ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಹಾನುಬಾಳು ಹೋಬಳಿಯ ವೆಂಕಟಹಳ್ಳಿ ಸಮೀಪ, ಹಾನುಬಾಳು ಸ್ಪೋರ್ಟ್ ಅಸೋಸಿಯೇಷನ್ ಆಶ್ರಯದಲ್ಲಿ ಆಯೋಜಿಸಲಾದ ಎರಡು ದಿನಗಳ ಬೈಕ್ ಹಾಗೂ ಕಾರ್ ರೇಸ್ ಸ್ಪರ್ಧೆಗೆ ಶನಿವಾರ ಅಧಿಕೃತ ಚಾಲನೆ ನೀಡಲಾಯಿತು. ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯದ ನಡುವೆ ನಡೆದ ಈ ಸ್ಪರ್ಧೆ ವಾಹನ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.ಮೊದಲ ದಿನ ನಾಲ್ಕು ಚಕ್ರದ ವಾಹನಗಳ ವಿವಿಧ ವಿಭಾಗಗಳ ಸ್ಪರ್ಧೆಗಳು ಜರುಗಿದವು. 800 ಸಿಸಿಯಿಂದ 1600 ಸಿಸಿವರೆಗಿನ ಕಾರುಗಳ ಸಮಯ ಮಿತಿಯೊಳಗಿನ ರೇಸ್ ಆಯೋಜಿಸಲಾಗಿತ್ತು. ಮಹಿಳೆಯರು ಹಾಗೂ ಪುರುಷರು ಎರಡೂ ವರ್ಗಗಳಿಗೂ ಅವಕಾಶ ಕಲ್ಪಿಸಲಾಗಿದ್ದು, ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ರಾಷ್ಟ್ರ ಮಟ್ಟದ ಸ್ಪರ್ಧಿಗಳು ತಮ್ಮ ಚಾಲನಾ ಕೌಶಲ್ಯ ಪ್ರದರ್ಶಿಸಿದರು. ಸ್ಪರ್ಧೆಯ ಕುರಿತು ಮಾತನಾಡಿದ ಸಂಸ್ಥೆಯ ಗೌರವಾಧ್ಯಕ್ಷ ಹುರುಡಿ ವಿಕ್ರಂ ಗೌಡ ಹಾನುಬಾಳು ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಇದು ಎರಡನೇ ವರ್ಷದ ಆಯೋಜನೆ. ವಿವಿಧ ಸಿಸಿ ವಿಭಾಗಗಳಲ್ಲಿ ಕಾರ್ ರೇಸ್ ನಡೆಯುತ್ತಿದೆ. ನಾಳೆ ಬೈಕ್ ರೇಸ್ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಖ್ಯಾತ ಬೈಕ್ ಸವಾರರು ಭಾಗವಹಿಸಲಿದ್ದಾರೆ. ಸ್ಥಳೀಯರಿಗಾಗಿ ವಿಶೇಷ ವಿಭಾಗವನ್ನೂ ಕಲ್ಪಿಸಲಾಗಿದೆ ಎಂದರು. ಇದಲ್ಲದೆ, ಸ್ಪರ್ಧೆಗೆ ಅಗತ್ಯವಾದ ಟ್ರ್ಯಾಕ್ ವ್ಯವಸ್ಥೆ, ಪ್ರೇಕ್ಷಕರ ಸೌಲಭ್ಯ, ಊಟೋಪಚಾರ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ಅವರು ತಿಳಿಸಿದರು. ಮಳೆಯ ಕಾರಣ ಜನಸಂದಣಿ ಸ್ವಲ್ಪ ಕಡಿಮೆಯಾಗಿದ್ದರೂ, ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ ಎಂದರು.ಆಯೋಜಕ ಅಚ್ಚರಡಿ ಪೂರ್ಣೇಶ್ ಮಾತನಾಡಿ, “ಹಾನುಬಾಳು ಹೋಬಳಿಯ ಯುವಕರು ಹಾಗೂ ಸ್ನೇಹಿತರು ಒಗ್ಗಟ್ಟಿನಿಂದ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಎಲ್ಲರ ಸಹಕಾರದಿಂದ ಸ್ಪರ್ಧೆ ಯಶಸ್ವಿಯಾಗಿ ನಡೆಯುತ್ತಿದೆ. ಮುಂದಿನ ವರ್ಷ ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಡೆಸುವ ಉದ್ದೇಶವಿದೆ,” ಎಂದು ಹೇಳಿದರು.ಸ್ಪರ್ಧೆಯ ಮತ್ತೊಬ್ಬ ಆಯೋಜಕಿ ನಯನ ಮಾತನಾಡಿ, “ಇಂದು ಫೋರ್ ವೀಲರ್ ವಿಭಾಗದಲ್ಲಿ 800 ಸಿಸಿ, 1000 ಸಿಸಿ, 1400 ಸಿಸಿ ಸೇರಿದಂತೆ ವಿವಿಧ ವಿಭಾಗಗಳ ಸ್ಪರ್ಧೆಗಳು ನಡೆಯುತ್ತಿವೆ. ನಾಳೆ ಟೂ ವೀಲರ್ ವಿಭಾಗದಲ್ಲಿ ಟಿವಿಎಸ್ ಓಪನ್ ಕ್ಲಾಸ್ ಸೇರಿದಂತೆ ಹಲವು ವಿಭಾಗಗಳ ಬೈಕ್ ರೇಸ್ ನಡೆಯಲಿದೆ” ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಕ್ಷಕ ಸ್ನೇಕ್ ದಸ್ತಗೀರ್ ಮಾತನಾಡಿ ಆಯೋಜಕರು ಅತ್ಯಂತ ಶಿಸ್ತಿನಿಂದ ಸ್ಪರ್ಧೆ ನಡೆಸುತ್ತಿದ್ದಾರೆ. ಸ್ಪರ್ಧಿಗಳಿಗೆ ಹಾಗೂ ಪ್ರೇಕ್ಷಕರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.ಹಾನುಬಾಳಿನಲ್ಲಿ ಎರಡು ದಿನಗಳ ಕಾರ್ ರೇಸ್ ಸ್ಪರ್ಧೆ
ವಿಧ ಸಿಸಿ ವಿಭಾಗಗಳಲ್ಲಿ ಕಾರ್ ರೇಸ್ ನಡೆಯುತ್ತಿದೆ. ನಾಳೆ ಬೈಕ್ ರೇಸ್ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಖ್ಯಾತ ಬೈಕ್ ಸವಾರರು ಭಾಗವಹಿಸಲಿದ್ದಾರೆ. ಸ್ಥಳೀಯರಿಗಾಗಿ ವಿಶೇಷ ವಿಭಾಗವನ್ನೂ ಕಲ್ಪಿಸಲಾಗಿದೆ ಎಂದರು. ಇದಲ್ಲದೆ, ಸ್ಪರ್ಧೆಗೆ ಅಗತ್ಯವಾದ ಟ್ರ್ಯಾಕ್ ವ್ಯವಸ್ಥೆ, ಪ್ರೇಕ್ಷಕರ ಸೌಲಭ್ಯ, ಊಟೋಪಚಾರ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ಅವರು ತಿಳಿಸಿದರು. ಮಳೆಯ ಕಾರಣ ಜನಸಂದಣಿ ಸ್ವಲ್ಪ ಕಡಿಮೆಯಾಗಿದ್ದರೂ, ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ ಎಂದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.