ಸಾರಾಂಶ
ಕೊಳ್ಳೇಗಾಲ: ವನ್ಯಜೀವಿ ಜಿಂಕೆ ಕೊಂದು ಮಾಂಸ ಪಾಲು ಮಾಡಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹದೇವ ಬಿನ್ ಲೇಟ್ ಪುಟ್ಟ ನಾಯಕ (25), ಕಿರಣ್ ಬಿನ್ ಸಿದ್ದ ಶೆಟ್ಟಿ (30) ಬಂಧಿತ ಆರೋಪಿಗಳು. ತಾಲೂಕಿನ ದೊಡ್ಡಿಂದುವಾಡಿ ಅರಣ್ಯ ಪ್ರದೇಶದಲ್ಲಿ ಕಬಿನಿ ಚಾನೆಲ್ ಬಳಿ ಜಿಂಕೆ ಕೊಂದು ತುಂಡು ಮಾಡಿ ಪಾಲು ಮಾಡಿಕೊಳ್ಳುತ್ತಿದ್ದ ವಿಚಾರ ತಿಳಿಯುತ್ತಿದ್ದಂತೆ ಎಸ್ಪಿ ಸುದಶ೯ನ್ ಮಾಗ೯ದಶ೯ನದೊಂದಿಗೆ ಪಿಎಸೈ ವಿಜಯರಾಜ್, ಮುಖ್ಯ ಪೇದೆಗಳಾದ ರಾಮಚಂದ್ರ, ಸ್ವಾಮಿ, ಬಸವರಾಜು, ಜಮೀಲ್, ಪ್ರಭಾಕರ್, ಲತಾ ಇನ್ನಿತರರು ದಾಳಿ ನಡೆಸಿದರು. ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಸುತ್ತುವರಿದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 43 ಕೆಜಿ ಜಿಂಕೆ ಮಾಂಸ, ಜಿಂಕೆಯ 5 ಕಾಲು, ಒಂದ ತಲೆ, ಜಿಂಕೆ ಕತ್ತರಿಸಲು ಬಳಸಲಾಗಿದ್ದ 4 ಚಾಕು, ಒಂದು ಮಚ್ಚು, ಮೂರು ಮೋಟಾರ್ ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))