ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ದಸರಾ ಸಮಿತಿಯ 35ನೇ ವರ್ಷದ ದಸರಾ ಉತ್ಸವ ಈ ತಿಂಗಳ 22 ರಿಂದ 11 ದಿನಗಳ ಕಾಲ ನಗರದ ಶ್ರೀರಾಮ ಮಂದಿರ ಆವರಣದಲ್ಲಿ ಏರ್ಪಾಟಾಗಿದೆ. ರಾಮಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳು ಉತ್ಸವದ ಕಾರ್ಯಕ್ರಮಗಳ ಕರಪತ್ರ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ದಸರಾ ಸಮಿತಿ ಕಾರ್ಯಾಧ್ಯಕ್ಷ ಡಾ.ಜೆ.ಲಕ್ಷ್ಮೀಕಾಂತ್, ಕಳೆದ 34 ವರ್ಷಗಳಂತೆ ಈ ಬಾರಿಯೂ ನಮ್ಮ ಸಂಸ್ಕೃತಿ, ಸಂಪ್ರದಾಯ, ನಾಡಿನ ಪರಂಪರೆ ಹಿನ್ನೆಲೆಯ ಕಾರ್ಯಕ್ರಮಗಳನ್ನು ದಸರಾ ಉತ್ಸವದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಸಿದ್ಧತೆಗಾಗಿ ಮೂರು ತಿಂಗಳಿನಿಂದ ನೂರಾರು ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.ಇದೇ 22 ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಪೂಜೆ, ದುರ್ಗಾ ಹೋಮ, ಭೂಮಿ ಪೂಜೆ, ಧ್ವಜ ಪೂಜೆ ನೆರವೇರಿಸಿ ನಂತರ ಕ್ಷಾತ್ರತೇಜ-ರಾಷ್ಟ್ರ ಭಕ್ತರ ಗೀತ ರೂಪಕ, ಬೊಂಬೆಗಳ ಪಾದವಿನ್ಯಾಸ ನೃತ್ಯ, ಸಂಪೂರ್ಣ ರಾಮಾಯಣ ನೃತ್ಯರೂಪಕ ಕಾರ್ಯಕ್ರಮ ನಡೆಯಲಿವೆ. 23 ರಂದು ಮಧ್ಯಾಹ್ನ 2 ಗಂಟೆಗೆ ಭಜನಾ ಸ್ಪರ್ಧೆ, ಸಂಜೆ 6 ಗಂಟೆಗೆ ಪಾವಗಡ ರಾಮಕೃಷ್ಣ ಸೇವಾಶ್ರಮದ ಡಾ.ಜಪಾನಂದ ಸ್ವಾಮೀಜಿ ದಸರಾ ಕಾರ್ಯಕ್ರಮ ಉದ್ಘಾಟಿಸುವರು. 24ರಂದು ಬೆಂಕಿರಹಿತ ಅಡುಗೆ ಸ್ಪರ್ಧೆ, ರಂಗಗೀತೆಗಳ ಸ್ಪರ್ಧೆ,25 ರಂದು ಜನಪದಗೀತೆಗಳ ಗಾಯನ ಸ್ಪರ್ಧೆ, ದೇವಿಗೆ ಕುಂಕುಮಾರ್ಚನೆ ಹಾಗೂ ಜಾನಪದ ನೃತ್ಯ ವೈಭವ ಏರ್ಪಡಿಸಲಾಗಿದೆ ಎಂದು ಡಾ.ಲಕ್ಷ್ಮೀಕಾಂತ್ ಹೇಳಿದರು.26 ರಂದು ವೇಷಭೂಷಣ ಸ್ಪರ್ಧೆ, ಯೋಗ ಸಂಭ್ರಮ, ಮಲ್ಲಕಂಬ ಪ್ರದರ್ಶನ. 27 ರಂದು ಯೋಗದಸರಾ, ಯೋಗ ನೃತ್ಯ ವೈಭವ, 28 ರಂದು ವೃತ್ತಿಪರ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ಸ್ಪರ್ಧೆ, 29 ರಂದು ಕಾಲೇಜು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ನೃತ್ಯ ಸ್ಪರ್ಧೆ, 30 ರಂದು ತಾಯಿ ಭಾರತಿಗೆ ಕನ್ನಡದಾರತಿ ಕವಿಗೋಷ್ಠಿ, ರಾಷ್ಟ್ರದೇವೋಭವ ದೇಶಭಕ್ತಿ ಗೀತೆಗಳ ಸಂಭ್ರಮ, ಅಕ್ಟೋಬರ್ 1 ರಂದು ವಿವಿಧ ಕ್ಷೇತ್ರಗಳ ಸಾಧಕರನ್ನುಗೌರವಿಸುವ ಕಾರ್ಯಕ್ರಮವಿದೆ ಎಂದು ತಿಳಿಸಿದರು. ಅಕ್ಟೋಬರ್ 2ರಂದು ಬೆಳಿಗ್ಗೆ 11 ಗಂಟೆಗೆ ರಂಗವಲ್ಲಿ ಸ್ಪರ್ಧೆ, ಸಂಜೆ 4.30ಕ್ಕೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳಿಂದ ಶಮೀ ಪೂಜೆ ನೆರವೇರಲಿದೆ.ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕೆಂದುಕೋರಿದರು. ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ತುಮಕೂರು ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಲ್ಲೇಶಯ್ಯ,ಸಂಯೋಜಕಕೆ.ಎನ್.ಗೋವಿಂದರಾವ್, ಕಾರ್ಯದರ್ಶಿಗಳಾದ ಕೆ.ಶಂಕರ್, ಪರಶುರಾಮಯ್ಯ, ಹೆಚ್.ಎಂ.ರವೀಶಯ್ಯ, ರೇಖಾಕುಮಾರ್ ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))