ಸತ್ಯ, ಅಹಿಂಸೆ ವಿಶಿಷ್ಟ ಮೌಲ್ಯಗಳು: ಡಾ. ತೋಂಟದ ಸಿದ್ದರಾಮ ಶ್ರೀಗಳು

| Published : Oct 11 2025, 12:02 AM IST

ಸತ್ಯ, ಅಹಿಂಸೆ ವಿಶಿಷ್ಟ ಮೌಲ್ಯಗಳು: ಡಾ. ತೋಂಟದ ಸಿದ್ದರಾಮ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕವಾಗಿ, ಧಾರ್ಮಿಕವಾಗಿ, ಸತ್ಯ ಅಹಿಂಸೆಯಂತ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಇಷ್ಟಲಿಂಗ ಧರಿಸಬೇಕು. ಜಂಗಮಸೇವೆ ಮಾಡಬೇಕು. ಇಷ್ಟಲಿಂಗ ಸಮಾನತೆಯ ಸಂಕೇತ.

ಗದಗ: ಸತ್ಯ ಮತ್ತು ಅಹಿಂಸೆ ದುರ್ಗುಣಗಳನ್ನು ದೂರ ಮಾಡಿ ಸದ್ಗುಣಗಳು ಹೊರಹೊಮ್ಮುವಂತೆ ಮಾಡುತ್ತವೆ. ಸತ್ಯ ಮತ್ತು ಅಹಿಂಸೆ ವಿಶಿಷ್ಟ ಮೌಲ್ಯಗಳು ಎಂದು ಡಾ. ತೋಂಟದ ಸಿದ್ದರಾಮ ಶ್ರೀಗಳು ತಿಳಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2766ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು‌.

ಬಸವಣ್ಣ ಬ್ರಹ್ಮ ಪದವಿನೊಲ್ಲೆ ವಿಷ್ಣು ಪದವಿಯನೊಲ್ಲೆ ಎಂದರು. ಹಾಗೆಯೇ ಮಹಾತ್ಮ ಗಾಂಧೀಜಿ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟರೂ ಯಾವ ಅಧಿಕಾರ ಬಯಸಲಿಲ್ಲ. ಸತ್ಯ, ಅಹಿಂಸೆ ಮತ್ತು ಸಮಾನತೆಯ ಹಾದಿಯಲ್ಲಿ ಬಸವಣ್ಣ ಮತ್ತು ಗಾಂಧೀಜಿ ಸಾಗಿದರು. ದಯವೇ ಧರ್ಮದ ಮೂಲವಯ್ಯ ಇದರಲ್ಲಿ ಅಹಿಂಸೆ ಇದೆ. ಅಹಿಂಸೆಗೆ ತಲೆಬಾಗದ ವ್ಯಕ್ತಿಗಳೇ ಇಲ್ಲ. ಸಾಮಾಜಿಕವಾಗಿ, ಧಾರ್ಮಿಕವಾಗಿ, ಸತ್ಯ ಅಹಿಂಸೆಯಂತ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಇಷ್ಟಲಿಂಗ ಧರಿಸಬೇಕು. ಜಂಗಮಸೇವೆ ಮಾಡಬೇಕು. ಇಷ್ಟಲಿಂಗ ಸಮಾನತೆಯ ಸಂಕೇತ ಎಂದರು.

ರಣ ರವೀಂದ್ರ ಪಟ್ಟಣ ಉಪನ್ಯಾಸ ನೀಡಿದರು. ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಶೇಕಣ್ಣ ಕವಳಿಕಾಯಿ ಮಾತನಾಡಿದರು. ಲಿಂಗಾಯತ ಮಹಾಸಭಾದ ಅಧ್ಯಕ್ಷ ಕೆ.ಎಸ್. ಚಟ್ಟಿ ಉಪಸ್ಥಿತರಿದ್ದರು. ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ತಿಂಗಳ ಪರ್ಯಂತ ಮಹಾದಂಡನಾಯಕರಂತೆ ಮುಂಚೂಣಿಯಲ್ಲಿ ಇದ್ದು ಯಶಸ್ಸಿಗೆ ಕಾರಣರಾದ ಡಾ. ತೋಂಟದ ಸಿದ್ದರಾಮ ಸ್ವಾಮಿಗಳನ್ನು ಜಿಲ್ಲೆಯ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಸನ್ಮಾನಿಸಿದರು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಮಹೇಶ ಪುರಾಣಿಕಮಠ, ವಚನ ಚಿಂತನವನ್ನು ಮಹಾಂತೇಶ ಪುರಾಣಿಕಮಠ ನಡೆಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಡಾ. ಉಮೇಶ ಪುರದ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಮಹೇಶ್ ಗಾಣಿಗೇರ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಾಳ ನಿರೂಪಿಸಿದರು.