ಸಾರಾಂಶ
ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನಿಧನ ತುಂಬಲಾರದ ನಷ್ಟವಾಗಿದೆ. ಬಡವರು ಮತ್ತು ಧೀನ ದಲಿತರ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಕಂದಾಯ ಸಚಿವರಾಗಿದ್ದಾಗ ರಾಜ್ಯದ ಅವಿವಾಹಿತ, 45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮನಸ್ವಿನಿ ವೇತನ ಎಂಬ ಯೋಜನೆ ಜಾರಿಗೆ ತಂದಿದ್ದು ಹಾಗೂ ರಾಜ್ಯದ ಎಲ್ಲ ಸ್ಮಶಾನಗಳನ್ನು ಸಾರ್ವಜನಿಕ ಸ್ಮಶಾನವೆಂದು ಘೋಷಿಸಿದ ಕೀರ್ತಿ ಸಲ್ಲುತ್ತದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಂಸದ ವಿ.ಶ್ರೀನಿವಾಸ ಪ್ರಸಾದ್ ನಿಧನಕ್ಕೆ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.ರಾಜಕೀಯ ಕ್ಷೇತ್ರದಲ್ಲಿ ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಸಮಾಜ ಸೇವೆ ಮಾಡಿ ಜನಪ್ರಿಯರಾಗಿದ್ದರು. ಬಡವರು ಮತ್ತು ಧೀನ ದಲಿತರ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಶ್ರೀ ಮಠದೊಂದಿಗೆ ಶ್ರೀನಿವಾಸ ಪ್ರಸಾದ್ ರವರ ಅವಿನಾಭಾವ ಸಂಬಂಧವಿತ್ತು. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬವರ್ಗದವರಿಗೆ ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.ವಿ.ಶ್ರೀನಿವಾಸ್‌ಪ್ರಸಾದ್ ನಿಧನಕ್ಕೆ ಡಿ.ಸಿ.ತಮ್ಮಣ್ಣ ಸಂತಾಪ
ಭಾರತೀನಗರ: ದಲಿತರ ಏಳಿಗೆಗಾಗಿ ಸತತ 50 ವರ್ಷಗಳಿಂದ ಶ್ರಮಿಸುತ್ತ ಬಂದಿದ್ದ, ಕಳಂಕ ರಹಿತ ರಾಜಕಾರಣಿಯಾದ ವಿ.ಶ್ರೀನಿವಾಸ್‌ಪ್ರಸಾದ್ ಅವರ ಅಕಾಲಿಕ ನಿಧನದಿಂದ ಆಘಾತವಾಗಿದೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.ಶ್ರೀನಿವಾಸ್ ಪ್ರಸಾದ್ ಅವರ ಸಾವು ದಲಿತರಿಗಲ್ಲದೆ, ಇತರ ಶೋಷಿತರ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಪ್ರಸಾದ್ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಮಂತ್ರಿಯಾಗಿ ಯಾವುದೇ ಕಳಂಕವಿಲ್ಲದೆ ಅವರಿಗೆ ಕೊಟ್ಟ ಖಾತೆಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ.
ಕಂದಾಯ ಸಚಿವರಾಗಿದ್ದಾಗ ರಾಜ್ಯದ ಅವಿವಾಹಿತ, 45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮನಸ್ವಿನಿ ವೇತನ ಎಂಬ ಯೋಜನೆ ಜಾರಿಗೆ ತಂದಿದ್ದು ಹಾಗೂ ರಾಜ್ಯದ ಎಲ್ಲ ಸ್ಮಶಾನಗಳನ್ನು ಸಾರ್ವಜನಿಕ ಸ್ಮಶಾನವೆಂದು ಘೋಷಿಸಿದ ಕೀರ್ತಿ ಸಲ್ಲುತ್ತದೆ. ಇಂತಹ ಒಬ್ಬ ನಾಯಕರನ್ನು ಕಳೆದುಕೊಂಡಿದ್ದು ನಮ್ಮ ದೌರ್ಭಾಗ್ಯ. ನನ್ನ ಆತ್ಮೀಯರಾಗಿದ್ದ ಶ್ರೀನಿವಾಸ್‌ಪ್ರಸಾದ್ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ತಮ್ಮಣ್ಣ ಪ್ರಾರ್ಥಿಸಿದ್ದಾರೆ.ಯುವ ರಾಜಕಾರಣಿಗಳಿಗೆ ಮಾದರಿ: ಮಧು ಜಿ.ಮಾದೇಗೌಡಭಾರತೀನಗರ:
ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನಿಧನ ತುಂಬಲಾರದ ನಷ್ಟವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸಂತಾಪ ಸೂಚಿಸಿದ್ದಾರೆ. ಶ್ರೀನಿವಾಸ್ ಪ್ರಸಾದ್ ಹಿರಿಯ ರಾಜಕಾರಣಿಗಳಾಗಿ ನೈತಿಕತೆಯ ಮಾರ್ಗದರ್ಶಕರಾಗಿ ಕಂಡು ಬರುತ್ತಾರೆ. ಯಾವುದೇ ಪಕ್ಷ ರಾಜಕಾರಣದಲ್ಲಿದ್ದರೂ ಎಲ್ಲರ ವಿಶ್ವಾಸ ಗಳಿಸಿದ್ದ ಸ್ನೇಹಜೀವಿ ವ್ಯಕ್ತಿಯಾಗಿದ್ದರು. ಇಂತಹ ವ್ಯಕ್ತಿತ್ವಗಳು ಇಂದು ಅಪರೂಪ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.;Resize=(128,128))
;Resize=(128,128))
;Resize=(128,128))