ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ತಾಲೂಕಿನ ಯರದಹಳ್ಳಿ ಗ್ರಾಮದಲ್ಲಿ ವೈಯಕ್ತಿಕವಾಗಿ 20 ಲಕ್ಷ ರು. ವೆಚ್ಚ ಮಾಡಿ ನಿರ್ಮಿಸಿರುವ ಎರಡು ಸಿಮೆಂಟ್ ರಸ್ತೆಗಳು ಮತ್ತು ಬಾಕ್ಸ್ ಚರಂಡಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ತುರುವೇಕೆರೆ: ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ತಾಲೂಕಿನ ಯರದಹಳ್ಳಿ ಗ್ರಾಮದಲ್ಲಿ ವೈಯಕ್ತಿಕವಾಗಿ 20 ಲಕ್ಷ ರು. ವೆಚ್ಚ ಮಾಡಿ ನಿರ್ಮಿಸಿರುವ ಎರಡು ಸಿಮೆಂಟ್ ರಸ್ತೆಗಳು ಮತ್ತು ಬಾಕ್ಸ್ ಚರಂಡಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಈ ವೇಳೆ ಗ್ರಾಮಸ್ಥರು ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಅವರುತಾವು ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಟಿಕೆಟ್ ನ ಪ್ರಭಲ ಆಕಾಂಕ್ಷಿಯಾಗಿದ್ದೇನೆಂದು ಘೋಷಣೆ ಮಾಡಿದರು.
ಹಾಲಿ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರು ತಮ್ಮದು ಕೊನೆಯ ಚುನಾವಣೆಯೆಂದು ಹಲವಾರು ಹೇಳಿದ್ದಾರೆ. ಯುವಕರಿಗೆ ಅವಕಾಶ ಕಲ್ಪಿಸಿಕೊಡುವುದಾಗಿ ಸಾಕಷ್ಟು ಬಾರಿ ಕೃಷ್ಣಪ್ಪನವರು ಹೇಳಿದ್ದಾರೆ. ಹಾಗಾಗಿ ತಾವು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲು ಉತ್ಸುಕರಾಗಿರುವುದಾಗಿ ದೊಡ್ಡಾಘಟ್ಟ ಚಂದ್ರೇಶ್ ಹೇಳಿದರು. ಈ ವೇಳೆ ಒಂದು ರಸ್ತೆಗೆ ಎಚ್.ಡಿ.ದೇವೇಗೌಡ ರಸ್ತೆಯೆಂದೂ, ಮತ್ತೊಂದು ರಸ್ತೆಗೆ ಎಚ್.ಡಿ.ಕುಮಾರಸ್ವಾಮಿ ರಸ್ತೆಯೆಂದೂ ನಾಮಕರಣ ಮಾಡಲಾಯಿತು. ಗ್ರಾಮದಲ್ಲಿ ದೊಡ್ಡಾಘಟ್ಟ ಚಂದ್ರೇಶ್ ರವರನ್ನು ಯುವಕರು ಭವ್ಯ ಮೆರವಣಿಗೆ ಮಾಡಿ ಗೌರವಿಸಿದರು.ಈ ವೇಳೆ ಬಾನಿಪಾಳ್ಯ ಶಂಕರಣ್ಣ. ಕೃಷ್ಣಪ್ಪ, ನಾಗರಾಜು, ಚಿಕ್ಕರಾಮಯ್ಯ, ಪ್ರದೀಪ್, ದೊಡ್ಡೇಗೌಡ, ಕುಮಾರ್, ರಾಘು, ನಾಗಯ್ಯ, ಯೋಗೀಶ್, ವಿನೋದ್ ರಾಜ್, ಮುನೇಶ್, ರಮೇಶ್, ತಿಮ್ಮಣ್ಣಿ, ನರಿಗೇಹಳ್ಳಿ ಶಿವಣ್ಣ, ರಾಜು, ನಂದೀಶ್, ಮೂರ್ತಿ, ನಟರಾಜು, ಯೋಗೇಶ್, ಚಿಕ್ಕೇಗೌಡ, ದ್ಯಾವಣ್ಣ ಮತ್ತು ಮೋಟಣ್ಣ ಸೇರಿದಂತೆ ಹಲವರು ಇದ್ದರು.