ಸೌಹಾರ್ದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಸಿದ್ದಾಪುರದ ಪತ್ರಕರ್ತರ ತಂಡಕ್ಕೆ ಟ್ರೋಫಿ

| Published : Jan 16 2025, 12:45 AM IST

ಸೌಹಾರ್ದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಸಿದ್ದಾಪುರದ ಪತ್ರಕರ್ತರ ತಂಡಕ್ಕೆ ಟ್ರೋಫಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಪಂದ್ಯಾವಳಿಯಲ್ಲಿ ಪೊಲೀಸ್ ತಂಡ, ಫಾರೆಸ್ಟ್ ತಂಡ, ಹೆಸ್ಕಾಂ ತಂಡ, ತಾಲೂಕು ಪಂಚಾಯಿತಿ ತಂಡ, ಪ್ರಾಥಮಿಕ ಶಾಲಾ ಶಿಕ್ಷಕರ ತಂಡ, ಮಾಧ್ಯಮಿಕ ಶಾಲಾ ಶಿಕ್ಷಕರ ತಂಡ, ಕಂದಾಯ ಇಲಾಖೆಯ ತಂಡಗಳು ಭಾಗವಹಿಸಿದ್ದವು.

ಸಿದ್ದಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮಾಧ್ಯಮ ಪ್ರತಿನಿಧಿಗಳ ಸಂಘ ಹಾಗೂ ತಾಲೂಕಿನ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಎರಡು ದಿನಗಳ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ತಾಲೂಕಿನ ಕಡಕೇರಿಯ ಸುಭಾಶ್ಚಂದ್ರ ಮೈದಾನ ಮತ್ತು ಡಾ. ಅಂಬೇಡ್ಕರ್ ಮೈದಾನಗಳಲ್ಲಿ ಜರುಗಿತು.ಅಂತಿಮ ಪಂದ್ಯದಲ್ಲಿ ತಾಲೂಕು ಪತ್ರಕರ್ತರ ತಂಡ ಕೋ- ಆಪರೇಟಿವ್ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದು ಟ್ರೋಫಿಯನ್ನು ಪಡೆದುಕೊಂಡಿತು. ಕೋ- ಆಪರೇಟಿವ್ ತಂಡ ರನ್ನರ್ ಅಪ್ ಟ್ರೋಫಿಯನ್ನು ಪಡೆದುಕೊಂಡಿತು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತೃತೀಯ, ಹೆಸ್ಕಾಂ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಉತ್ತಮ ಬ್ಯಾಟ್‌ಮನ್ ಪ್ರಶಸ್ತಿಯನ್ನು ಕೋ- ಆಪರೇಟಿವ್ ತಂಡದ ಕೇಶವ, ಉತ್ತಮ ಬೌಲರ್ ಪ್ರಶಸ್ತಿಯನ್ನು ತಾಲೂಕು ಪತ್ರಕರ್ತರ ತಂಡದ ಚಂದ್ರು, ಪಂದ್ಯಪುರುಷ ಪ್ರಶಸ್ತಿಯನ್ನು ತಾಲೂಕು ಪತ್ರಕರ್ತರ ತಂಡದ ವಸಂತ ಹೆಗಡೆ ಪಡೆದುಕೊಂಡರು.ಈ ಪಂದ್ಯಾವಳಿಯಲ್ಲಿ ಪೊಲೀಸ್ ತಂಡ, ಫಾರೆಸ್ಟ್ ತಂಡ ,ಹೆಸ್ಕಾಂ ತಂಡ, ತಾಲೂಕು ಪಂಚಾಯಿತಿ ತಂಡ, ಪ್ರಾಥಮಿಕ ಶಾಲಾ ಶಿಕ್ಷಕರ ತಂಡ, ಮಾಧ್ಯಮಿಕ ಶಾಲಾ ಶಿಕ್ಷಕರ ತಂಡ, ಕಂದಾಯ ಇಲಾಖೆಯ ತಂಡಗಳು ಭಾಗವಹಿಸಿದ್ದವು.ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ತಹಸೀಲ್ದಾರ್‌ ಎಂ.ಆರ್. ಕುಲಕರ್ಣಿ ಅವರು, ಕ್ರೀಡೆ ನಮ್ಮನ್ನು ಮಾನಸಿಕವಾಗಿ, ಶಾರೀರಿಕವಾಗಿ ಸದೃಢಗೊಳಿಸುತ್ತದೆ. ಇಂದೊಂದು ಅಚ್ಚುಕಟ್ಟಾದ ಪಂದ್ಯಾವಳಿ. ಎಲ್ಲ ಆಟಗಾರರೂ ಸ್ಫೂರ್ತಿ, ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಷ್ಟೇ ಉತ್ತಮ ರೀತಿಯಲ್ಲಿ ಪಂದ್ಯಾವಳಿ ಜರುಗಲಿ ಎಂದು ಹಾರೈಸಿದರು.ಹೆಸ್ಕಾಂ ಎಇ ನಾಗರಾಜ ಪಾಟೀಲ, ಬೇಡ್ಕಣಿ ಗ್ರಾಪಂ ಸದಸ್ಯ ಕೃಷ್ಣಮೂರ್ತಿ ಕಡಕೇರಿ, ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ, ಪ್ರಾ.ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಗುರುರಾಜ ನಾಯ್ಕ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಮಾಧ್ಯಮ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕನ್ನೇಶ ಕೋಲಸಿರ್ಸಿ ಉಪಸ್ಥಿತರಿದ್ದರು.ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ ಸ್ವಾಗತಿಸಿ, ನಿರೂಪಿಸಿದರು. ಪತ್ರಕರ್ತ ನಾಗರಾಜ ನಾಯ್ಕ ಮಾಳ್ಕೋಡ ವಂದಿಸಿದರು.ದಾಂಡೇಲಿಯಲ್ಲಿ ಸಂಭ್ರಮದ ಸಂಕ್ರಾಂತಿ

ದಾಂಡೇಲಿ: ನಗರದ ಸುತ್ತಮುತ್ತಲಿರುವ ಸ್ಥಳೀಯರು ಹಾಗೂ ಪರಊರುಗಳಿಂದ ಬಂದ ಜನರು ಮಕರ ಸಂಕ್ರಾಂತಿ ಹಬ್ಬದ ಭಾಗವಾಗಿ ಕಾಳಿ ನದಿಯಲ್ಲಿ ಭಕ್ತಿಪೂರ್ವಕವಾಗಿ ಗಂಗಾ ಪೂಜೆಯನ್ನು ಸಲ್ಲಿಸಿ, ಭಕ್ತಿಭಾದಿಂದ ನದಿಯಲ್ಲಿ ಪುಣ್ಯಸ್ನಾನ ಮಾಡಿದರು.ದಾಂಡೇಲಿ ಈಶ್ವರ ದೇವಸ್ಥಾನದ ಹತ್ತಿರ ಹಾಗೂ ಸಮೀಪ ಮೌಳಂಗಿ ಇಕೋ ಪಾರ್ಕ್‌ನಲ್ಲಿ, ಕಾಳಿ ನದಿಯಲ್ಲಿ ಸಾವಿರಾರು ಜನರು ಪುಣ್ಯ ಸ್ನಾನ ಮಾಡಿದರು.

ಹೆಚ್ಚಿದ ಪ್ರವಾಸಿಗ ಹಿನ್ನೆಲೆ ಪೊಲೀಸರು ಹಾಗೂ ಅರಣ್ಯ ಇಲಾಖೆಯವರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು. ದಾಂಡೇಲಿ ಎಸಿಎಫ್ ಸಂತೋಷ ಚೌಹಾಣ್, ವಲಯ ಅರಣ್ಯಾಧಿಕಾರಿ ಎನ್.ಎಲ್. ನದಾಫ್, ಉಪ ವಲಯ ಅರಣ್ಯಾಧಿಕಾರಿ ಆನಂದ ರಾಠೋಡ, ಸಂದೀಪ ನಾಯಕ ಮೌಳಂಗಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿನೋದ್ ಮೈನಾಗೋಳು ಹಾಗೂ ದಾಂಡೇಲಿ ಗ್ರಾಮೀಣ ಠಾಣೆ ಪಿಎಸ್ಐ ಜಗದೀಶ್ ನಾಯ್ಕ, ಶಿವಾನಂದ ನವಲಗಿ, ಕೃಷ್ಣಾ ಪಾಟೀಲ ಹಾಗೂ ಸಿಬ್ಬಂದಿ ಬಂದೋಬಸ್ತ್ ಮಾಡಿದರು.