ಸಾರಾಂಶ
ಚನ್ನಪಟ್ಟಣ: ತಾಲೂಕಿನ ನೀರಾವರಿ ಯೋಜನೆಗೆ ಎಂಜಿನಿಯರ್ ವೆಂಕಟೇಗೌಡರ ಕೊಡುಗೆ ಅಪಾರ. ೧೯೮೬ರಿಂದ ೨೦೧೭ರವರೆಗೆ ತಾಲೂಕಿನ ಗರಕಹಳ್ಳಿ ಏತ ನೀರಾವರಿ ಯೋಜನೆಯಿಂದ ಕಣ್ವ-ಶಿಂಷಾ ಯೋಜನೆ ಪೂರ್ಣವಾಗುವವರೆಗೆ ೨೦ ವರ್ಷ ತಾಲೂಕಿನ ನೀರಾವರಿಗೆ ಸೇವೆ ಮೀಸಲಿಟ್ಟು ಲಕ್ಷಾಂತರ ರೈತರ ಬದುಕು ಅಸನಾಗಲು ಶ್ರಮಿಸಿದ ಮಹನೀಯರಲ್ಲಿ ವೆಂಕಟೇಗೌಡರು ಪ್ರಮುಖರು. ಅವರ ಅಕಾಲಿಕ ಮರಣದಿಂದ ತಾಲೂಕಿಗೆ ತುಂಬಲಾರದ ನಷ್ಟವಾಗಿದೆ ಎಂದು ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಸಂತಾಪ ಸೂಚಿಸಿದರು.
ಪಟ್ಟಣದ ಕಾವೇರಿ ಸರ್ಕಲ್‌ನಲ್ಲಿ ಕಕಜ ವೇದಿಕೆಯಿಂದ ಹೃದಯಾಘಾತಕ್ಕೀಡಾಗಿರುವ ಎಂಜಿನಿಯರ್ ವೆಂಕಟೇಗೌಡರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಬಳಿಕ ತಾಲೂಕಿನ ೩೦೦ ರೈತರನ್ನು ಇಸ್ರೇಲ್ ಪ್ರವಾಸಕ್ಕೆ ಕರೆದೊಯ್ದು ಅವರಿಗೆ ನೀರಿನ ಸದ್ಬಳಕೆ ಮತ್ತು ಅಲ್ಲಿನ ಕೃಷಿಯ ಬಗ್ಗೆ ಅರಿವು ಮೂಡಿಸುವ ಚಿಂತನೆ ಹೊಂದಿದ್ದರು. ಆದರೆ ದುರದೃಷ್ಠವಷಾತ್ ಹೃದಯಾಘಾತದಿಂದ ನಿಧನರಾಗಿದ್ದು, ಅವರನ್ನು ಸನ್ಮಾನಿಸಬೇಕು ಎಂದಿದ್ದ ವೇದಿಕೆಯಿಂದ ಅವರ ಶ್ರದ್ಧಾಂಜಲಿ ಸಭೆ ಮಾಡುವಂತಾಗಿದೆ ಎಂದು ವಿಷಾದಿಸಿದರು.ಚಿಂತಕ ತಿಮ್ಮೇಶ್‌ಪ್ರಭು ಮಾತನಾಡಿ, ಕಣ್ವ-ಶಿಂಷಾ ಯೋಜನೆಯ ರೂವಾರಿ ಎಂಜಿನಿಯರ್ ವೆಂಕಟೇಗೌಡರು. ಅವರು ತಾಲೂಕಿನ ನಿಜವಾದ ಭಗೀರಥ ಎಂದರೆ ತಪ್ಪಾಗಲಾರದು ಎಂದರು.
ನಿವೃತ್ತ ಪ್ರಾಂಶುಪಾಲ ನಿಂಗೇಗೌಡರು(ಎನ್‌ಜಿ) ಮಾತನಾಡಿ, ಇಂದು ತಾಲೂಕಿನ ಕೆರೆಗಳಲ್ಲಿ ನೀರು ತುಂಬಿದ್ದರೆ ಹಾಗೂ ಸತ್ತೇಗಾಲದಿಂದ ಜಿಲ್ಲೆಗೆ ಶಾಶ್ವತ ನೀರು ಸಿಗುತ್ತಿದ್ದರೆ ಅದಕ್ಕೆ ವೆಂಕಟೇಗೌಡರೇ ಕಾರಣ. ಸರ್ಕಾರಗಳು ಅನುದಾನ ನೀಡಬಹುದು, ಶಾಸಕರು ಇಚ್ಚಾಶಕ್ತಿಯಿಂದ ಯೋಜನೆ ಮಾಡಿಸಬಹುದು. ಆದರೆ ಈ ಯೋಜನೆಯನ್ನು ರೂಪಿಸುವ ಅಧಿಕಾರಿಗಳ ಶ್ರಮವೇ ಹೆಚ್ಚಿದೆ. ಈ ನಿಟ್ಟಿನಲ್ಲಿ ವೆಂಕಟೇಗೌಡರ ಕೊಡುಗೆ ಅಪಾರ ಎಂದರು.ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ಬ್ರಹ್ಮಣೀಪುರ ಕೆಂಪರಾಜು, ಚೌ,ಪು.ಸ್ವಾಮಿ. ಎ.ವಿ.ಹಳ್ಳಿ ಚೌಡೇಗೌಡ, ತಿಮ್ಮರಾಜು (ಎಂಟಿಆರ್) ಎ.ವಿ.ಹಳ್ಳಿ ಸಿದ್ದೇಗೌಡ ಮಾತನಾಡಿದರು. ಮಳೂರುಪಟ್ಟಣದ ಚಂದ್ರು, ನಿವೃತ್ತ ಶಿಕ್ಷಕ ಪುಟ್ಟಪ್ಪಾಜಿ, ಚಿಕ್ಕಣ್ಣಪ್ಪ, ಮರಿಅಂಕೇಗೌಡ, ಅಪ್ಪಾಜಿ, ಜೆಸಿಬಿ ಲೋಕೇಶ್, ಬೀರೇಶ್, ಸಿದ್ದಪ್ಪಾಜಿ ಶಂಕರ್ ಇತರರು ಶ್ರದ್ಧಾಂಜಲಿ ಅರ್ಪಿಸಿದರು. ಪೊಟೋ೨೨ಸಿಪಿಟಿ೩:
ಚನ್ನಪಟ್ಟಣ ನಗರದ ಕಾವೇರಿ ಸರ್ಕಲ್‌ನಲ್ಲಿ ಕಕಜ ವೇದಿಕೆಯಿಂದ ವೆಂಕಟೇಗೌಡರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.