ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ಅಟ್ಟಹಾಸದಿಂದ ಪ್ರಾಣತೆತ್ತ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪದಾಧಿಕಾರಿಗಳು ಗುರುವಾರ ಸಂಜೆ ನಾರಾಯಣಶಾಸಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಆವರಣದಲ್ಲಿ ಸಾಮೂಹಿಕ ಶಾಂತಿಮತ್ರ ಜಪಿಸಿ, ಶ್ರದ್ಧಾಂಜಲಿ ಸಲ್ಲಿಸಿದರುವಿವಿಧಡೆಯಿಂದ ಆಗಮಿಸಿದ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರಗಾಮಿ ಚಟುವಟಿಕೆ ನಡೆಸಿರುವುದು ನಿಜಕ್ಕೂ ಖಂಡನೀಯ, ಪಾಕಿಸ್ತಾನವು ನೇರವಾಗಿ ಯುದ್ಧ ಮಾಡಲು ಧೈರ್ಯವಿಲ್ಲದೆ ಇಂತಹ ಏಷ್ಯಾ ಕೃತ್ಯಗಳನ್ನು ನಡೆಸುತ್ತಿದೆ, ಕಾಶ್ಮೀರದಲ್ಲಿ ಭಯೋತ್ಪಾದನೆ ಉಂಟು ಮಾಡಿ ಅದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ, ಅದರ ಪ್ರಯತ್ನ ಎಂದಿಗೂ ಸಫಲವಾಗುವುದಿಲ್ಲ, ಕೇಂದ್ರ ಸರ್ಕಾರವು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು, ಕಾಶ್ಮೀರ ಕಣವಿಗಳಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆಗಳನ್ನು ನಿರ್ಮೂಲನೆ ಮಾಡುವ ಮೂಲಕ ಪ್ರಾಣ ಕಳೆದುಕೊಂಡಿರುವ ಪ್ರವಾಸಿಗರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಿದರುಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಡಾ. ಲಕ್ಷ್ಮೀದೇವಿ,ಬ್ರಾಹ್ಮಣ ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ವೆಂಗಿಪುರ ಮಠದ ಇಳೈ ಸ್ವಾಮೀಜಿ, ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ್, ನಗರಪಾಲಿಕ ಮಾಜಿ ಸದಸ್ಯರಾದ ಮ.ವಿ. ರಾಮಪ್ರಸಾದ್, ಎಂ.ಡಿ. ಪಾರ್ಥಸಾರಥಿ, ಕಾಂಗ್ರೆಸ್ ಮುಖಂಡರಾದ ಎನ್.ಎಂ. ನವೀನ್ ಕುಮಾರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎಚ್.ಎನ್. ಶ್ರೀಧರಮೂರ್ತಿ, ಅರ್ಚಕ ಸಂಘದ ಅಧ್ಯಕ್ಷ ವಿದ್ವಾನ್ ಕೃಷ್ಣಮೂರ್ತಿ, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಟಿ ಎಸ್ ಅರುಣ್, ಜಯಸಿಂಹ ಶ್ರೀಧರ್, ವಿಜಯ್ ಕುಮಾರ್, ರಂಗನಾಥ್, ಪ್ರಶಾಂತ್, ಚಕ್ರಪಾಣಿ, ಸುಧೀಂದ್ರ, ಪುಟ್ಟಸ್ವಾಮಿ, ನಾಗರಾಜ್, ಸಿ ಎಸ್ ಚಂದ್ರಶೇಖರ್, ರವಿಶಂಕರ್, ಪುನೀತ್ ಕೂಡ್ಲೂರು, ಶ್ರೀಕಾಂತ್ ಕಶ್ಯಪ್, ವಾಸುದೇವಮೂರ್ತಿ, ಹರೀಶ್, ಸತ್ಯನಾರಾಯಣ್, ವಿಘ್ನೇಶ್ವರ ಭಟ್, ರಾಮು, ಭಾಗ್ಯಶ್ರೀ ಭಟ್, ಲತಾ ಬಾಲಕೃಷ್ಣ, ಸುಂದರಮೂರ್ತಿ, ಶ್ರೀನಿವಾಸ್ ಶರ್ಮಾ, ಪ್ರವೀಣ್ ಕುಮಾರ್, ಮಂಜುನಾಥ್ ಇದ್ದರು.