ಮಲೆ ಮಾದೇಶ್ವರ ಸ್ವಾಮಿ ಹುಂಡಿಯಲ್ಲಿ ₹2 ಕೋಟಿ ಸಂಗ್ರಹ

| Published : Nov 21 2024, 01:01 AM IST

ಸಾರಾಂಶ

ತಾಲೂಕಿನ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇಗುಲದ ಹುಂಡಿಯಲ್ಲಿ 2.43 ಕೋಟಿ ರು.ಸಂಗ್ರಹವಾಗಿದೆ. ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಬುಧವಾರ ನಡೆಯಿತು. 27 ದಿನಗಳಿಗೆ ₹2,43,65,775 ಸಂಗ್ರಹವಾಗಿದೆ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇಗುಲದ ಹುಂಡಿಯಲ್ಲಿ 2.43 ಕೋಟಿ ರು.ಸಂಗ್ರಹವಾಗಿದೆ. ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಬುಧವಾರ ನಡೆಯಿತು. 27 ದಿನಗಳಿಗೆ ₹2,43,65,775 ಸಂಗ್ರಹವಾಗಿದೆ. ಭಕ್ತರು ಕಾಣಿಕೆ ರೂಪದಲ್ಲಿ 62 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿಯನ್ನು ಅರ್ಪಿಸಿದ್ದು ಹುಂಡಿಯಲ್ಲಿ 5 ದೇಶಗಳ ಕರೆನ್ಸಿ ಪತ್ತೆಯಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ತಿಳಿಸಿದ್ದಾರೆ.ದೀಪಾವಳಿ ಜಾತ್ರೆ ಹಿನ್ನೆಲೆ ಐದು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವಕ್ಕೆ ಹಾಗೂ ಕಾರ್ತಿಕ ಮಾಸದ ಎರಡು ವಾರಗಳ ವಿಶೇಷ ಪೂಜೆಗೆ ರಾಜ್ಯದ ವಿವಿಧೆಡೆ ಹಾಗೂ ತಮಿಳುನಾಡಿನಿಂದಲೂ ಮಹಿಳಾ ಭಕ್ತರ ಹೆಚ್ಚಿನ ಸಂಖ್ಯೆಯಲ್ಲಿ ಮಲೆ ಮಾದೇಶ್ವರನ ಬೆಟ್ಟಕ್ಕೆ ಆಗಮಿಸಿದ್ದರು. ಈ ಹಿನ್ನೆಲೆ ಕೇವಲ 27 ದಿನಗಳಿಗೆ ₹2.4 ಕೋಟಿ ಹಣ ಸಂಗ್ರಹವಾಗಿದೆ.

ಹುಂಡಿ ಎಣಿಕೆ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಉಪಸ್ಥಿತರಿದ್ದರು.