಲೋಕದಲ್ಲಿ ಇಲ್ಲವಾದರೂ ಇವರ ಗಾನ ಮಾಧುರ್ಯಎಲ್ಲರ ಮನದಲ್ಲಿ ಹಸಿರಾಗಿದೆ. ಗಾಯನ ಲೋಕಕ್ಕೆ ಇವರ ಅಗಲಿಕೆ ಬಲುನಷ್ಟ, ನೋವು ತಂದಿದೆ ಎಂದರು.ಕನ್ನಡ ಭಾಷೆಯನ್ನು ಗೀತೆಗಳ ಮೂಲಕ ಇಡೀ ದೇಶಕ್ಕೆ ಪರಿಚಯಿಸಿದರು. ಸುಮಾರು 48 ಸಾವಿರ ಗೀತೆಗಳನ್ನು ಹಾಡಿ ಗಿನ್ನಿಸ್ ದಾಖಲೆ ನಿರ್ಮಿಸಿದರು. ಮಧುರ ಧ್ವನಿ ಎಂದಿಗೂ ಚಿರಸ್ತಾಯಿಯಾಗಿದ್ದು, ಯುಗಾದಿ ಬಂದರೆ ಇವರ ಧ್ವನಿಯ ‘ಯುಗ ಯುಗಾದಿ ಕಳೆದರೂ ಗೀತೆಯ ಮೂಲಕ ಜೀವಂತವಾಗಲಿದೆ ಎಂದರು.
ದಕ್ಷಿಣ ಭಾರತದ ಅಪರೂಪದ ಗಾಯಕಿಯಾಗಿ 4 ಬಾರಿ ರಾಷ್ಟ್ರೀಯ ಪ್ರಶಸ್ತಿ, ನೂರಾರು ಪ್ರಶಸ್ತಿಗಳನ್ನು ಪಡೆದಿದ್ದರೂ ನಿರ್ಗವಿಯಾಗಿ ಬದುಕಿ ಬಾಳಿ ತೋರಿಸಿದವರು. ಹುಟ್ಟಿದ್ದು ಆಂಧ್ರ ಪ್ರದೇಶದಲ್ಲಾದರೂ ಬದುಕಿ ಇಹಲೋಕಕ್ಕೆ ತೆರಳಿದ್ದು, ನಮ್ಮಕನ್ನಡ ನಾಡಿನಲ್ಲಿ. ಕನ್ನಡ ನಾಡಿನ ಮೇಲೆ ಇದ್ದ ಇವರ ಅಪರಿಮಿತ ಪ್ರೇಮ ಮಾದರಿಯಾಗಿದೆ ಎಂದು ನೆನೆದರು.ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಅನೆಗೊಳ, ಹೇಮಗಿರಿ, ಚಿನಕುರುಳಿ, ಪಾಂಡವಪುರ, ಕೆ.ಆರ್.ಪೇಟೆ, ಧಾರವಾಡ ಮತ್ತಿತರ ಪ್ರದೇಶದಲ್ಲಿನ ಮುಖ್ಯಶಿಕ್ಷಕರು, ಪ್ರಾಂಶುಪಾಲರು ಆಗಮಿಸಿದ್ದರು. ಮುಖ್ಯಶಿಕ್ಷಕ ಪುರುಷೋತ್ತಮ್, ಪ್ರಕಾಶ ಮೆನಾಗರ, ದೇವರಾಜು ಮತ್ತಿತರರು ಉಪಸ್ಥಿತರಿದ್ದರು.