ಪರಿಪೂರ್ಣ ಪ್ಲಂಬರ್‌ ಆಗಲು ಪ್ರಯತ್ನಿಸಿ: ಶಿವಕುಮಾರ ಶೆಟ್ಟರ್‌

| Published : Mar 15 2025, 01:02 AM IST

ಪರಿಪೂರ್ಣ ಪ್ಲಂಬರ್‌ ಆಗಲು ಪ್ರಯತ್ನಿಸಿ: ಶಿವಕುಮಾರ ಶೆಟ್ಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕುಡಿಯುವ ನೀರಾಗಲೀ, ಒಳಚರಂಡಿ ವ್ಯವಸ್ಥೆ ವ್ಯವಸ್ಥಿತವಾಗಿ ನಿರ್ವಹಿಸುವ ಮೂಲಕ ಯಾವುದೇ ಕಟ್ಟಡ ಅಲಂಕಾರಿಕವಾಗಿ ಕಾಣಬೇಕೆಂದರೆ ಪರಿಣಿತಿ ಪಡೆದ ಫ್ಲಂಬರ್‌ನಿಂದ ಮಾತ್ರ ಸಾಧ್ಯ. ಅಲ್ಲದೇ, ಅವುಗಳ ನಿರ್ವಹಣೆಯ ಪರಿಣಿತಿ ಹೊಂದಿದ್ದರೆ ಆತ ಪರಿಪೂರ್ಣ ಫ್ಲಂಬರ್ ಎನಿಸಬಲ್ಲರ. ಆದ್ದರಿಂದ ಈ ಕೌಶಲಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು ಸಾಧ್ಯ ಎಂದು ದಾವಣಗೆರೆಯ ಕಾವೇರಿ ಮಾತಾ ಪ್ಲಂಬರ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಡಿ. ಶೆಟ್ಟರ್ ಹೇಳಿದ್ದಾರೆ.

- ವಿಶ್ವ ಪ್ಲಂಬರ್ ದಿನ ಪ್ರಯುಕ್ತ ಡಾ.ಪುಟ್ಟರಾಜ ಗವಾಯಿ ಗದ್ದುಗೆ ಪೂಜೆ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕುಡಿಯುವ ನೀರಾಗಲೀ, ಒಳಚರಂಡಿ ವ್ಯವಸ್ಥೆ ವ್ಯವಸ್ಥಿತವಾಗಿ ನಿರ್ವಹಿಸುವ ಮೂಲಕ ಯಾವುದೇ ಕಟ್ಟಡ ಅಲಂಕಾರಿಕವಾಗಿ ಕಾಣಬೇಕೆಂದರೆ ಪರಿಣಿತಿ ಪಡೆದ ಫ್ಲಂಬರ್‌ನಿಂದ ಮಾತ್ರ ಸಾಧ್ಯ. ಅಲ್ಲದೇ, ಅವುಗಳ ನಿರ್ವಹಣೆಯ ಪರಿಣಿತಿ ಹೊಂದಿದ್ದರೆ ಆತ ಪರಿಪೂರ್ಣ ಫ್ಲಂಬರ್ ಎನಿಸಬಲ್ಲರ. ಆದ್ದರಿಂದ ಈ ಕೌಶಲಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು ಸಾಧ್ಯ ಎಂದು ದಾವಣಗೆರೆಯ ಕಾವೇರಿ ಮಾತಾ ಪ್ಲಂಬರ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಡಿ. ಶೆಟ್ಟರ್ ಹೇಳಿದರು.

ವಿಶ್ವ ಪ್ಲಂಬರ್ ದಿನ ಪ್ರಯುಕ್ತ ಮಂಗಳವಾರ ನಗರದ ಬಾಡಾ ಕ್ರಾಸಿನಲ್ಲಿರುವ ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂಗೈಕ್ಯ ಡಾ.ಪುಟ್ಟರಾಜ ಗವಾಯಿ ಗದ್ದುಗೆ ಪೂಜೆ ಜೊತೆಗೆ ಮಕ್ಕಳಿಗೆ ಬೆಳಗಿನ ಉಪಾಹಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಫ್ಲಂಬರ್ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸವಲತ್ತು ಪಡೆಯಲು ಫ್ಲಂಬರ್‌ಗಳು ಸೇರಿದಂತೆ ಕಾರ್ಮಿಕರ ಗುರುತಿನ ಚೀಟಿ ಮಾಡಿಸುವುದು, ಮಕ್ಕಳ ವಿದ್ಯಾಬ್ಯಾಸ, ಮದುವೆಯ ಧನಸಹಾಯ ಕೊಡಿಸುವುದು, ಮೃತ ಕಾರ್ಮಿಕರಿಗೆ ಅನುಗ್ರಹ ರಾಶಿ ಅಡಿಯಲ್ಲಿ ಬರುವ ₹75 ಸಾವಿರ, 60 ವರ್ಷ ಪೂರೈಸಿದ ಹಿರಿಯ ಪ್ಲಂಬರ್‌ಗಳನ್ನು ಗುರುತಿಸಿ ನಿವೃತ್ತ ವೇತನವನ್ನು ಕೊಡಿಸುವುದು ಮತ್ತು ವೈದ್ಯಕೀಯ ಚಿಕಿತ್ಸೆ ಸೌಲಭ್ಯಗಳನ್ನು ಕೊಡಿಸುವುದು ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.

ಈ ಸಂದರ್ಭ ಸಂಘದ ಅಧ್ಯಕ್ಷ ಎಸ್.ಬಿ.ರುದ್ರೇಶ್ ಉಪಾಧ್ಯಕ್ಷ ಎಸ್.ಎಂ. ಸಿದ್ದಲಿಂಗಪ್ಪ, ಎಸ್.ರಾಜು, ಖಜಂಚಿ ಕೆ.ಜಿ.ಡಿ. ಬಸವರಾಜ್, ಕಾರ್ಯದರ್ಶಿ, ಎಸ್.ಹೊಳೆಬಸಪ್ಪ, ಸಹ ಕಾರ್ಯದರ್ಶಿ ಎಚ್.ಆರ್. ಬಸವರಾಜ್, ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ, ರಂಗಸ್ವಾಮಿ, ನಿರ್ದೇಶಕರಾದ ಪಿ.ಅಶೋಕ್, ವೀರೇಶ್ ಮುತ್ತಿಗೆ, ಗಾಳಪ್ಪ, ಎಸ್.ಚಂದ್ರಶೇಖರ್, ಐ.ಎಂ. ಗಿರೀಶ್, ಅನಿಲ್, ಶಿವು, ಪ್ರಶಾಂತ್, ಎಸ್.ಗೋವಿಂದ್ ರಾಜ್, ಎಸ್.ಕೆಂಗಪ್ಪ, ಬಿ.ಮೋಹನ್, ಪ್ರತಾಪ್, ಕರಿಬಸಯ್ಯ, ಶಿವಪ್ರಕಾಶ್ ಸ್ವಾಮಿ ಇತರರಿದ್ದರು.

- - - -11ಕೆಡಿವಿಜಿ34:

ದಾವಣಗೆರೆಯ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿಶ್ವ ಪ್ಲಂಬರ್‌ ದಿನ ಆಚರಿಸಲಾಯಿತು.