ಟಾಟಾ ನಿಧನಕ್ಕೆ ಗುಬ್ಬಿಯಲ್ಲಿ ಅಭಿಮಾನಿಗಳಿಂದ ಶ್ರದ್ಧಾಂಜಲಿ

| Published : Oct 12 2024, 12:00 AM IST

ಸಾರಾಂಶ

ವಿಶ್ವ ವಿಖ್ಯಾತ ಉದ್ಯಮಿ ಪದ್ಮವಿಭೂಷಣ ಡಾ.ರತನ್ ನಾವಲ್ ಟಾಟಾ ಅವರ ನಿಧನಕ್ಕೆ ಗುಬ್ಬಿ ಪಟ್ಟಣದ ಅಭಿಮಾನಿಗಳ ತಂಡ ರತನ್ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು

ಕನ್ನಡ ಪ್ರಭ ವಾರ್ತೆ ಗುಬ್ಬಿ

ವಿಶ್ವ ವಿಖ್ಯಾತ ಉದ್ಯಮಿ ಪದ್ಮವಿಭೂಷಣ ಡಾ.ರತನ್ ನಾವಲ್ ಟಾಟಾ ಅವರ ನಿಧನಕ್ಕೆ ಗುಬ್ಬಿ ಪಟ್ಟಣದ ಅಭಿಮಾನಿಗಳ ತಂಡ ರತನ್ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಪಟ್ಟಣದ ಸರ್ಕಲ್ ಬಳಿ ರತನ್ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಅಭಿಮಾನಿಗಳು ಭಾರತ ಮಾತೆಯ ಹೆಮ್ಮೆಯ ಪುತ್ರ ಘೋಷಣೆ ಕೂಗಿದರು. ಎರಡು ನಿಮಿಷಗಳ ಕಾಲ ಮೌನಚರಿಸಿ ಟಾಟಾ ಅವರ ಸಾಧನೆ ಕುರಿತು ಗಣ್ಯರು ನುಡಿ ನಮನ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ ಮಾತನಾಡಿ ಉದ್ಯಮದ ನಾನಾ ಮಜಲುಗಳಲ್ಲಿ ಸಾರ್ವಭೌಮ ಸಾಧಿಸಿದ ರತನ್ ಟಾಟಾ ಬಾಲ್ಯದಲ್ಲಿ ಸಾಕಷ್ಟು ನೋವುಂಡು ಗೆದ್ದು ಸಾಧಿಸಿದವರು. ಟಾಟಾ ಪ್ರಾಡೆಕ್ಟ್ ಇಂದಿಗೂ ವಿಶ್ವ ವ್ಯಾಪಿಸಿದ ಬ್ರಾಂಡ್ ಎನಿಸಿದೆ. ದೇಶದ ಕೈಗಾರಿಕಾ ವಲಯ ಮುಂದುವರೆಯಲು ಟಾಟಾ ಕುಟುಂಬದ ಶ್ರಮ ಸ್ಮರಣೀಯ. ಇಂತಹ ಭಾರತದ ಹೆಮ್ಮೆಯ ಪುತ್ರನ ನಿಧನ ಇಡೀ ದೇಶಕ್ಕೆ ನಷ್ಟ ಎಂದು ಸಂತಾಪ ಸೂಚಿಸಿದರು.ಇದೇ ಸಂದರ್ಭದಲ್ಲಿ ಟಾಟಾ ಅಭಿಮಾನಿಗಳಾದ ಸಿ.ಆರ್.ಶಂಕರ್ ಕುಮಾರ್, ಪ್ರಮೋದ್, ಜಿ.ಆರ್.ರಮೇಶ್, ಅರ್ಜುನ್, ಜಿ.ಎಸ್.ಮಂಜುನಾಥ್, ಮಧು, ಜಿ.ಎಲ್.ರಂಗನಾಥ್, ವಿರೂಪಾಕ್ಷ, ಆಟೋಮೊಬೈಲ್ ಶ್ರೀನಿವಾಸ್, ಜಿ.ಸಿ.ರಾಕೇಶ್, ಮಂಜುನಾಥರೆಡ್ಡಿ, ಗುಂಡೂರಾವ್, ಚೇತನ್, ಶಶಿಧರ್ ಇತರರು ಇದ್ದರು.