ಸಾರಾಂಶ
ಹಳೆ ವರ್ಷದಲ್ಲಿಯ ಕಹಿ ನೆನಪುಗಳನ್ನು ಮರೆತು ಸಂತಸದ ದಿನಗಳನ್ನು ಮಾತ್ರ ನೆನಪಿಸುತ್ತಾ ಮನಸ್ಸನ್ನು ಭಗವಂತನ ಕಡೆಗೆ ಹರಿಸುವುದೇ ಸತ್ಯವಾದ ಹೊಸ ವರ್ಷಾಚರಣೆಯಾಗಿದೆ ಎಂದು ಧಾರವಾಡ, ಗದಗ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ. ಜಯಂತಿ ಅಕ್ಕ ಹೇಳಿದರು.
ಗದಗ: ಹಳೆ ವರ್ಷದಲ್ಲಿಯ ಕಹಿ ನೆನಪುಗಳನ್ನು ಮರೆತು ಸಂತಸದ ದಿನಗಳನ್ನು ಮಾತ್ರ ನೆನಪಿಸುತ್ತಾ ಮನಸ್ಸನ್ನು ಭಗವಂತನ ಕಡೆಗೆ ಹರಿಸುವುದೇ ಸತ್ಯವಾದ ಹೊಸ ವರ್ಷಾಚರಣೆಯಾಗಿದೆ ಎಂದು ಧಾರವಾಡ ಗದಗ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ. ಜಯಂತಿ ಅಕ್ಕ ಹೇಳಿದರು.
ತಾಲೂಕಿನ ಲಕ್ಕುಂಡಿ ಗ್ರಾಮದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಾಖೆಯಲ್ಲಿ ಹಮ್ಮಿಕೊಂಡಿದ್ದ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಈಶ್ವರೀಯ ಸಂದೇಶವನ್ನು ನೀಡಿ ಅವರು ಮಾತನಾಡಿ, ಹೊಸ ವರ್ಷವನ್ನು ಹಬ್ಬವನ್ನಾಗಿ ಆಚರಿಸುವಂತೆ ಸಂತಸ, ಸಂತೋಷದಿಂದ ಆಚರಿಸಬೇಕು ಎಂದರುದೇಹದ ಸುಖಕ್ಕಾಗಿ ಅನ್ನ, ಬಟ್ಟೆ, ಮನೆ, ಆಸ್ತಿಗಳನ್ನು ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಆದರೆ ಈ ದೇಹದಲ್ಲಿ ಆತ್ಮವು ಸಹ ಇದೆ ಎಂಬುದನ್ನು ಮರೆತು ದಿನ ನಿತ್ಯ ದೇಹದ ಸೌಂದರ್ಯ ಬಗ್ಗೆಯೇ ಕಾಳಜಿ ವಹಿಸುತ್ತೇವೆ. ಆದ್ದರಿಂದ ಈ ದೇಹದಲ್ಲಿಯ ಆತ್ಮದ ತಂದೆ ಪರಂಜ್ಯೋತಿ ಸ್ವರೂಪ ಪರಮಾತ್ಮನನ್ನು ಸತ್ಯ ಮನಸ್ಸಿನಿಂದ ದಿನ ನಿತ್ಯ ಯೋಗ ಮತ್ತು ಜ್ಞಾನದ ಮಕರಂದವನ್ನು ಪಡೆಯುದರಿಂದ ದಿನ ನಿತ್ಯ ಹಬ್ಬದ ಅನುಭವ ಪಡೆಯಬಹುದು. ಆದ್ದರಿಂದ ೨೦೨೪ ರ ಇಸ್ವಿಯಲ್ಲಿ ದಿನ ನಿತ್ಯ ೨೪ ನಿಮಿಷವಾದರೂ ಭಗವಂತನ ಮಹಾ ವಾಕ್ಯವನ್ನು ಆಲಿಸಿ ಯೋಗವನ್ನು ಮಾಡಬೇಕು. ಇದರಿಂದ ದಿನ ನಿತ್ಯ ಖುಷಿ ಖುಷಿಯಾಗಿ ಇರಬಹುದು ಎಂದರು.
ಈ ಸಂದರ್ಭದಲ್ಲಿ ನೂತನ ವರ್ಷದ ಪಾಕೆಟ್ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು. ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು. ದೈವಿ ಪರಿವಾರದವರಿಗೆ ಹೊಸ ವರ್ಷದ ಕಾಣಿಕೆಯನ್ನು ನೀಡಲಾಯಿತು. ಶಾಖೆಯ ಸಂಚಾಲಕರಾದ ಬಿ..ಸರೋಜಕ್ಕ ನಿರೂಪಿಸಿ ವಂದಿಸಿದರು.