ಸಾರಾಂಶ
ದಾಬಸ್‍ಪೇಟೆ: ನಮ್ಮ ಗ್ರಾಮ ಪಂಚಾಯತಿ 2024ನೇ ಸಾಲಿನ ಕ್ಷಯ ಮುಕ್ತ ಗ್ರಾಮ ಪಂಚಾಯತಿಯನ್ನಾಗಿ ಆಯ್ಕೆಯಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಉಮಾಹರೀಶ್ ಹೇಳಿದರು.
ತ್ಯಾಮಗೊಂಡ್ಲು ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ 2025-26 ಸಾಲಿನ ಮೊದಲನೇ ಪಾಕ್ಷಿಕ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜನರ ಆರೋಗ್ಯದ ಕಾಳಜಿಗೆ ಶ್ರಮಿಸಿದ ಪಂಚಾಯತಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಮುಖ್ಯವಾಗಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯರು ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.ಮುಂದಿನ ದಿನಗಳಲ್ಲಿ ಸ್ವಚ್ಛ ಗ್ರಾಮ ಮಾದರಿ ಗ್ರಾಮ ಪಂಚಾಯತಿನ್ನಾಗಿಸುವ ಗುರಿಯಿದ್ದು ಎಲ್ಲರ ಸಹಕಾರ ಅಗತ್ಯ ಎಂದರು. ಗ್ರಾಮ ಪಂಚಾಯತಿ ವತಿಯಿಂದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಪ್ರಾಥಮಿಕ ಶಾಲೆಗಳಿಗೆ ಚೆಸ್ ಬೋರ್ಡ್, ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಕಿಟ್, 33 ಮಹಿಳಾ ಸ್ವಸಹಾಯ ಸಂಘಗಳಿಗೆ ಲೆಕ್ಕಪತ್ರ ನಿರ್ವಹಣಾ ಪುಸ್ತಕಗಳನ್ನು ವಿತರಿಸಲಾಯಿತು. ಗ್ರಾಮಸಭೆಯ ನೋಡಲ್ ಅಧಿಕಾರಿ ಬಿಇಒ ಕೆ.ಸಿ.ರಮೇಶ್, ಗ್ರಾಪಂ ಉಪಾಧ್ಯಕ್ಷ ವಾಸುದೇವ್, ಸಿಡಿಪಿಒ ಸುಜಾತ, ಪಿಡಿಒ ರೇಖಾ, ಸದಸ್ಯರಾದ ಮಹಿಮಣ್ಣ, ತಾಲಿಬ್, ಸಲ್ಮಾ, ಜಬೀನ್ ತಾಜ್, ಮುಬೀನ್ ತಾಜ್, ಸುಮಿತ್ರಾ, ಆಶಾ, ತುಳಸಿ, ಶಶಿಕಲಾ, ಅಬ್ದುಲ್ ಖಾದರ್, ಗ್ರಾಮಸ್ಥರು ಉಪಸ್ಥಿತರಿದ್ದರು.
ಪೋಟೋ 2 :ತ್ಯಾಮಗೊಂಡ್ಲು ಗ್ರಾಪಂ ಆವರಣದಲ್ಲಿ ನಡೆದ ಮೊದಲನೇ ಪಾಕ್ಷಿಕ ಗ್ರಾಮಸಭೆಯಲ್ಲಿ ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರಗಳನ್ನು ಅಧ್ಯಕ್ಷೆ ಉಮಾಹರೀಶ್ ವಿತರಿಸಿದರು. ಉಪಾಧ್ಯಕ್ಷ ವಾಸುದೇವ್, ಸಿಡಿಪಿಒ ಸುಜಾತ, ಪಿಡಿಒ ರೇಖಾ, ಸದಸ್ಯರಾದ ಮಹಿಮಣ್ಣ, ತಾಲಿಬ್, ಸಲ್ಮಾ ಇತರರಿದ್ದರು.