ಸಾರಾಂಶ
ಇತಿಹಾಸ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಪುಳಕಿತನಾಗಿದ್ದೇನೆ. ಸನಾತನ ಧರ್ಮ ಉಳಿಸಲು ಅಮೆರಿಕದಲ್ಲಿ 500 ಎಕರೆ ಜಾಗದಲ್ಲಿ ಸನಾತನಾ ಧಾರ್ಮಿಕ ಕೇಂದ್ರ ಕಟ್ಟಿಸುತ್ತಿದ್ದೇವೆ. ಟ್ರಂಪ್ ಮೋದಿಗೂ ಪ್ರಿಯರಾಗಿದ್ದಾರೆ. ಅವರಿಂದ ಸನಾತನ ಧರ್ಮಕ್ಕೂ ಒಳ್ಳೆಯದಾಗಲಿದೆ ಎಂದ ಶಶಿಭೂಷಣ್ ಹೇಳಿದರು.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾನ್ಡ್ ಟ್ರಂಪ್ ಅವರ ವ್ಯವಹಾರ ಪಾಲುದಾರ (ಬಿಸಿನೆಸ್ ಪಾರ್ಟ್ನರ್) ಹೈದರಾಬಾದ್ ಮೂಲದ ಶಶಿಭೂಷಣ್ ಅವರು ಶನಿವಾರ ಭೇಟಿ ನೀಡಿದರು. ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.ಅಮೆರಿಕದಲ್ಲಿ ನೆಲೆಸಿರುವ ಹೈದರಾಬಾದ್ ಮೂಲದ ಶಶಿಭೂಷಣ್ ಅವರು ಡೊನಾಲ್ಡ್ ಟ್ರಂಪ್ ಬಿಸಿನೆಸ್ ಪಾರ್ಟ್ನರ್ ಆಗಿದ್ದು, ಅಮೆರಿಕದಲ್ಲಿ 500 ಎಕರೆ ಜಾಗದಲ್ಲಿ 3000 ಕೋಟಿ ರುಪಾಯಿ ವೆಚ್ಚದಲ್ಲಿ ಶಂಕರಾಚಾರ್ಯರ ಆಧ್ಯಾತ್ಮಿಕ ಕೇಂದ್ರ ಮತ್ತು ದೇವಸ್ಥಾನ ನಿರ್ಮಿಸುತ್ತಿದ್ದಾರೆ. ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ ''''''''ಎ'''''''' ಪ್ಯಾಕ್‌ನ್ನು ಶಶಿಭೂಷಣ್ ಮುನ್ನಡೆಸಿದ್ದರು. ಟ್ರಂಪ್ ಗೆಲುವಿನಲ್ಲೂ ‘ಎ’ ಪ್ಯಾಕ್ ಸಾಕಷ್ಟು ಶ್ರಮವಹಿಸಿದೆ.
ಈ ಸಂದರ್ಭ ಮಾತನಾಡಿದ ಶಶಿಭೂಷಣ್, ಇತಿಹಾಸ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಪುಳಕಿತನಾಗಿದ್ದೇನೆ. ಸನಾತನ ಧರ್ಮ ಉಳಿಸಲು ಅಮೆರಿಕದಲ್ಲಿ 500 ಎಕರೆ ಜಾಗದಲ್ಲಿ ಸನಾತನಾ ಧಾರ್ಮಿಕ ಕೇಂದ್ರ ಕಟ್ಟಿಸುತ್ತಿದ್ದೇವೆ. ಟ್ರಂಪ್ ಮೋದಿಗೂ ಪ್ರಿಯರಾಗಿದ್ದಾರೆ. ಅವರಿಂದ ಸನಾತನ ಧರ್ಮಕ್ಕೂ ಒಳ್ಳೆಯದಾಗಲಿದೆ ಎಂದ ಶಶಿಭೂಷಣ್ ಹೇಳಿದರು.ಈ ಸಂದರ್ಭದಲ್ಲಿ ಆಕಾಶ್ ನಾಯರ್ ಕೆರೆ, ಕಾರ್ತಿಕ್ ರೈ ಮತ್ತಿತರರು ಉಪಸ್ಥಿತರಿದ್ದರು.