ಸಾರಾಂಶ
ಸಿಂಧನೂರಿನ ನುಲಿಯ ಚಂದಯ್ಯ ವೃತ್ತದಲ್ಲಿರುವ ಅವರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು
ಸಿಂಧನೂರು: ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಸೋಮವಾರ ನುಲಿಯ ಚಂದಯ್ಯ ಆಚರಿಸಲಾಯಿತು.
ಈ ವೇಳೆ ತಹಸೀಲ್ದಾರ್ ಅರುಣ ದೇಸಾಯಿ ಮಾತನಾಡಿ, ಶರಣರು ಸತ್ಯ, ಶುದ್ಧ ಕಾಯಕ, ಪ್ರಾಮಾಣಿಕತೆ ಮತ್ತು ದಾಸೋಹ ಪ್ರವೃತ್ತಿಯನ್ನು ಹೊಂದಿದ್ದರು. ಅವರ ಕಾಲದಲ್ಲಿ ಶೋಷಣೆಗೆ ಅವಕಾಶ ಇರಲಿಲ್ಲ. ಧಾರ್ಮಿಕ ಮತ್ತು ಸಾಮಾಜಿಕ ಶೋಷಣೆಯನ್ನು ವಚನಕಾರರು ಪ್ರಬಲವಾಗಿ ವಿರೋಧಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಶರಣರು ಶೋಷಣಾ ರಹಿತ ಸಮಾಜದ ಕನಸನ್ನು ಕಂಡಿದ್ದರು. ಈಗಲೂ ಅವರ ಕನಸು ಸಂಪೂರ್ಣವಾಗಿ ನನಸಾಗಿಲ್ಲ. ಇನ್ನು ಮುಂದಾದರೂ ಯುವ ಸಮುದಾಯ ಶರಣರ ಶರಣರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಬಿಜೆಪಿ ಮುಖಂಡರಾದ ರಾಜೇಶ್ ಹಿರೇಮಠ, ಶಿವಬಸನಗೌಡ ಗೊರೆಬಾಳ, ಎಚ್.ಎನ್. ಬಡಿಗೇರ, ಕುಳುವ ಮಹಾ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಭಜಂತ್ರಿ, ಯಮನಪ್ಪ ವಂಕಲಕುಂಟಿ, ತಿಮ್ಮಪ್ಪ ಉದ್ಭಾಳ, ಬಾಲಪ್ಪ ಮನ್ನಾಪುರ ಉಪಸ್ಥಿತರಿದ್ದರು.