ಸಾರಾಂಶ
ದೇಶದ ಮತದಾರರು ಬದಲಾವಣೆಯನ್ನು ಬಯಸಿದ್ದು ಐಎನ್ ಡಿಎಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ಕಂಪ್ಲಿ: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಈ.ತುಕಾರಾಂ ಗೆಲುವಿನ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಮುಖಂಡರು ಮಂಗಳವಾರ ಸಂಭ್ರಮಾಚರಣೆ ನಡೆಸಿದರು.
ಪುರಸಭೆ ಸದಸ್ಯರಾದ ಭಟ್ ಪ್ರಸಾದ್ ಮಾತನಾಡಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಮತದಾರರು ಕಾಂಗ್ರೆಸ್ ಗೆ ಮತ ನೀಡಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ತುಕಾರಾಂ ಅವರನ್ನು 87 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆ ಭಾರಿ ಮುಖಭಂಗವಾಗಿದೆ ಎಂದರು.ಚಾಂದ್ ಬಾಷಾ ಮಾತನಾಡಿ, ದೇಶದ ಮತದಾರರು ಬದಲಾವಣೆಯನ್ನು ಬಯಸಿದ್ದು ಐಎನ್ ಡಿಎಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಚಂದ್ರಬಾಬು ನಾಯ್ಡು, ನೀತಿಶ್ ಕುಮಾರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಪಿ.ಮೌಲ, ಲಡ್ಡು ಹೊನ್ನೂರುವಲಿ, ಮುಖಂಡರಾದ ಕರೆಕಲ್ ಮನೋಹರ, ಗೋಪಾಲ ಕೃಷ್ಣ, ರಘು ನಾಯಕ, ಅಕ್ಕಿ ಜಿಲಾನ್, ಕೊಟಾಲ್ ವೀರೇಶ್, ಬಾಲಕೃಷ್ಣಾ, ಮೆಹಮುದ್, ವಾಹಿದ್, ಶೇಖರ್, ಪಾಂಡುರಂಗ, ಡಿ.ಮುರಾರಿ, ಮಾಬು, ಅಬ್ದುಲ್ಲಾ, ಮೆಹೆಬುಬ್, ಯುನೂಸ್, ಗಂಗಣ್ಣ, ಹೊನ್ನೂರಪ್ಪ ಇದ್ದರು.ಇದೇ ವೇಳೆ ಪಟಾಕಿ ಸಿಡಿಸಿ ಸಿಹಿ ಹಂಚಿ ಕುಣಿದು ಕುಪ್ಪಳಿಸುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಿಸಿದರು.
;Resize=(128,128))
;Resize=(128,128))