ಕೆಜಿಎಫ್ ಪ್ಲೇಸ್ ಆಫ್ ಸೇಫ್ಟಿಯಲ್ಲಿ ಭದ್ರತಾ ವೈಫಲ್ಯ । ಸಿಬ್ಬಂದಿ ದಂಡೂರಿದ್ದರೂ ಇಬ್ಬರು ಬಾಲಕರು ಪರಾರಿಕನ್ನಡಪ್ರಭ ವಾರ್ತೆ ಕೆಜಿಎಫ್
ಇಲ್ಲಿನ ಪ್ಲೇಸ್ ಆಫ್ ಸೇಫ್ಟಿ (ಸುರಕ್ಷತಾ ಕೇಂದ್ರ) ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ಮಕ್ಕಳ ಸಂಖ್ಯೆಗಿಂತ ಅವರ ಉಸ್ತುವಾರಿಗೆ ನಿಯೋಜನೆಗೊಂಡಿರುವ ಸಿಬ್ಬಂದಿಯ ಸಂಖ್ಯೆಯೇ ಹೆಚ್ಚಿದ್ದರೂ, ಕಾವಲು ಕಣ್ಣುಗಳನ್ನು ತೀರಾ ಸರಳವಾಗಿ ತಪ್ಪಿಸಿ ಇಬ್ಬರು ನಿವಾಸಿ ಬಾಲಕರು ಪರಾರಿಯಾಗಿರುವುದು ಇಲಾಖೆಯ ಆಡಳಿತ ವೈಖರಿಯನ್ನು ಬಟಾಬಯಲು ಮಾಡಿದೆ.ಕೇಂದ್ರದ ಪ್ರತಿಯೊಂದು ಕೊಠಡಿಗೂ ಶೌಚಾಲಯ ಸೇರಿದಂತೆ ಅಗತ್ಯ ಸಕಲ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮಕ್ಕಳ ಚಲನವಲನಗಳ ಮೇಲೆ ಸದಾ ಹದ್ದಿನ ಕಣ್ಣಿಡಲು ಹಾಗೂ ಅವರಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆದರೂ, ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿದ್ದ ಸಮಯದಲ್ಲೇ ಬಾಲಕರು ಸದ್ದಿಲ್ಲದೆ ಹೊರಗೆ ಕಾಲ್ಕಿತ್ತಿದ್ದಾರೆ.ರಾತ್ರಿ ಪಾಳಿಯಲ್ಲಿ ನಿದ್ದೆಗೆಟ್ಟ ಮೇಲ್ವಿಚಾರಣೆ:ಇನ್ನು ಘಟನೆ ಸಂಭವಿಸಿದ ರಾತ್ರಿ ವೇಳೆ ಗೃಹಪಾಲಕರು (ಹೌಸ್ ಫಾದರ್) ಕರ್ತವ್ಯಕ್ಕೆ ಹಾಜರಿರಲಿಲ್ಲ ಎಂಬ ಸೋಟಕ ಮಾಹಿತಿ ಹೊರಬಿದ್ದಿದೆ. ರಾತ್ರಿ ವೇಳೆ ಮಕ್ಕಳ ಸುರಕ್ಷತೆ ಮತ್ತು ಮೇಲ್ವಿಚಾರಣೆಗೆ ವಿಶೇಷ ಗಮನ ಹರಿಸಬೇಕಾದ ಜಾಗದಲ್ಲಿ ಸಿಬ್ಬಂದಿ ಗೈರುಹಾಜರಾಗಿದ್ದರೆ, ಅದು ತೀರಾ ಕ್ಷಮಾರ್ಹವಲ್ಲದ ಗಂಭೀರ ಲೋಪವಾಗುತ್ತದೆ. ರಾತ್ರಿ ಪಾಳಿಯಲ್ಲಿ ಯಾರು ಕರ್ತವ್ಯದಲ್ಲಿದ್ದರು? ಹಾಜರಾತಿ ಪುಸ್ತಕ ಏನು ಹೇಳುತ್ತದೆ? ಭದ್ರತಾ ಸಿಬ್ಬಂದಿ ಆ ಸಮಯದಲ್ಲಿ ಎಲ್ಲಿಗೆ ಹೋಗಿದ್ದರು? ಎಂಬ ಸತ್ಯಾಸತ್ಯತೆಗಳು ತನಿಖೆಯಿಂದಷ್ಟೇ ಹೊರಬರಬೇಕಿದೆ. ಇಲ್ಲಿನ ಜಿಲ್ಲಾ ಮಕ್ಕಳ ರಕ್ಷಣಾಕಾರಿ ಕೋಲಾರದಲ್ಲಿದ್ದರೆ, ಸಂಸ್ಥೆಯ ಆರಕ್ಷಕರು ರಾಜಧಾನಿ ಬೆಂಗಳೂರಿನಲ್ಲಿ ಆರಾಮದಾಯಕ ನೆಲೆ ಕಂಡುಕೊಂಡಿದ್ದಾರೆ. ಹೀಗಾಗಿ ಕುಳಿತು ಆಡಳಿತ ನಡೆಸುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ತೀವ್ರಗೊಂಡಿದೆ.
ತರಬೇತಿಯಿಲ್ಲದ ಸಿಬ್ಬಂದಿ ನೇಮಕ:ಬಾಲ ನ್ಯಾಯ ವ್ಯವಸ್ಥೆ, ಮಕ್ಕಳ ಮನೋವಿಜ್ಞಾನ, ವರ್ತನಾ ನಿರ್ವಹಣೆ ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಕನಿಷ್ಟ ಅನುಭವ ಅಥವಾ ತರಬೇತಿ ಇಲ್ಲದ ಅಪಕ್ವ ಸಿಬ್ಬಂದಿಯನ್ನು ಇಲ್ಲಿ ನೇಮಕ ಮಾಡಲಾಗಿದೆ ಎಂಬ ಆರೋಪವಿದೆ.ವೈದ್ಯಕೀಯ ಸಿಬ್ಬಂದಿ ಅಭಾವ:
ಮಕ್ಕಳ ಆರೋಗ್ಯ ರಕ್ಷಣೆ ಸಂಸ್ಥೆಯ ಪ್ರಮುಖ ಹೊಣೆ. ಆದರೆ, ಇಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ಹಾಗೂ ತುರ್ತು ಆರೋಗ್ಯ ನಿರ್ವಹಣೆಗೆ ಸರಿಯಾದ ವ್ಯವಸ್ಥೆಯೇ ಇಲ್ಲ.ಸಿಸಿಟಿವಿ ಪರಿಶೀಲನೆ:
ಬಾಲಕರು ಪರಾರಿಯಾದ ರಹಸ್ಯ ಬಯಲಾಗಬೇಕಾದರೆ ಸಂಸ್ಥೆಯ ಸಿಸಿಟಿವಿ ದೃಶ್ಯಾವಳಿಗಳು, ಸಿಬ್ಬಂದಿಯ ಹಾಜರಾತಿ ದಾಖಲೆ, ರಾತ್ರಿ ಪಾಳಿಯ ಕರ್ತವ್ಯಪಟ್ಟಿ ಹಾಗೂ ಪ್ರವೇಶ-ನಿರ್ಗಮನ ನೋಂದಣಿಯನ್ನು ತಕ್ಷಣ ವಶಕ್ಕೆ ಪಡೆದು ತಪಾಸಣೆ ನಡೆಸಬೇಕಿದೆ.
೧೬ಕೆಜಿಎಫ್೧ಕೆಜಿಎಫ್‌ನ ಮಸ್ಕಂ ಬಡಾವಣೆಯಲ್ಲಿರುವ ಪ್ಲೇಸ್ ಆಫ್ ಸೇಫ್ಟಿ.