ಜಲಾಶಯದ ಗೇಟ್ ಸಂಖ್ಯೆ 1, 4, 11, 17, 19, 20, 24, 27, 28 ಮತ್ತು 33ರಲ್ಲಿ ಹೊಸ ಗೇಟ್ ಅಳವಡಿಕೆ ವಿವಿಧ ಹಂತಗಳಲ್ಲಿದ್ದು, ಕೆಲವೇ ದಿನಗಳಲ್ಲಿ ಅವು ಸಹ ಪೂರ್ಣಗೊಳ್ಳಲಿವೆ.
ಹೊಸಪೇಟೆ: ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ತುಂಗಭದ್ರಾ ಜಲಾಶಯದ 10 ಗೇಟ್‌ಗಳಿಗೆ ಹೊಸದಾಗಿ ಕ್ರಸ್ಟ್‌ಗೇಟ್ ಅಳವಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಗೇಟ್ ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದ 18 ಗೇಟ್ ಪೂರ್ಣಗೊಂಡು ಈಗಾಗಲೇ 20 ದಿನ ಕಳೆದಿವೆ. ಇದೀಗ ಜಲಾಶಯದ ಗೇಟ್ ಸಂಖ್ಯೆ 1, 4, 11, 17, 19, 20, 24, 27, 28 ಮತ್ತು 33ರಲ್ಲಿ ಹೊಸ ಗೇಟ್ ಅಳವಡಿಕೆ ವಿವಿಧ ಹಂತಗಳಲ್ಲಿದ್ದು, ಕೆಲವೇ ದಿನಗಳಲ್ಲಿ ಅವು ಸಹ ಪೂರ್ಣಗೊಳ್ಳಲಿವೆ. ಹಳೆಯ ಎರಡು ಗೇಟ್‌ಗಳನ್ನು ತೆರವುಗೊಳಿಸುವ ಕೆಲಸ ಈಗ ನಡೆಯುತ್ತಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಹಳೆ ಗೇಟ್ ತೆರವು ಕೆಲಸ ನಡೆಯಲಿದೆ ಎಂದು ತಿಳಿಸಲಾಗಿದೆ. ಗದಗ ಮತ್ತು ಹೊಸಪೇಟೆ ಟಿ.ಬಿ.ಡ್ಯಾಂ ಕಚೇರಿ ಬಳಿ ಗೇಟ್‌ಗಳ ರಚನೆ (ಫ್ಯಾಬ್ರಿಕೇಷನ್) ಕಾರ್ಯ ಭರದಿಂದ ಸಾಗಿದೆ. 21 ಗೇಟ್‌ಗಳ ರಚನೆ ಪೂರ್ಣಗೊಂಡಿದೆ. ಎರಡು ಗೇಟ್ ರಚನೆ ಪ್ರಗತಿಯಲ್ಲಿದೆ. ಇನ್ನೂ ನಾಲ್ಕು ಗೇಟ್ ರಚನೆಗೆ ಸಾಮಗ್ರಿಗಳು ಗದಗಕ್ಕೆ ಬಂದಿವೆ. ಎಲ್ಲಾ 33 ಗೇಟ್‌ಗಳಿಗೆ ಅಳವಡಿಸಲು ಬೇಕಾದ ಸ್ಕಿನ್‌ಪ್ಲೇಟ್‌ಗಳು ಎರಡೂ ಕಡೆಗೆ ಬಂದಿವೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಜಲಾಶಯದ ಗೇಟ್ ಗಳ ಅಳವಡಿಕೆಯ ಕಾರ್ಯವನ್ನು ವೀಕ್ಷಿಸಿದರು.