ಶ್ರೀರಂಗಪಟ್ಟಣ: ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬೆಂಗಳೂರು- ಮೈಸೂರು ಹೆದ್ದಾರಿಯ ಬೊಮ್ಮೂರು ಅಗ್ರಹಾರ ಗೇಟ್ ಬಳಿ ಬಂಧಿಸಿದ್ದಾರೆ. ಮೈಸೂರಿನ ಸಾತಗಳ್ಳಿ ನಿವಾಸಿ ಇರ್ಷಾದ್, ಬಿನ್ ಅಬ್ದುಲ್ ರೆಹಮಾನ್ ಎಂ.ಎ ಹಾಗೂ ಚಾಮರಾಜನಗರದ ಗುಂಡ್ಲುಪೇಟೆಯ ಮತ್ತೊಬ್ಬ ನಿವಾಸಿ ಅಕ್ಬರ್ ಮುಬಾರಕ್, ಬಿನ್ ನವಾಬ್ ಬಂಧಿತರು. ಖಚಿತ ಮಾಹಿತಿ ಮೇರೆಗೆ ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಸವರಾಜ ಹಡಪದ ಹಾಗೂ ಮಂಡ್ಯ ಅಬಕಾರಿ ಉಪ ಆಯುಕ್ತ ಡಾ.ಆರ್.ನಾಗಶಯನರ ನಿರ್ದೇಶನದ ಮೇರೆಗೆ ಪಾಂಡವಪುರ ಅಬಕಾರಿ ಉಪ ಅಧೀಕ್ಷಕರಾದ ವಿ.ಬಿ.ಮಣಿ ಹಾಗೂ ಅಬಕಾರಿ ನಿರೀಕ್ಷಕ ವೈ.ಐ.ಪ್ರಪುಲ್ಲ ಚಂದ್ರ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಸುಮಾರು 12 ಕೆಜಿ 900 ಗ್ರಾಂ ತೂಕದ 7 ಲಕ್ಷ ರು. ಮೌಲ್ಯದ ಒಣಗಿದ್ದ ಗಾಂಜಾ ಸೊಪ್ಪನ್ನು ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಆರೋಪಿಗಳನ್ನು ಬಂಧಿಸಿ, ಗಾಂಜಾ ಸೊಪ್ಪು, ನಂಬರ್ ಪ್ಲೇಟ್ ಇಲ್ಲದ ಬೈಕ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಬಿ.ಶಿವಣ್ಣ, ರಾಮು.ಎಚ್.ವಿ, ನಾಗೇಂದ್ರ.ಎಂ.ಎನ್. ಯೋಗೇಶ್.ಎಸ್.ಎನ್., ದಿಲೀಪ್ ಕುಮಾರ್ ಪಿ.ಜಿ., ಅಬಕಾರಿ ಮುಖ್ಯ ಪೇದೆಗಳು ಹಾಗೂ ತನುಜಾ ಎಂ.ಎಸ್. ಮತ್ತು ವೈರಮುಡಿ ಅಬಕಾರಿ ಪೇದೆಗಳಾದ ಸಂದೀಪ್ ಬಿ.ಆರ್., ವಾಹನ ಚಾಲಕರು ಇತರ ಸಿಬ್ಬಂದಿ ಇದ್ದರು.
ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಗಾಂಜಾ ಸಾಗಾಟ ಇಬ್ಬರು ಆರೋಪಿಗಳ ಬಂಧನ
ಮೈಸೂರಿನ ಸಾತಗಳ್ಳಿ ನಿವಾಸಿ ಇರ್ಷಾದ್, ಬಿನ್ ಅಬ್ದುಲ್ ರೆಹಮಾನ್ ಎಂ.ಎ ಹಾಗೂ ಚಾಮರಾಜನಗರದ ಗುಂಡ್ಲುಪೇಟೆಯ ಮತ್ತೊಬ್ಬ ನಿವಾಸಿ ಅಕ್ಬರ್ ಮುಬಾರಕ್, ಬಿನ್ ನವಾಬ್ ಬಂಧಿತರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.