ಸಾರಾಂಶ
ಕಾರ್ಕಳ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ದಾನಿಗಳಿಂದ ಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ದಾನಿಗಳಿಂದ ಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು.ಈ ಸಂದರ್ಭ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್, ಕಾರ್ಕಳದ ಖ್ಯಾತ ಲೆಕ್ಕ ಪರಿಶೋಧಕ ನಿತ್ಯಾನಂದ ಪ್ರಭು, ಸೇವಾದಳ ಅಧ್ಯಕ್ಷ ಅಬ್ದುಲ್ಲಾ ಶೇಕ್, ಸಮಾಜ ಸೇವಕ ಅಮೀರ್ ಕರೆಕಲ್ಲು, ಸ್ವಯಂ ಟೈಮ್ಸ್ ಸಂಸ್ಥಾಪಕ ವಸಂತ್ ಕುಮಾರ್ ಬೆಳ್ತಂಗಡಿ, ಕಾರ್ಕಳ ತಾಲೂಕು ಪತ್ರಕರ್ತ ಸಂಘ ಅಧ್ಯಕ್ಷ ಮೊಹಮ್ಮದ್ ಶರೀಫ್, ಕಾರ್ಕಳ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಸೌಜನ್ಯ, ಡಾ.ಮಾಲಿನಿ ಬಂಗೇರ, ರೆಡಿಯಾಲಜಿಸ್ಟ್ ಡಾ.ಅನಿತಾ ಪ್ರಭು, ಡಾ. ಶಶಿಕಲಾ, ಡಯಾಲಿಸಿಸ್ ಕೇಂದ್ರದ ಮುಖ್ಯಸ್ಥ ಸುಜಿತ್, ಕೆ.ಪಿ. ಶಬ್ಬೀರ್ ಹಸನ್, ಅಬ್ದುಲ್ ರಝಾಕ್, ಎನ್‌ಸಿಡಿ ಶಾಖೆಯ ಕಿರಣ್, ಲ್ಯಾಬೋರೇಟರಿ ಟೆಕ್ನಾಲಜಿಸ್ಟ್ ವೈ.ನರಸಿಂಹ ಮೂರ್ತಿ, ಪ್ರಜ್ಞಾ, ಶೋಭಾ, ದೃಷ್ಯಾ ಮತ್ತಿತರರು ಉಪಸ್ಥಿತರಿದ್ದರು.