ಸಾರಾಂಶ
ತಾಲೂಕಿನ ಹುಣಸಘಟ್ಟದಲ್ಲಿ ಮಂಗಳವಾರ ಸಂಜೆ ತೋಟದಲ್ಲಿದ್ದ ಮಹಿಳೆಯ 30 ಗ್ರಾಂ ತೂಕದ ಚಿನ್ನದ ಸರ ಅಪಹರಿಸಿದ್ದ ಆರೋಪಿಗಳನ್ನು ಘಟನೆ ನಡೆದ 24 ತಾಸಿನೊಳಗೆ ಬಂಧಿಸುವಲ್ಲಿ ಹೊನ್ನಾಳಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಡಿವೈಎಸ್ಪಿ ಸ್ಯಾಂ ವರ್ಗೀಸ್ ಹೊನ್ನಾಳಿಯಲ್ಲಿ ಹೇಳಿದರು.
- ಹೊನ್ನಾಳಿ ಪೊಲೀಸ್ ತಂಡದಿಂದ ಯಶಸ್ವಿ ಕಾರ್ಯಾಚರಣೆ: ಡಿವೈಎಸ್‌ಪಿ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಹುಣಸಘಟ್ಟದಲ್ಲಿ ಮಂಗಳವಾರ ಸಂಜೆ ತೋಟದಲ್ಲಿದ್ದ ಮಹಿಳೆಯ 30 ಗ್ರಾಂ ತೂಕದ ಚಿನ್ನದ ಸರ ಅಪಹರಿಸಿದ್ದ ಆರೋಪಿಗಳನ್ನು ಘಟನೆ ನಡೆದ 24 ತಾಸಿನೊಳಗೆ ಬಂಧಿಸುವಲ್ಲಿ ಹೊನ್ನಾಳಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಡಿವೈಎಸ್ಪಿ ಸ್ಯಾಂ ವರ್ಗೀಸ್ ಹೇಳಿದರು.ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ಮಾಹಿತಿ ನೀಡಿದ ಅವರು, ಹುಣಸಘಟ್ಟದ ದರ್ಶನ್ (22) ಹಾಗೂ ವಿನಯ್ ಎ.ಆರ್. (20) ಬಂಧಿತ ಆರೋಪಿಗಳು. ಬುಧವಾರ ಪೊಲೀಸರು ಇಬ್ಬರನ್ನು ಪತ್ತೆಹಚ್ಚಿ ₹3 ಲಕ್ಷ ಮೌಲ್ಯದ 30 ಗ್ರಾಂ ಚಿನ್ನದ ಸರ, ಕೃತ್ಯಕ್ಕೆ ಬಳಸಿದ ₹30 ಸಾವಿರ ಮೌಲ್ಯದ ಮೋಟಾರ್ ಸೈಕಲ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದರು.
ಸರ ಅಪಹರಣ ದೂರು ದಾಖಲಾಗಿತ್ತು. ಈ ಬಗ್ಗೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ ಎ. ಹೆಗಡೆ, ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಸ್ವಾಂ ವರ್ಗೀಸ್ ಮಾರ್ಗದರ್ಶನದಲ್ಲಿ ಹೊನ್ನಾಳಿ ಪಿಐ ಸುನೀಲ್ ಕುಮಾರ್ ಎಚ್. ನೇತೃತ್ವದಲ್ಲಿ ಸರಗಳ್ಳರ ಪತ್ತೆಗೆ ಪೊಲೀಸ್ ತಂಡ ರಚಿಸಲಾಗಿತ್ತು ಎಂದರು.ಸರ ಅಪಹರಣ ಪ್ರಕರಣ ತ್ವರಿತವಾಗಿ ಭೇದಿಸಿದ ಹೊನ್ನಾಳಿ ಪೊಲೀಸ್ ತಂಡದ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಎಚ್., ಪಿ.ಎಸ್.ಐ.ಗಳಾದ .ಕುಮಾರ್, ಮತ್ತು ನಿರ್ಮಲ, ಎ.ಎಸ್.ಐ. ಎಚ್.ವಿ. ಹರೀಶ್, ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಎಸ್‌ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
- - --15ಎಚ್.ಎಲ್.ಐ3:
ಹೊನ್ನಾಳಿ ತಾಲೂಕಿನ ಹುಣಸಘಟ್ಟದಲ್ಲಿ ಮಹಿಳೆಯ ಚಿನ್ನದ ಸರ ಅಪಹರಿಸಿದ್ದ ಆರೋಪಿಗಳನ್ನು ಹೊನ್ನಾಳಿ ಪೊಲೀಸ್ ತಂಡ ಪತ್ತೆ ಹಚ್ಚಿದ ಕುರಿತು ಡಿವೈಎಸ್ಪಿ ಸ್ಯಾಂ ವರ್ಗೀಸ್ ಮಾಹಿತಿ ನೀಡಿದರು.