ಗಣೇಶ ವಿಸರ್ಜಿಸಿ ಬರುವಾಗ ಕಳಚಿದ ಟ್ರ್ಯಾಲಿ: ಇಬ್ಬರಿಗೆ ಗಾಯ

| Published : Sep 10 2024, 01:31 AM IST

ಗಣೇಶ ವಿಸರ್ಜಿಸಿ ಬರುವಾಗ ಕಳಚಿದ ಟ್ರ್ಯಾಲಿ: ಇಬ್ಬರಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮಲಪ್ರಭ ನದಿಯಲ್ಲಿ ಗಣೇಶ ವಿಸರ್ಜನೆ ಮಾಡಿ ಮರಳುವಾಗ ಟ್ಯ್ರಾಕ್ಟರ್ ಹಿಂದಿನ ಟ್ರ್ಯಾಲಿ ಕಳಚಿ ಬಿದ್ದ ಪರಿಣಾಮ ಟ್ರ್ಯಾಕ್ಟರ್ನಲ್ಲಿ ಇದ್ದ ಇಬ್ಬರಿಗೆ ತೀವ್ರ ಗಾಯಗಳಾದ ಘಟನೆ ರಾಯಚೂರು-ಬೆಳಗಾವಿ ಮುಖ್ಯರಸ್ತೆಯ ದೊಡ್ಡಣವರ್ ಮೈನ್ಸ್ ಬಳಿ ಭಾನುವಾರ ನಡೆದಿದೆ.

ಅಮೀನಗಡ: ಮಲಪ್ರಭ ನದಿಯಲ್ಲಿ ಗಣೇಶ ವಿಸರ್ಜನೆ ಮಾಡಿ ಮರಳುವಾಗ ಟ್ಯ್ರಾಕ್ಟರ್‌ ಹಿಂದಿನ ಟ್ರ್ಯಾಲಿ ಕಳಚಿ ಬಿದ್ದ ಪರಿಣಾಮ ಟ್ರ್ಯಾಕ್ಟರ್‌ನಲ್ಲಿ ಇದ್ದ ಇಬ್ಬರಿಗೆ ತೀವ್ರ ಗಾಯಗಳಾದ ಘಟನೆ ರಾಯಚೂರು-ಬೆಳಗಾವಿ ಮುಖ್ಯರಸ್ತೆಯ ದೊಡ್ಡಣವರ್ ಮೈನ್ಸ್ ಬಳಿ ಭಾನುವಾರ ನಡೆದಿದೆ.

ಪಟ್ಟಣದ ತೇರಿನಮನೆ ಬಳಿಯ ಗಣೇಶೋತ್ಸವ ಸಮಿತಿಯವರು ಭಾನುವಾರ ರಾತ್ರಿ ಕಮತಗಿ ಬಳಿಯ ಮಲಪ್ರಭಾ ನದಿಯಲ್ಲಿ ಗಣೇಶನನ್ನು ವಿಸರ್ಜಿಸಿ ಹಿಂದಿರುಗಿ ಅಮೀನಗಡಕ್ಕೆ ಬರುವಾಗ ರಾಯಚೂರು-ಬೆಳಗಾವಿ ಮುಖ್ಯರಸ್ತೆಯ ದೊಡ್ಡಣವರ್ ಮೈನ್ಸ್ ಬಳಿ, ಟ್ರ್ಯಾಕ್ಟರ್ ಹಿಂದಿನ ಟ್ರ್ಯಾಲಿಯ ಕೊಂಡಿ ಕಳಚಿಬಿದ್ದ ಪರಿಣಾಮ ಟ್ರ್ಯಾಕ್ಟರ್ ರಸ್ತೆಯ ಪಕ್ಕಕ್ಕೆ ಉರುಳಿಬಿದಿದೆ. ಈ ವೇಳೆ ಟ್ರ್ಯಾಕ್ಟರ್‌ನಲ್ಲಿದ್ದ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಈ ಬಗ್ಗೆ ಅಮೀನಗಡ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.