ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಕಳೆದ ಹಲವು ದಿನಗಳ ಹಿಂದೆ ಗೋಕಾಕ ನಗರದಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಲು ಗೋಕಾಕ ನಗರ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ.ಇತ್ತಿಚೆಗೆ ಬಸಪ್ಪ ಕಬಾಡಗಿ ಎಂಬುವರು ಗೋಕಾಕ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್ ಮತ್ತು ರೂಪಾ ಮುನವಳ್ಳಿ ಎಂಬುವರು ತಮ್ಮ ಮನೆಯ ಮುಂದೆ (ಸೋಮವಾರ ಪೇಟೆ) ನಿಲ್ಲಿಸಿದ್ದ ಬೈಕ್‌ನ್ನು ಕಳ್ಳತನ ಮಾಡಿದ್ದರ ಬಗ್ಗೆ ಪ್ರಕರಣ ದಾಖಲಾಗಿದ್ದು, ಪ್ರಕರಣ ಕೈಗೆತ್ತಿಕೊಂಡಿದ್ದ ಗೋಕಾಕ ನಗರ ಪೋಲಿಸರು, ಎಸ್ಪಿ ಭೀಮಾಶಂಕರ ಗುಳೇದ ಹೆಚ್ಚುವರಿ ಎಸ್ಪಿ ಶ್ರುತಿ ಎಚ್.ಎಸ್, ಆರ್.ಬಿ. ಬಸರಗಿ ಡಿವೈಎಸ್ಪಿ ಡಿ.ಎಚ್. ಮುಲ್ಲಾ ಹಾಗೂ ಸಿಪಿಐ ಗೋಪಾಲ ರಾಠೋಡ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಎಸ್‌ಐ ಕೆ.ಬಿ. ವಾಲೀಕಾರ ಮತ್ತು ಸಿಬ್ಬಂದಿ ಕೆ.ಆರ್. ಹಕ್ಯಾಗೊಳ, ವಿಠ್ಠಲ ನಾಯಿಕ, ಎಸ್.ಬಿ. ತೋರಗಲ್, ಎ.ಎಸ್. ಕಾಸಿ, ಎನ್.ಬಿ. ಬೆಳಗಲಿ ಇತರರು ಸೇರಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರೂ ಆರೋಪಿಗಳು ಸೇರಿ 5 ಲಕ್ಷ ಬೆಲೆಯ ವಿವಿಧ ಕಂಪನಿಯ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಸೆ.5ರಂದು ದೇವಪುಹಟ್ಟಿಯ ನಿಂಗಪ್ಪ ಉದ್ದಪ್ಪ ಪಿಡಾಯಿ, ತುಕ್ಕಾನಟ್ಟಿ ಗ್ರಾಮದ ಸಂತೋಷ ಗುಳಪ್ಪ ಪಾಟೀಲ ಬಂಧಿತ ಆರೋಪಿಗಳು. ಎಸ್ಪಿ ಭೀಮಾಶಂಕರ ಗುಳೇದ ಹೆಚ್ಚುವರಿ ಎಸ್ಪಿ ಶ್ರುತಿ ಎಚ್.ಎಸ್., ಆರ್.ಬಿ. ಬಸರಗಿ ಪೊಲೀಸರ ಕಾರ್ಯವನ್ನು ಪ್ರಶಂಸಿದ್ದಾರೆ.ಈ ಸಂದರ್ಭದಲ್ಲಿ ಡಿವೈಎಸ್‌ಪಿ ಡಿ.ಎಚ್. ಮುಲ್ಲಾ ಹಾಗೂ ಸಿಪಿಐ ಗೋಪಾಲ ರಾಠೋಡ ಮಾರ್ಗದರ್ಶನದಲ್ಲಿ ಶಹರ ಠಾಣೆ ಪಿಎಸ್‌ಐ ಕೆ.ಬಿ. ವಾಲೀಕಾರ ಮತ್ತು ಸಿಬ್ಬಂದಿ ಕೆ.ಆರ್. ಹಕ್ಯಾಗೊಳ, ವಿಠ್ಠಲ ನಾಯಿಕ, ಎಸ್.ಬಿ. ತೋರಗಲ್, ಎ.ಎಸ್. ಕಾಸಿ, ಎನ್.ಬಿ. ಬೆಳಗಲಿ ಸೇರಿದಂತೆ ಪೋಲಿಸ್ ಸಿಬ್ಬಂದಿ ಇದ್ದರು.