ಹೊನ್ನಾಳಿ ಬಳಿ ತುಂಗಭದ್ರಾ ಪ್ರವಾಹ: 96 ಜನರ ಸ್ಥಳಾಂತರ

| Published : Aug 01 2024, 12:15 AM IST

ಹೊನ್ನಾಳಿ ಬಳಿ ತುಂಗಭದ್ರಾ ಪ್ರವಾಹ: 96 ಜನರ ಸ್ಥಳಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ ಹಾಗೂ ಭದ್ರಾ ಜಲಾಶಯಗಳಿಂದ ನದಿಗಳಿಗೆ ನೀರು ಬಿಟ್ಟ ಕಾರಣ ಹೊನ್ನಾಳಿ ಪಟ್ಟಣ ಸೇರಿ ನದಿಪಾತ್ರದದಲ್ಲಿ ಪ್ರವಾಹ ಭೀತಿ ಎದುರಾಗಿದೆ.

- ತಾಲೂಕು ಆಡಳಿತ ನೇತೃತ್ವದಲ್ಲಿ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ । 100 ಹೆಕ್ಟರ್‌ಗೆ ನುಗ್ಗಿದ ನೀರು - - - ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ ಹಾಗೂ ಭದ್ರಾ ಜಲಾಶಯಗಳಿಂದ ನದಿಗಳಿಗೆ ನೀರು ಬಿಟ್ಟ ಕಾರಣ ಹೊನ್ನಾಳಿ ಪಟ್ಟಣ ಸೇರಿ ನದಿಪಾತ್ರದದಲ್ಲಿ ಪ್ರವಾಹ ಭೀತಿ ಎದುರಾಗಿದೆ.

ತಾಲೂಕಿನ ಮರಿಗೊಂಡನಹಳ್ಳಿ, ಕೋಟೆಹಾಳ್ ಹಾಗೂ ಕುಳಗಟ್ಟೆ ಗ್ರಾಮಗಳ ಸುಮಾರು 100 ಹೆಕ್ಟರ್ ಪ್ರದೇಶಕ್ಕೆ ನೀರು ನುಗ್ಗಿದೆ. ಆದರೆ, ಅಲ್ಲಿ ಇನ್ನೂ ಭತ್ತ ನಾಟಿಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿ. ಆದರೂ, ಮುಂದಿನ ದಿನಗಳಲ್ಲಿ ನಾಟಿ ಆಗಬೇಕಿತ್ತು. ನದಿ ಪಾತ್ರದ ಅಡಕೆ ತೋಟಗಳಿಗೆ ನೀರು ನುಗ್ಗಿ ಜಲಾವೃತವಾಗಿವೆ.

ಗಂಟೆ ಗಂಟೆಗೂ ನದಿ ನೀರಿನ ಮಟ್ಟದಲ್ಲಿ ಏರಿಕೆ ಆಗುತ್ತಿದೆ. ಈ ಹಿನ್ನೆಲೆ ಪಟ್ಟಣದ ಬಾಲ್‌ರಾಜ್‌ಘಾಟ್‌ನ 20 ಕುಟುಂಬ ಹಾಗೂ ಬಂಬೂ ಬಜಾರ್‌ನ 4 ಕುಟುಂಬ ಸೇರಿ ಒಟ್ಟು 24 ಕಟುಂಬದ 96 ಜನರನ್ನು ಪಟ್ಟಣದ ಅಂಬೇಡ್ಕರ್ ಭವನ ಹಾಗೂ ಗುರುಭವನದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಅವರಿಗೆ ಬುಧವಾರ ಬೆಳಗಿನ ಉಪಾಹಾರದಿಂದಲ್ಲೇ ಕಾಳಜಿ ಕೇಂದ್ರ ಪ್ರಾರಂಭಿಸಲಾಗಿದೆ. ಸಮೀಪದಲ್ಲೇ ಇರುವ ವಿಶ್ವೇಶ್ವರಯ್ಯ ಖಾಸಗಿ ಶಾಲೆ ಆವರಣಕ್ಕೆ ನದಿ ನೀರು ನುಗ್ಗಿರುವುದರಿಂದ ಶಾಲೆಗೆ ರಜಾ ಘೋಷಣೆ ಮಾಡಲಾಗಿದೆ.

ಸಂತೆ ನಿಷೇಧ:

ಹೊನ್ನಾಳಿ ಪಟ್ಟಣದ ಬಾಲ್‌ರಾಜ್‌ಘಾಟ್‌ನಲ್ಲಿ ಪ್ರತಿ ಬುಧವಾರ ವಾರದ ಜಾನುವಾರುಗಳ ಸಂತೆ ನಡೆಯುತ್ತಿತ್ತು. ಆದರೆ, ನದಿ ನೀರು ಏರಿಕೆ ಕಂಡ ಹಿನ್ನೆಲೆ ಬುಧವಾರ ನಡೆಯಬೇಕಿದ್ದ ಜಾನುವಾರುಗಳ ಸಂತೆ ರದ್ದುಪಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ತಿಳಿಸಿದರು.

- - - -31ಎಚ್.ಎಲ್.ಐ1.: ವಿಶ್ವೇಶ್ವರಯ್ಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ತುಂಗಭದ್ರಾ ನದಿ ನೀರು ನುಗ್ಗಿರುವುದು.

-31ಎಚ್.ಎಲ್.ಐ1ಎ: ಬಾಲರಾಜಘಾಟ್ ಪ್ರದೇಶಕ್ಕೆ ತುಂಗಭದ್ರಾ ನದಿ ನೀರು ನುಗ್ಗಿರುವುದು.

-31ಎಚ್.ಎಲ್.ಐ1ಬಿ: ಹೊನ್ನಾಳಿ ಬಳಿ ತುಂಗಭದ್ರಾ ನದಿ ಪ್ರವಾಹದಿಂದಾಗಿ ಸಂತ್ರಸ್ತರಾಗಿರುವ ನದಿ ಪಾತ್ರದ ಜನರನ್ನು ಅಂಬೇಡ್ಕರ್ ಭವನದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಶಾಸಕ ಡಿ.ಜಿ.ಶಾಂತನಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.