ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುವಾತನೇ ನಿಜವಾದ ಸದ್ಗುರು: ಡಾ. ಗಂಗಾಧರ ಶ್ರೀ

| Published : Mar 05 2024, 01:32 AM IST

ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುವಾತನೇ ನಿಜವಾದ ಸದ್ಗುರು: ಡಾ. ಗಂಗಾಧರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ಸಮೀಪದ ಹೆಡಗಿಮದ್ರಾ ಗ್ರಾಮದ ಶ್ರೀಶಾಂತ ಶಿವಯೋಗಿ ಜಾತ್ರಾ ಮಹೋತ್ಸವದ, ಧರ್ಮ ಸಂಸ್ಕೃತಿ ಉತ್ಸವಕ್ಕೆ ಅಬ್ಬೆತುಮಕೂರಿನ ಶ್ರೀವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ. ಡಾ. ಗಂಗಾಧರ ಮಹಾಸ್ವಾಮೀಜಿ ಚಾಲನೆ ನೀಡಿದರು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಸಂಕಲ್ಪ, ವಿಕಲ್ಪಗಳನ್ನು ಸಮಭಾವದಿಂದ ತೂಗಿ ಮಠಕ್ಕೆ ಬರುವ ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುವಾತನೇ ನಿಜವಾದ ಸದ್ಗುರುವಾಗುತ್ತಾನೆ ಎಂದು ಅಬ್ಬೆತುಮಕೂರಿನ ಶ್ರೀವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ನುಡಿದರು.

ತಾಲೂಕಿನ ಹೆಡಗಿಮದ್ರಾ ಗ್ರಾಮದ ಶ್ರೀ ಶಾಂತ ಶಿವಯೋಗಿ ಜಾತ್ರಾ ಮಹೋತ್ಸವದ ರಥೋತ್ಸವದ ನಂತರ ನಡೆದ ಧರ್ಮ ಸಂಸ್ಕೃತಿ ಉತ್ಸವಕ್ಕೆ ಚಾಲನೆ, ಆಶಿರ್ವಚನ ನೀಡಿದ ಅವರು, ಮಠಾಧೀಶರ ಬದುಕು ಹೂವಿನ ಹಾಸಿಗೆಯಲ್ಲ. ಭಕ್ತರೇ ಅವರ ಆಸ್ತಿ, ಅವರ ಸಂಭ್ರಮದಲ್ಲೇ ಖುಷಿ ಕಾಣುತ್ತಾರೆ ಎಂದರು.

ಶ್ರೀಶಾಂತ ಶಿವಯೋಗಿಗಳು ಜಲಪತ್ರದ ಬಿಂದುವಿನಂತೆ ಬದುಕಿ, ಲೌಕಿಕ ಜೀವನ ತೊರೆದು ಪಾರಮಾರ್ಥಿಕ ಬದುಕಿನಲ್ಲಿ ಸಾಧನೆ ಮಾಡಿ ಶಿವಯೋಗಿಗಳಾಗಿದ್ದಾರೆ. ಶ್ರೀಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಮಠವನ್ನು ವರ್ಷದಿಂದ ವರ್ಷಕ್ಕೆ ಪ್ರವರ್ಧಮಾನಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ ಮಾತನಾಡಿ, ಹಿಂದೂ ಧರ್ಮದ ಉಳಿವಿಗೆ ಮಠಾಧೀಶರ ಶ್ರಮ‌ ಅಪಾರವಾಗಿದೆ. ಶ್ರೀಮಠದ ಪೀಠಾಧಿಪತಿಗಳು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈ ಭಾಗದಲ್ಲಿ ಶಾಲೆ ಆರಂಭಿಸಿ ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ದೇವಾಪುರದ ಶಿವಮೂರ್ತಿ ಶಿವಾಚಾರ್ಯರು, ಅನಾದಿ ಕಾಲದಿಂದಲೂ ನಾಡಿನಲ್ಲಿ ಮಠ, ಮಂದಿರಗಳು ಜನರ ಸಂಕಷ್ಟಗಳಿಗೆ ಮಿಡಿಯುತ್ತಿವೆ. ಹೆಡಗಿಮದ್ರಾದ ಮಠಾಧೀಶರು ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ಧಾರ್ಮಿಕತೆಯಲ್ಲಿ ಶ್ರದ್ಧೆ ಹೊಂದಿದ್ದಾರೆ ಎಂದರು.

ನೇತ್ರತ್ವವನ್ನು ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ವಹಿಸಿದ್ದರು.

ಚೌಡಾಪುರಿ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯರು, ಆತನೂರಿನ ಶ್ರೀ ಅಭಿನವ ಗುರುಬಸವ ಸ್ವಾಮಿಗಳು, ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ, ರಾಮರಡ್ಡಿಗೌಡ ತಂಗಡಗಿ, ಮಹಾಂತಯ್ಯ ಸ್ವಾಮಿ ಹಿರೇಮಠ, ನಾಗರತ್ನ ಕುಪ್ಪಿ, ಡಾ. ಸಿ.ಎಂ. ಪಾಟೀಲ್, ಸುರೇಶ ಸಜ್ಜನ್, ಸೋಮಶೇಖರ್ ಮಣ್ಣೂರ, ಬಸವರಾಜಪ್ಪ ಪಾಟೀಲ್ ಬಿಳ್ಹಾರ, ಸಿ.ಎಸ್. ಮಾಲಿ ಪಾಟೀಲ್, ಭೀಮನಗೌಡ ಕ್ಯಾತನಾಳ, ವೆಂಕಟರಡ್ಡಿ ಪಾಟೀಲ್, ಲಿಂಗಪ್ಪ ಹತ್ತಿಮನಿ, ಸಿದ್ದುಗೌಡ ಕಾಮರಡ್ಡಿ, ಬಾಬುಗೌಡ ಮಾಚನೂರ, ವಿನಯ (ಅಪ್ಪು)ಗೌಡ ಪಾಟೀಲ್ ಇದ್ದರು. ರಾಚನಗೌಡ ಮುದ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರೀಶಗೌಡ ಮಾಲಿ ಪಾಟೀಲ್ ಸ್ವಾಗತಿಸಿದರು. ಶ್ರೀಮಠದ ವಿದ್ಯಾರ್ಥಿಗಳು ವಂದಿಸಿದರು.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಬೋಧನೆ ಮಾಡಿ, ಅರಿಷಡ್ವರ್ಗಗಳನ್ನು ನಿಯಂತ್ರಣಗೊಳಿಸಿ, ಸಾಧನೆ ಮಾಡಬೇಕು. ಮೀನು ಹಿಡಿಯಲು ಗಾಳ ಹಾಕಿದಾಗ ಅದರ ಮೋಹಕ್ಕೆ ಬಿದ್ದು ಮೀ‌ನು ಬಲಿಗೆ ಸಿಕ್ಕಿ ಬೀಳುತ್ತದೆ. ಅದರಂತೆ ಮನುಷ್ಯನ ಬದುಕು ಸಹ ವ್ಯಾಮೋಹಕ್ಕೆ ಒಳಗಾಗಿ ಬಲಿಯಾಗುತ್ತಿದೆ.

ಡಾ. ಗಂಗಾಧರ ಮಹಾಸ್ವಾಮಿಗಳು, ಅಬ್ಬೆತುಮಕೂರು.