ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆತಾಲ್ಲೂಕಿನ ತುಮಟಗೆರೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದಿರುವ ಹಾಲಿನ ವ್ಯತ್ಯಾಸ ಹಾಗೂ ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಸದಸ್ಯರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಶಂಕರ್ ರೆಡ್ಡಿ ಅವರನ್ನು ಒತ್ತಾಯಿಸಿದರು.ತಾಲೂಕಿನ ತುಮಟಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಎಲ್ಲ ಸದಸ್ಯರು ಭಾಗವಹಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾರ್ಯದರ್ಶಿ ಶಂಕರ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ, ಸಂಘದಲ್ಲಿ ಸುಮಾರು ೪ ಲಕ್ಷಕ್ಕೂ ಹೆಚ್ಚು ಹಣವನ್ನು ಬೇರೆ ವ್ಯಕ್ತಿಯ ಖಾತೆಗೆ ಜಮಾ ಮಾಡಲಾಗಿದೆ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹಾಲು ಹಾಕದ ವ್ಯಕ್ತಿಗೆ ಹಣ
ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಗಾಜಗ ಗ್ರಾಮದ ಶಿವಕುಮಾರ್ ಎಂಬ ವ್ಯಕ್ತಿಯ ಖಾತೆಗೆ ಸಂಘದಿಂದ ಮೇ ತಿಂಗಳಿನಿಂದ ಇಲ್ಲಿಯ ತನಕ ಸುಮಾರು ೪ ಲಕ್ಷಕ್ಕೂ ಹೆಚ್ಚು ಹಣ ಹೋಗಿದೆ. ಅವರು ಡೇರಿಗೆ ಹಾಲನ್ನು ಹಾಕುತ್ತಿಲ್ಲ, ಆದರೂ ಸಹ ಅವರ ಖಾತೆಗೆ ಹೇಗೆ ಹಣ ಹೋಯಿತು ಇದರ ಬಗ್ಗೆ ತನಿಖೆ ನಡೆಸಿ ಎಂದು ಹೇಳಿದರು.ವಿಸ್ತರಣಾ ಅಧಿಕಾರಿ ಭಾನುಪ್ರಕಾಶ್ ಮಾತನಾಡಿ, ಈಗಾಗಲೇ ಸಂಘದ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ, ಈ ಸಂಘದಲ್ಲಿ ಒಟ್ಟು ಸದಸ್ಯರು ೫೪ ಜನ ಇದ್ದಾರೆ. ೨೫ ಜನರ ಖಾತೆಗಳನ್ನು ಪರಿಶೀಲಿಸಿದ್ದೇನೆ. ಅದರಲ್ಲಿ ಮೋಸವಾಗಿರುವುದು ಕಂಡು ಬಂದಿದೆ. ಅನ್ಯಾಯವಾಗಿರುವ ಸದಸ್ಯರಿಗೆ ನ್ಯಾಯವನ್ನು ದೊರಕಿಸಿ ಕೊಡುತ್ತೇನೆ ಎಂದು ತಿಳಿಸಿದರು.
ಈ ವೇಳೆ ಉಪ ವಸ್ಥಾಪಕ ಶಂಕರ್ ರೆಡ್ಡಿ, ಸಂಘದ ಉಪಾಧ್ಯಕ್ಷ ಶಾಮ್‌ರಾಜ್, ನಿರ್ದೇಶಕರಾದ ನಾರಾಯಣಸ್ವಾಮಿ, ಹನುಮಪ್ಪ, ರಾಮಚಂದ್ರ, ರಾಮಪ್ಪ, ನಾರಾಯಣಮ್ಮ, ಮುನಿರತ್ನ, ಮತ್ತಿತರರು ಇದ್ದರು.