ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ: ಗೀತಾ ನಾಗರಾಜು

| Published : Apr 02 2024, 01:02 AM IST

ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ: ಗೀತಾ ನಾಗರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ, ಮತ, ಪಂಥ, ಧರ್ಮ ಭೇಧವಿಲ್ಲದೆ ತ್ರಿವಿಧ ದಾಸೋಹದ ಮೂಲಕ ಕರ್ನಾಟಕದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸಿದ ಕೀರ್ತಿ ಪದ್ಮಭೂಷಣ, ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಸಲ್ಲಬೇಕು ಎಂದು ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಾಗರಾಜು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಧುಗಿರಿ

ಜಾತಿ, ಮತ, ಪಂಥ, ಧರ್ಮ ಭೇಧವಿಲ್ಲದೆ ತ್ರಿವಿಧ ದಾಸೋಹದ ಮೂಲಕ ಕರ್ನಾಟಕದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸಿದ ಕೀರ್ತಿ ಪದ್ಮಭೂಷಣ, ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಸಲ್ಲಬೇಕು ಎಂದು ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಾಗರಾಜು ಅಭಿಪ್ರಾಯಪಟ್ಟರು.

ಸೋಮವಾರ ಇಲ್ಲಿನ ಡೂಂಲೈಟ್‌ ಸರ್ಕಲ್‌ನಲ್ಲಿ ವೀರಶೈವ ತಾಲೂಕು ಘಟಕ, ವೀರಶೈವ ಮಹಿಳಾ ಘಟಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಡಾ.ಶಿವಕುಮಾರ ಸ್ವಾಮಿಜಿ ಅವರ 117 ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಸವಾದಿ ಶರಣರ ಆದರ್ಶಗಳನ್ನು ಆಚರಿಸಿ ತೋರಿಸಿದ ಕಾಯಕ ಜೀವಿ ಡಾ.ಶಿವಕುಮಾರ ಸ್ವಾಮಿಜಿ ಅವರ ತತ್ವಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳ ಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಎನ್‌.ಗಂಗಣ್ಣ ಮಾತನಾಡಿ, ಬಡತನದಲ್ಲಿ ಸೊರಗುತ್ತಿದ್ದ ಸಾಕಷ್ಟು ಮಕ್ಕಳಿಗೆ ಅನ್ನ ಆಶ್ರಯ ನೀಡಿ ವಿದ್ಯಾವಂತರನ್ನಾಗಿಸಿ ಸಮಾಜಕ್ಕೆ ಕೊಟ್ಟವರು ಸ್ವಾಮಿಜಿ. ಅಕ್ಷರ ನೀಡಿ ಬದುಕು ಕಟ್ಟಿಕೊಟ್ಟರು. ಅವರ ಸೇವೆ ಅವಿಸ್ಮರಣೀಯ ಎಂದರು.

ಮಧುಗಿರಿ ಟೌನ್‌ ಕೋ ಆಪರೇಟಿವ್‌ ಸೊಸೈಟಿ ಉಪಾಧ್ಯಕ್ಷ ರುದ್ರರಾಧ್ಯ ,ಪುರಸಭೆ ಸದಸ್ಯ ಲಾಲಪೇಟೆ ಮಂಜುನಾಥ್‌, ಗುತ್ತಿಗೆದಾರರುಗಳಾದ ಶ್ರೀಕಂಠರಾಧ್ಯ,ನಾಗರಾಜು,ಕಾರ್ತಿಕ್‌ ಆರಾಧ್ಯ,ಫರ್ನಿಚರ್‌ ಮಂಜುನಾಥ್‌,ಯತೀಶ್‌ ಬಾಬು, ಮೊಬೈಲ್‌ ರಾಜು,ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ, ನಟರಾಜು,ದೋಲಿಬಾಬು,ಗಣೇಶ್‌,ಪಾಂಡುರಂಗಯ್ಯ,ಕಿಶೋರ್‌, ಶರಣೆಯರಾದ ಶಶಿಕಲಾ ಮಂಜುನಾಥ್‌, ಸಮಾಹರೀಶ್‌, ಸಾಯಿಸತೀಶ್‌, ಮಮತಾ ಚಂದ್ರಶೇಖರ್‌, ಶ್ವೇತಾ ಸಿದ್ದೇಶ್, ಲತಾಪ್ರದೀಪ್‌, ನಂಜಮ್ಮ ಸಿದ್ದಪ್ಪ ಸೇರಿ ಇತರರಿದ್ದರು.